ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಈ ಶೈಕ್ಷಣಿಕ ವರ್ಷದಿಂದ 2025 – 26ರಿಂದ ಕಂಪ್ಯೂಟರ್ ಸೈನ್ಸ್ ನಲ್ಲಿ ಸ್ನಾತಕೋತ್ತರ ಪದವಿ ಆರಂಭವಾಗಲಿದೆ.
ಬಿ. ಎಸ್. ಸಿ ಕಂಪ್ಯೂಟರ್ ಸೈನ್ಸ್ ಮತ್ತು ಬಿಸಿಎ ಪದವಿ ಶಿಕ್ಷಣ ಪಡೆದವರು ತಮ್ಮ ದಾಖಲಾತಿಯನ್ನು ಈ ಕೋರ್ಸ್ ಗೆ ಮಾಡಿಕೊಳ್ಳಬಹುದು ಎಂದು ಕಾಲೇಜಿನ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರತಿಷ್ಠಿತ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಅತ್ಯುತ್ತಮ ಮೂಲ ಸೌಕರ್ಯ ಮತ್ತು ಶೈಕ್ಷಣಿಕ ಸೌಲಭ್ಯಗಳಿವೆ. ಮುಖ್ಯವಾಗಿ ಪ್ರಧಾನಮಂತ್ರಿ ಕೌಶಲ್ಯ ಕೇಂದ್ರವಿದೆ. ಉತ್ತಮ ಶೈಕ್ಷಣಿಕ ವಾತಾವರಣವಿದ್ದು ಇಂಟರ್ನ್ಶಿಪ್, ಪ್ರಾಜೆಕ್ಟ್ ವರ್ಕ್, ಮೈನರ್ ರಿಸರ್ಚ್ ಪ್ರಾಜೆಕ್ಟ್ ಮಾಡಲು ಉತ್ತಮ ಅವಕಾಶವಿದೆ.
ವಿವಿಧ ಕಂಪನಿಗಳೊಂದಿಗೆ ಎಮ್.ಒ.ಯು ಮಾಡಿಕೊಂಡಿದ್ದು ವ್ರತ್ತಿ ಮಾರ್ಗದರ್ಶನ ಮತ್ತು ಉದ್ಯೋಗಾವಕಾಶ ಕೇಂದ್ರ ಈ ನೆಲೆಯಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ.
ಅನುಭವಿ ಉಪನ್ಯಾಸಕರು, ಸುಸಜ್ಜಿತ ಗ್ರಂಥಾಲಯ ಮತ್ತು ಪ್ರಯೋಗಾಲಯಗಳು, ವಿಭಾಗೀಯ ಗ್ರಂಥಾಲಯ ವಿದ್ಯಾರ್ಥಿನಿ ನಿಲಯ ಮ್ಯಾನೇಜ್ಮೆಂಟ್ ಸ್ಕಾಲರ್ಶಿಪ್ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಅಧ್ಯಯನಕ್ಕೆ ಪೂರಕ ವಾತಾವರಣವನ್ನು ಕಲ್ಪಿಸಿಕೊಡುತ್ತವೆ. ಪ್ರವೇಶಾತಿಗಾಗಿ ಕಾಲೇಜನ್ನು ಸಂಪರ್ಕಿಸಬಹುದು ಎಂದು ಕಾಲೇಜಿನ ಪ್ರಕಟಣೆಯಲ್ಲಿ ತಿಳಿಸಿದೆ















