ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆಯಲ್ಲಿ ಭೂಗೋಳ ಮತ್ತು ಗಣಿತಶಾಸ್ತ್ರದ ಪ್ರಯೋಗಾಲಯವನ್ನು ಅಕಾಡೆಮಿಕ್ಸ್ ಮತ್ತು ಟ್ರೈನಿಂಗ್ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಪರಿಷತ್, ಬೆಂಗಳೂರಿನ ನಿರ್ದೇಶಕರಾದ ಡಾ. ಸಿ. ಕೆ. ಮಂಜುನಾಥ್ ಅವರು ಉದ್ಘಾಟನೆ ನಡೆಸಿದರು.
ವಿದ್ಯಾರ್ಥಿಗಳಿಗೆ ಬೋಧಿಸುವಾಗ ಅವರ ಸ್ಪಷ್ಟಪ್ರತಿಪತ್ತಿಗೆ ಪ್ರಯೋಗಾಲಯಗಳು ಅತ್ಯಂತ ಸಹಕಾರಿಗಳಾಗುತ್ತವೆ. ಶ್ರೀ ಸಿದ್ಧಿವಿನಾಯಕ ವಸತಿಶಾಲೆಯಲ್ಲಿ ಗಣಿತ ಮತ್ತು ಭೂಗೋಳ ಅಧ್ಯಾಪಕರ ಬೇಡಿಕೆಯಂತೆ ಶ್ರೀ ಸಿದ್ಧಿ ಪ್ರತಿಷ್ಠಾನ ಹಟ್ಟಿಅಂಗಡಿಯ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರರ ಮುತುವರ್ಜಿಯಿಂದ ಈ ’ಮಿಹಿರ’ ಎಂಬ ನಾಮಾಂಕಿತವಾದ ಪ್ರಯೋಗಾಲಯ ಸಿದ್ಧವಾಗಿತ್ತು.
ಬೋಧನೆಗೆ ಅಗತ್ಯ ಪರಿಕರಗಳು, ವೃತ್ತವೇ ಮೊದಲಾದ ಆಕೃತಿಗಳ ಪರಿಚಯಾತ್ಮಕವಾದ ಪ್ರತಿಕೃತಿಗಳು, ಭಾರತೀಯ ಗಣಿತ ಸಾಧಕರ ಛಾಯಾಚಿತ್ರಗಳು, ಭೌಗೋಳಿಕವಾದ ಪರಿಸರಜ್ಞಾನ, ಭೂಮಿಯ ಒಳಪದರಗಳ ಪ್ರತಿಕೃತಿಗಳು, ಸೌರಮಂಡಲಾದಿ ಆಕಾಶಕಾಯಗಳ ಗತಿ ಬೋಧಕ ಸಾಮಗ್ರಿಗಳು, ದೇಶ ವಿದೇಶಗಳ ಪ್ರದೇಶ ಪರಿಚಯಾತ್ಮಕ ಛಾಯಾಚಿತ್ರಗಳನ್ನು ಇದು ಒಳಗೊಂಡಿದೆ.
ಈ ಸಂದರ್ಭದಲ್ಲಿ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಅಧ್ಯಕ್ಷರಾದ ಎಲ್. ಟಿ. ತಿಮ್ಮಪ್ಪನವರು, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಉಪಾಧ್ಯಕ್ಷರಾದ, ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿಗಳಾದ ವೇದಮೂರ್ತಿ ಬಾಲಚಂದ್ರ ಭಟ್ಟರು, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎಸ್. ನಾರಾಯಣ ರಾವ್, ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಟ್ರಸ್ಟಿಗಳಾದ ಎನ್. ಪಿ. ನಾರಾಯಣ ಶೆಟ್ಟಿ, ಶಾಲೆಯ ಆಡಳಿತಾಧಿಕಾರಿಗಳಾದ ವೀಣಾ ರಶ್ಮಿ ಎಂ., ಉಪ ಪ್ರಾಂಶುಪಾಲರಾದ ರಾಮ ದೇವಾಡಿಗ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಸುಜಾತಾ ಸದಾರಾಮ, ಪೋಷಕ- ಶಿಕ್ಷಕ – ಶಿಕ್ಷಕೇತರ ವೃಂದ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










