ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂಡಲಕಟ್ಟೆಯ ಐಎಂಜೆ ಇನ್ಸ್ಟಿಟ್ಯೂಷನ್ಸ್‌ನಲ್ಲಿ ನೂತನ ವ್ಯಾಯಾಮ ಶಾಲೆಯನ್ನು ಚೇರ್ಮನ್‌ರಾದ ಸಿದ್ಧಾರ್ಥ್ ಜೆ. ಶೆಟ್ಟಿ ಅವರು ವಿದ್ಯಾರ್ಥಿಗಳೊಂದಿಗೆ ಉದ್ಘಾಟಿಸಿದರು.
ಕೇಬಲ್ ಕ್ರಾಸ್ಓವರ್, ಪೆಕ್ ಡೆಕ್ ಫ್ಲೈ ಮೆಷಿನ್,ಲೆಗ್ ಪ್ರೆಸ್ ಮೆಷಿನ್, ಲ್ಯಾಟ್ ಪುಲ್‌ಡೌನ್ ಮೆಷಿನ್ ಮುಂತಾದ ಹಲವಾರು ಉಪಕಾರಣಗಳನ್ನು ಈ ವ್ಯಾಯಮ ಶಾಲೆಯು ಒಳಗೊಂಡಿದೆ ಮತ್ತು ವಿದ್ಯಾರ್ಥಿಗಳ ಇತ್ತೀಚೆಗಿನ ಅವಶ್ಯಕತೆಗೆ ತಕ್ಕಂತೆ ಈ ಜಿಮ್ ವಿನ್ಯಾಸ ಗೊಳಿಸಲಾಗಿದ್ದು ಅನುಭವೀ ತರಬೇತುದಾರರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದೆಂದು ಫಿಸಿಕಲ್ ಡೈರೆಕ್ಟರ್ ಗಳಾದ ಡಾ. ಆರ್ ನವೀನ್ ಮತ್ತು ಪ್ರವೀಣ್ ಖಾರ್ವಿ ಅವರು ತಿಳಿಸಿದರು.
ಹುಡುಗರಿಗೆ ಹುಡುಗಿಯರಿಗೆ ಪ್ರತ್ಯೇಕ ಸಮಯವಾಕಾಶವನ್ನು ನೀಡಲಾಗಿದ್ದು, ವಿದ್ಯಾರ್ಥಿಗಳು ಈ ಸೌಕರ್ಯವನ್ನು ಪಡೆದುಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ಅವರು ಹೇಳಿದರು.
ಸಂಸ್ಥೆಯ ಬ್ರಾಂಡ್ ಬಿಲ್ಡಿಂಗ್ ನಿರ್ದೇಶಕರಾದ ಡಾ. ರಾಮಕೃಷ್ಣ ಹೆಗಡೆ, ಎಂಐಟಿಯ ಉಪ ಪ್ರಾಂಶುಪಾಲರಾದ ಡಾ. ಮೆಲ್ವಿನ್ ಡಿಸೋಜ, ಐಎಂಜೆಐಎಸ್ ಸಿಯ ಪ್ರಾಂಶುಪಾಲರಾದ ಡಾ. ಪ್ರತಿಭಾ ಎಂ. ಪಟೇಲ್, ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ರೂಪಶ್ರೀ, ಎಲ್ಲೈಡ್ ಹೆಲ್ತ್ ಸೈನ್ಸ್ ಡೀನ್ ಡಾ. ಪದ್ಮಚರನ್ ಸ್ವೈನ್ ಮತ್ತು ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.










