ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜಾನುವಾರು ಅಕ್ರಮ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬೈಂದೂರು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳು ಬೈಂದೂರಿನ ಕಲಿನ ಮನೆ ನಿವಾಸಿ ರಮೇಶ್ ಮೊಗವೀರ (40) ಹಾಗೂ ಬೈಂದೂರಿನ ಗುಂಜನಗುಡ್ಡೆ ನಿವಾಸಿ ಅಬ್ದುಲ್ ಖಯೂಮ್ (26) ಎಂದು ತಿಳಿದು ಬಂದಿದೆ.
ಗುರುವಾರ ಮುಂಜಾನೆ ಬಂದ ಖಚಿತ ಮಾಹಿತಿ ಮೇರೆಗೆ ಬೈಂದೂರು ಪೊಲೀಸ್ ಠಾಣೆಯ ಪಿಎಸ್‌ಐ ತಿಮ್ಮೇಶ್ ಬಿ.ಎನ್ ನೇತೃತ್ವದ ತಂಡ ಹೇರೂರಿನ ಚಟ್ಗುಳಿ ಕಡೆಯಿಂದ ಬರುವ ರಸ್ತೆಯ ಗುಂಜನಗುಡ್ಡೆ ಬಳಿ ದಾಳಿ ನಡೆಸಿದ್ದಾರೆ. ಯಾವುದೇ ಅನುಮತಿ ಇಲ್ಲದೆ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನವನ್ನು ತಂಡ ತಡೆದಿದೆ ಎಂದು ತಿಳಿದು ಬಂದಿದೆ.
ಪೊಲೀಸರು ವಾಹನವನ್ನು ತಪಾಸಣೆ ನಡೆಸಿದಾಗ ವಾಹನದಲ್ಲಿ ಹಸುವನ್ನು ಅಕ್ರಮವಾಗಿ ಸಾಗಿಸುತ್ತಿರುವುದು ಕಂಡುಬಂದಿದೆ. ತಕ್ಷಣವೇ ಪೊಲೀಸರು ಹಸುವನ್ನು ರಕ್ಷಿಸಿದ್ದಾರೆ.










