ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಇಲ್ಲಿನ ಕಾರ್ಕಡ ಗೆಳೆಯರ ಬಳಗದ ಅಧ್ಯಕ್ಷ ಸಮಾಜ ಸೇವೆಯಲ್ಲಿ ಸಾಕಷ್ಟು ವರ್ಷಗಳಿಂದ ಶ್ರಮಿಸುತ್ತಿರುವ ಕೆ. ತಾರಾನಾಥ ಹೊಳ್ಳ ದಂಪತಿಗಳನ್ನು ಕಾರ್ಕಡ ನೆಲ್ಲಿಬೆಟ್ಟು ಸಾರ್ವಜನಿಕ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು, ಸಮಿತಿಯ ಪ್ರಮುಖರಾದ ನರಸಿಂಹ ದೇವಾಡಿಗ, ಅಯ್ಯಪ್ಪ ದೇವಾಡಿಗ, ಗೋಪಾಲ ದೇವಾಡಿಗ, ತಮ್ಮಯ್ಯ, ಚಂದ್ರ ಆಚಾರ್ ಮತ್ತಿತರ ಸಮಿತಿಯ ಪದಾಧಿಕಾರಿಗಳು ಇದ್ದರು.










