ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಚೇಂಪಿ ವಿಶ್ವಜ್ಯೋತಿ ಮಹಿಳಾ ಬಳಗದ ನೇತೃತ್ವದಲ್ಲಿ ಕೋಟ ಶ್ರೀ ವಿರಾಡ್ವಿಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ, ಶ್ರೀ ವಿಶ್ವಕರ್ಮ ಕಲಾವೃಂದ ಆಶ್ರಯದಲ್ಲಿ ಸಂಘದ ಶ್ರೀ ವಿಶ್ವಕರ್ಮ ಸಾಂಸ್ಕೃತಿಕ ಸಭಾಭವನ ಸಾಲಿಗ್ರಾಮದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ, ಸಹಸ್ರ ಕುಂಕುಮಾರ್ಚನೆ ಇನ್ನಿತರ ಕಾರ್ಯಕ್ರಮ ಜರಗಿತು.
ಧಾರ್ಮಿಕ ಕಾರ್ಯಕ್ರಮದಲ್ಲಿ ಚೇಂಪಿ ವಿಶ್ವಜ್ಯೋತಿ ಮಹಿಳಾ ಬಳಗದ ಅಧ್ಯಕ್ಷೆ ರಮ್ಯ ರಮೇಶ್ ಆಚಾರ್ ದಂಪತಿಗಳು ಭಾಗವಹಿಸಿ, ಪೂಜಾ ವಿಧಿವಿಧಾನವನ್ನು ಪುರೋಹಿತ ಲಕ್ಷ್ಮೀಕಾಂತ್ ಶರ್ಮ ನೆರವೆರಿಸಿದರು.
ಕೋಟ ವಿರಾಡ್ವಶ್ವ ಬ್ರಾಹ್ಮಣ ಸಮಾಜೋದ್ಧಾರಕ ಸಂಘ ಸಾಲಿಗ್ರಾಮ ಅಧ್ಯಕ್ಷ ಸುಬ್ರಾಯ ಆಚಾರ್, ರಮೇಶ್ ಆಚಾರ್, ಗೌರವಾಧ್ಯಕ್ಷ ಜನಾರ್ದನ ಆಚಾರ್ ಚೇಂಪಿ, ಕೋಶಾಧಿಕಾರಿ ಕೃಷ್ಣಯ್ಯ ಆಚಾರ್ ಶ್ರೀಲಕ್ಷ್ಮೀ, ವಿಶ್ವಕಲಾವೃಂದದ ಅಧ್ಯಕ್ಷ ವೆಂಕಟೇಶ ಆಚಾರ್, ಉಪಾಧ್ಯಕ್ಷ ದಿನೇಶ್ ಆಚಾರ್ ಚೇಂಪಿ,ಮಹಿಳಾ ಬಳಗ ಉಪಾಧ್ಯಕ್ಷೆ ಸರಿತಾ ಚಂದ್ರ ಆಚಾರ್,ಕಾರ್ಯದರ್ಶಿ ಸಹನಾ ರಾಘವೇಂದ್ರ ಆಚಾರ್,ಕೋಶಾಧಿಕಾರಿ ಸುಶೀಲ ಸತೀಶ್ ಆಚಾರ್, ಗುರುಸೇವಾ ಪರಿಷತ್ತು ಅಧ್ಯಕ್ಷ ರಾಘವೇಂದ್ರ ಆಚಾರ್ ಇತರರು ಉಪಸ್ಥಿತರಿದ್ದರು. ಪ್ರಸಾದ ವಿತರಣೆ ನಂತರ ಅನ್ನಸಂತರ್ಪಣೆ ಕಾರ್ಯಕ್ರಮಗಳು ಜರಗಿತು.










