ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ವತ್ತಿನೆಣೆಯ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಠದ ಗುರು ರಾಘವೇಂದ್ರ ಟ್ರಸ್ಟ್ ಉಸ್ತುವಾರಿಯಲ್ಲಿ ಸೇವಾ ಸಂಗಮ ಶಿಶು ಮಂದಿರದ ಸಹಯೋಗದಲ್ಲಿ ಅರಣ್ಯ ಇಲಾಖೆಯ ನೆರವಿನೊಂದಿಗೆ ಶ್ರೀ ಗುರು ರಾಘವೇಂದ್ರ ವನದಲ್ಲಿ ಶಿಶುಮಂದಿರದ ಪುಟಾಣಿಗಳಿಂದ ವೈವಿದ್ಯಮಯ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.

ಟ್ರಸ್ಟ್‌ನ ಅಧ್ಯಕ್ಷರಾದ ಸೂಲಿಯಣ್ಣ ಶೆಟ್ಟಿ ಅವರ ನೇತೃತ್ವದಲ್ಲಿ ಉಪಾಧ್ಯಕ್ಷರಾದ ರಾಜು ಪೂಜಾರಿ ಅವರು, ಕಾರ್ಯದರ್ಶಿ ಮಂಜುನಾಥ್ ಶೆಟ್ಟಿ, ಸದಸ್ಯರುಗಳಾದ ದಿನೇಶ್, ರವೀಂದ್ರ ಶ್ಯಾನುಭಾಗ್, ದಿನಕರ್ ಶೆಟ್ಟಿ,ರಾಜು, ಪ್ರಕಾಶ್ ಮಾಕೋಡ್, ಸುಧಾಕರ ಪಿ ಹಾಗೂ ಅರ್ಚಕರಾದ ಮುರುಳಿ ಭಟ್, ರವೀಂದ್ರ ಕಿಣಿ ಸೇವಾ ಸಂಗಮ ಶಿಶು ಮಂದಿರದ ಸೌಮ್ಯ ಮಾತಾಜಿ, ಸುಮಾ, ಮಠದ ಸಿಬ್ಬಂದಿ ವರ್ಗ, ಶಿಶು ಮಂದಿರದ ಪುಟಾಣಿಗಳು, ಪದಾಧಿಕಾರಿಗಳು ಹಾಗೂ ಮಕ್ಕಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.










