ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ರೋಟರಿ ಸಂಸ್ಥೆಗಳಲ್ಲಿ ಸದಸ್ಯರನ್ನು ಹೆಚ್ಚಿಸಿಕೊಂಡು ಸಂಸ್ಥೆಗಳನ್ನು ಬಲಪಡಿಸಬೇಕು. ರೋಟರಿ ಸಂಸ್ಥೆಗಳಲ್ಲಿ ಸದಸ್ಯರ ಸಂಖ್ಯೆ ಹೆಚ್ಚಾದರೆ ಅಂತರಾಷ್ಟ್ರೀಯ ರೋಟರಿಯ ಉದ್ದೇಶ ಸಫಲವಾಗುತ್ತದೆ. ಸಮಾಜಮುಖಿ ಮನುಕುಲದ ಸೇವೆ ಮಾಡಲು, ಮನುಕುಲದ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ರೋಟರಿ ಜಿಲ್ಲೆ 3182 ವಲಯ 1ರ ಅಸಿಸ್ಟೆಂಟ್ ಗವರ್ನರ್ ಐ. ನಾರಾಯಣ ಅಭಿಪ್ರಾಯಪಟ್ಟರು.

ಅವರು ರೋಟರಿ ಕ್ಲಬ್ ಗಂಗೊಳ್ಳಿ ಇವರ ಆಶ್ರಯದಲ್ಲಿ ತ್ರಾಸಿಯ ಪ್ರೆಸ್ಟೀಜ್ ಪ್ಯಾಲೇಸ್‌ನಲ್ಲಿ ’ಜೋನಲ್ ಸೆಮಿನಾರ್ ಆನ್ ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಎಂಡ್ ಪಬ್ಲಿಕ್ ಇಮೇಜ್ʼ ವಿಷಯದಲ್ಲಿ ನಡೆದ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರೋಟರಿಯ ಇತಿಹಾಸ, ಅದರ ಕಾರ್ಯಕ್ರಮಗಳು ಹಾಗೂ ಧ್ಯೇಯೋದ್ದೇಶಗಳ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡಿ ಅವರು ರೋಟರಿಯಲ್ಲಿ ಗಟ್ಟಿಯಾಗಿ ಉಳಿಯುವಂತೆ ಮಾಡಲು, ಉತ್ತಮ ನಾಯಕರಾಗಿ ಹೊರಹೊಮ್ಮುವಂತೆ ಮಾಡಿ ಮುಂದಿನ ದಿನಗಳಲ್ಲಿ ಈ ಸಮಾಜದ ಸೇವೆ ಮಾಡುವಂತಾಗಬೇಕು ಎಂಬ ಉದ್ದೇಶದಿಂದ ಕಾರ್ಯಾಗಾರ ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ರೋಟರಿ ಜಿಲ್ಲೆ 3182 ವಲಯ 2 ರ ಮಾಜಿ ಅಸಿಸ್ಟೆಂಟ್ ಗವರ್ನರ್ ಅಶೋಕ ಕುಮಾರ್ ಶೆಟ್ಟಿ ಕಾರ್ಯಾಗಾರ ಉದ್ಘಾಟಿಸಿದರು. ರೋಟರಿಯ ವಲಯ ತರಬೇತುದಾರ ಜಯಪ್ರಕಾಶ್ ಶೆಟ್ಟಿ ವೈ, ವಲಯ ಸೇನಾನಿಗಳಾದ ಪ್ರಸಾದ್ ಪ್ರಭು, ಕೌಶಿಕ್ ಯಡಿಯಾಳ್, ಪದಾಧಿಕಾರಿಗಳಾದ , ಶ್ರೀನಾಥ ರಾವ್, ಪ್ರದೀಪ್ ಡಿ.ಕೆ., ಸುಗುಣಾ ಆರ್.ಕೆ. ಮೊದಲಾದವರು ಉಪಸ್ಥಿತರಿದ್ದರು.
ಮಾಜಿ ಅಸಿಸ್ಟೆಂಟ್ ಗವರ್ನರ್ ಶೇಖರ ಶೆಟ್ಟಿ ಅವರು ಮೆಂಬರ್‌ಶಿಪ್ ಡೆವಲಪ್‌ಮೆಂಟ್ ಬಗ್ಗೆ ಮತ್ತು ಡಾ. ಉಮೇಶ ಪುತ್ರನ್ ಅವರು ಪಬ್ಲಿಕ್ ಇಮೇಜ್ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.
ರೋಟರಿ ಕ್ಲಬ್ ಗಂಗೊಳ್ಳಿ ಅಧ್ಯಕ್ಷ ಕೃಷ್ಣ ಪೂಜಾರಿ ಸ್ವಾಗತಿಸಿದರು. ಉಮೇಶ್ ಮೇಸ್ತ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಂದ್ರಕಲಾ ತಾಂಡೇಲ ಮತ್ತು ಕೆ.ರಾಮನಾಥ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ರಾಮನಾಥ ಚಿತ್ತಾಲ್ ವಂದಿಸಿದರು.















