ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸಿಐಎಸ್‌ಸಿಇ ನಡೆಸುತ್ತಿರುವ ಗೇಮ್ಸ್ ಮತ್ತು ಸ್ಪೋರ್ಟ್ಸ್ 2025-26ರಲ್ಲಿ ವಿವಿಧ ಶಾಲೆಗಳಲ್ಲಿ ಜೂನ್ ಮತ್ತು ಜುಲೈ ತಿಂಗಳುಗಳಲ್ಲಿ ನಡೆದ ವಲಯ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ 14 ವರ್ಷದೊಳಗಿನ ವಯೋಮಿತಿಯ ಕರಾಠೆಯಲ್ಲಿ ರಾಹುಲ್ ಉಳ್ಳೂರ್, ಆತ್ಮಿಕಾ ಉಳ್ಳೂರ್, 17 ವರ್ಷದೊಳಗಿನ ವಯೋಮಿತಿಯಲ್ಲಿ ಶುಭನ್ ಪುತ್ರನ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
14 ವರ್ಷದೊಳಗಿನ ವಯೋಮಿತಿಯ ಟೇಬಲ್ ಟೆನ್ನೀಸ್ ಆಟದಲ್ಲಿ ಭಾಗವಹಿಸಿ 8ನೇ ತರಗತಿಯ ಶುಭಾಂಗಿ ಮತ್ತು 17 ವರ್ಷದೊಳಗಿನ ವಯೋಮಿತಿಯಲ್ಲಿ 9ನೇ ತರಗತಿಯ ಶ್ರೇಯಾ ಟಿ, ಸ್ಪೂರ್ತಿ ಎಸ್ ಪಿ, ಮಹೇಶ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
14 ವರ್ಷದೊಳಗಿನ ವಯೋಮಿತಿಯ ಚೆಸ್ ಆಟದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಅರ್ಜುನ್ ಕೆ ಶೆಟ್ಟಿ ಮತ್ತು ಕೃಶವ್ ಚಿತ್ತಾಪುರ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
14 ವರ್ಷದೊಳಗಿನ ವಯೋಮಿತಿಯ ಹುಡುಗಿಯರ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಶುಭಾಂಗಿ ಎಸ್ ಮಂಕಿಕರ್ ಮತ್ತು 17 ವರ್ಷದೊಳಗಿನ ವಯೋಮಿತಿಯ ಹುಡುಗಿಯರಲ್ಲಿ ಶ್ರೇಯಾ ಟಿ ಮತ್ತು ಸ್ಫೂರ್ತಿ ಪಾಟೀಲ್ ಹಾಗೂ 17 ವರ್ಷದೊಳಗಿನ ವಯೋಮಿತಿಯ ಹುಡುಗರಲ್ಲಿ ಮಹೇಶ್ ಪಿ. ಪಾಟೀಲ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
14 ವರ್ಷದೊಳಗಿನ ವಯೋಮಿತಿಯ ಹುಡುಗರ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಪ್ರಜ್ವಲ್ ಎಮ್ ಬಿ. ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
17ವರ್ಷದೊಳಗಿನ ವಯೋಮಿತಿಯ ಹುಡುಗರ ಕಬಡ್ಡಿ ಸ್ಪರ್ಧೆಯಲ್ಲಿ ವಿಷ್ಣು ಪಿ., ತನ್ಮಯ್ ಯು. ಎಸ್, ಶ್ರೇಯಸ್ ಆರ್ ಎಸ್, ಪ್ರಜ್ವಲ್ ಆರ್ ಹೆಗಡೆ, ಧೀರಜ್ ಕೆ. ಸಿ, ಚಂದನ್ ಎಮ್. ನಾಯ್ಕ್ ಮತ್ತು 17 ವರ್ಷದೊಳಗಿನ ವಯೋಮಿತಿಯ ಹುಡುಗಿಯರಲ್ಲಿ ಸಂಜನಾ ಎಸ್ ಬಿ, ತನಿಷ್ಕಾ ವಿ. ಎಮ್, ಗ್ರೀಷ್ಮಾ ಬಿ, ಭವ್ಯಶ್ರೀ ಎಸ್ ಶೆಟ್ಟಿ, ಶ್ರದ್ಧಾ ಎ ಬಿರಾದರ್, ವಿಜಯಲಕ್ಷ್ಮಿ ಎಚ್ ಹಾಗೂ 14 ವರ್ಷದೊಳಗಿನ ಹುಡುಗರ ವಲಯ ಮಟ್ಟದ ಸ್ಪರ್ಧೆಯಲ್ಲಿ ವೇದಿತ್ ವಿ ಡಿ, ಪೃಥುಲ್ ಶೆಟ್ಟಿ, ಸಾತ್ವಿಕ್ ಎನ್ ಟಿ, ತ್ರಿಶೂಲ್ ಕೆ ಎಮ್, ಸೃಜನ್ ಡಿ, ಅರುಣ್ ಎಸ್ ಎ ಮತ್ತು 14 ವರ್ಷದೊಳಗಿನ ಹುಡುಗಿಯರಲ್ಲಿ ಋಷಿಕಾ, ಆದ್ಯಾ ಶೆಟ್ಟಿ, ಮಾಣಿಕ್ಯ ಎ ಡಿ, ಯಶಸ್ವಿನೀ, ದೀಕ್ಷಾ ಕೆ. ಸಿ, ನವ್ಯಾ ಎಮ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
14 ವರ್ಷದೊಳಗಿನ ವಯೋಮಿತಿಯ ಹುಡುಗರ ಖೊಖೋ ಸ್ಪರ್ಧೆಯಲ್ಲಿ ಸಮರ್ಥ ಎಮ್ ಎ, ಶರತ್ ದೇಸಾಯಿ, ಹುಡುಗಿಯರಲ್ಲಿ ಅಪೂರ್ವ ವ್ಯಾಪಾರಿ ಮತ್ತು ಶುಚಿ ಗೌಡ ಮತ್ತು 17 ವರ್ಷದೊಳಗಿನ ವಯೋಮಿತಿಯ ಹುಡುಗರ ಸ್ಪರ್ಧೆಯಲ್ಲಿ ವೃಷಭೇಂದ್ರ, ಸೃಜನ್ ಆರ್ ಎಚ್, ಸಚೇತ್ ಎ ಪಿ, ಪ್ರೀತಮ್ ಡಿ ಎಮ್, ಗಣೇಶ್ ಎಮ್ ಕೆ, ಭಾರಧ್ವಾಜ ಭಟ್, ಹುಡುಗಿಯರಲ್ಲಿ ಅನುಷ್ಕಾ, ಖುಷೀ ಬಿ ಟಿ, ಮನಸ್ವೀ, ಸುಕೃತಿ, ಪುಷ್ಪಾಂಜಲಿ, ಸಂಪ್ರೀತಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
17 ವರ್ಷದೊಳಗಿನ ವಯೋಮಿತಿಯ ಹುಡುಗರ ಹ್ಯಾಂಡ್ ಬಾಲ್ ಸ್ಪರ್ಧೆಯಲ್ಲಿ ಶರತ್ ಪಿ ಎಮ್, ಗಂಭೀರ್ ಜಿ ಗೌಡ, ಹುಡುಗಿಯರಲ್ಲಿ ಅನಿಕಾ ಎಚ್ ವೈ, ಶಕುಂತಲಾ, ಸಂಜನಾ ಬಿ ಡಿ, ಅಪೂರ್ವ ಎಸ್, ಮಧುರಾ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
14 ವರ್ಷದೊಳಗಿನ ವಯೋಮಿತಿಯ ಹುಡುಗಿಯರ ಬಾಸ್ಕೆಟ್ ಬಾಲ್ ಸ್ಪರ್ಧೆಯಲ್ಲಿ ಸಾನ್ವೀ ಕೆ ಎಸ್ ಮತ್ತು 17 ವರ್ಷದೊಳಗಿನ ವಯೋಮಿತಿಯ ಹುಡುಗರ ಸ್ಪರ್ಧೆಯಲ್ಲಿ ಪ್ರಕಾಶ್ ಆರ್ ಕೆ, ಅಭಿಷೇಕ್ ಎಮ್ ಆರ್ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
17 ವರ್ಷದೊಳಗಿನ ವಯೋಮಿತಿಯ ಹುಡುಗರ ಶಟಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸುಬೋಧ ಛಾತ್ರ, ಆಂಜನೇಯ ಭಟ್ಕಳ, ಅಥರ್ವ ಮೇತ್ರಿ ಮತ್ತು 14 ವರ್ಷದೊಳಗಿನ ವಯೋಮಿತಿಯ ಹುಡುಗಿಯರಲ್ಲಿ ಪೂರ್ವೀ ಎಸ್. ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.
ಅವರನ್ನು ಹಟ್ಟಿಅಂಗಡಿಯ ಶ್ರೀ ಸಿದ್ಧಿ ಶೈಕ್ಷಣಿಕ ಪ್ರತಿಷ್ಠಾನದ ಕಾರ್ಯದರ್ಶಿ ಹಾಗೂ ಶಾಲಾ ಪ್ರಾಂಶುಪಾಲರಾದ ಶರಣ ಕುಮಾರ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.















