ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಸಾಲಿಗ್ರಾಮ ವಲಯ ವಿಪ್ರ ಮಹಿಳಾ ತಂಡದಿಂದ ಶ್ರಾವಣ ಸಂಭ್ರಮ ಕಾರ್ಯಕ್ರಮ ಇತ್ತೀಚಿಗೆ ಸಾಲಿಗ್ರಾಮ ಗುರುನರಸಿಂಹ ದೇಗುಲದಲ್ಲಿ ಜರಗಿತು.
ಶ್ರೀ ಗುರುನರಸಿಂಹ ದೇಗುಲದ ಆಡಳಿತ ಮಂಡಳಿ ಅಧ್ಯಕ್ಷ ಡಾ. ಕೆ.ಎಸ್. ಕಾರಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿ, ಶ್ರಾವಣ ಮಾಸದ ಶನಿವಾರಕ್ಕೆ ಧಾರ್ಮಿಕ ಮಹತ್ವವಿದ್ದು ವಿಪ್ರ ಮಹಿಳಾ ತಂಡದಿಂದ ಆಯೋಜಿಸಲಾದ ಶ್ರಾವಣ ಸಂಭ್ರಮವು ಈ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗುನೀಡಿದೆ ಹಾಗೂ ಮಹಿಳೆಯರನ್ನು ಒಗ್ಗೂಡಿಸುವಲ್ಲಿ ಸಹಾಯಕವಾಗಿದೆ ಎಂದರು.
ವಿಪ್ರ ಮಹಿಳಾ ವಲಯ ಅಧ್ಯಕ್ಷೆ ವನಿತಾ ಉಪಾಧ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಆಡಳಿತ ಮಂಡಳಿ ಸದಸ್ಯ ಅನಂತಪದ್ಮನಾಭ ಐತಾಳ, ವಿಪ್ರ ಮಹಿಳಾ ತಂಡದ ಗೌರವಾಧ್ಯಕ್ಷೆ ಜಾಹ್ನವಿ ಹೇರ್ಳೆ, ಶ್ರೀ ಗುರುನರಸಿಂಹ ಸಾಂಸ್ಕೃತಿಕ ವೇದಿಕೆಯ ಸಂಚಾಲಕಿ ಸುಜಾತ ಬಾಯರಿ, ಜೆಸಿಐ ಸಂಸ್ಥೆಯ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.










