Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕೋಟ ಗಮನ ಸೆಳೆದ ಗೀತಾನಂದದ ಪರಿಸರಸ್ನೇಹಿ ಗಣೇಶೋತ್ಸವ, ಸಾವಿರಾರು ಮಂದಿಭಾಗಿ
    ಊರ್ಮನೆ ಸಮಾಚಾರ

    ಕೋಟ ಗಮನ ಸೆಳೆದ ಗೀತಾನಂದದ ಪರಿಸರಸ್ನೇಹಿ ಗಣೇಶೋತ್ಸವ, ಸಾವಿರಾರು ಮಂದಿಭಾಗಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕೋಟ:
    ಇಲ್ಲಿನ ಕೋಟದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ನಡೆಯುತ್ತಿರುವ ಗಣೇಶೋತ್ಸವಕ್ಕೆ ಸುವರ್ಣ ಮಹೋತ್ಸವ ಸಂಭ್ರಮ ಈ ಹಿನ್ನಲ್ಲೆಯಲ್ಲಿ ಸತತ 9ದಿನಗಳ ವಿಜೃಂಭಣೆಯ ಕಾರ್ಯಕ್ರಮಗಳು ಕೋಟದ ಅಮೃತೇಶ್ವರೀ ದೇಗುಲದಲ್ಲಿ ಗೀತಾನಂದ ದರ್ಬಾರ್ ವೈಭವದ  ಸಭಾಂಗಣದಲ್ಲಿ ದೊಡ್ಡ ಗಣೇಶನಿಗೆ ವಿಶೇಷ ಪೂಜೆ ಧಾರ್ಮಿಕ ವಿಧಿ ವಿಧಾನಗಳು ನಡೆಯುತ್ತಿದೆ.

    Click Here

    Call us

    Click Here

    ಪ್ರತಿದಿನ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಭಾಗಿಯಾಗುತ್ತಿದ್ದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗುತ್ತಿದೆ.

    ಇದೇ ಸೆ.4ರಂದು ಗಣೇಶೋತ್ಸವ ಸಮಾಪನಗೊಳ್ಳಲಿದ್ದು ಕೋಟದ ರಾಷ್ಟ್ರೀಯ ಹೆದ್ದಾರಿ ಮೆರವಣಿಗೆ ಮೂಲಕ ಪಡುಕರೆ ಕಡಲಲ್ಲಿ ಗಣೇಶ ಲೀನಗೊಳ್ಳಲಿದ್ದಾನೆ.

    ಇಲ್ಲಿನ ಸಮಿತಿಯ ಗೌರವಾಧ್ಯಕ್ಷ, ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಕನಸಿನ ಯೋಜನೆಯಂತೆ ಈ ಬಾರಿಯ ಸುವರ್ಣ ಮಹೋತ್ಸವವನ್ನು ಪರಿಸರಸ್ನೇಹಿ ಗಣೇಶೋತ್ಸವವಾಗಿಸುವ ನಿಟ್ಟಿನಲ್ಲಿ  ದಿನಂಪ್ರತಿ ಗಣೇಶೋತ್ಸವಕ್ಕೆ ಆಗಮಿಸಿದ ಭಕ್ತಾಧಿಗಳಿಗೆ ಹಸಿರು ಗಿಡ ನೀಡುವ ಹಾಗೂ ಬಟ್ಟೆ ಚೀಲ ವಿತರಿಸಿ, ಪ್ಲಾಸ್ಟಿಕ್ ಮುಕ್ತ ಗಣೇಶೋತ್ಸವವಾಗಿಸಲು ಪಣತೊಟ್ಟು ಗೀತಾನಂದದ ಸೇವಕರು ಕಾರ್ಯನಿರ್ವಹಿಸುತ್ತಿದ್ದಾರೆ.ಇದಕ್ಕಾಗಿ ಈಗಾಗಲೇ 5ಸಾವಿರ ಗಿಡಗಳನ್ನು ಕಾಯ್ದಿರಿಸಿ ಎಂಟನೇ ದಿನ ಮಂಗಳವಾರದವರೆಗೆ ಮೂರವರೆ ಸಾವಿರ ಗಿಡಗಳನ್ನು ಭಕ್ತಾಧಿಗಳಿಗೆ ಹಂಚಿಕೆ ಮಾಡಿದ್ದಾರೆ.ಅಲ್ಲದೆ  ಐವತ್ತು ವಿವಿಧ ರೀತಿಯ ಗಣಪ ಭಕ್ತರನ್ನು ವಿಶೇಷವಾಗಿ ಗಮನ ಸೆಳೆಯುತ್ತಿದ್ದಾನೆ.

    ಸುವರ್ಣ ಮಹೋತ್ಸವದ ಅಂಗವಾಗಿ ದಿನಂಪ್ರತಿ ಕಾರ್ಯಕ್ರಮಗಳೊಂದಿಗೆ ಕೋಟದ ದೊಡ್ಡ ಗಣೇಶನಿಗೆ ಮಂಗಳವಾರ ವೇ.ಮೂ ಸುಬ್ರಹ್ಮಣ್ಯ ಅಡಿಗ ನೇತೃತ್ವದಲ್ಲಿ  ಗಣಹೋಮ ಕಾರ್ಯಕ್ರಮಗಳು ಜರಗಿದವು.

    Click here

    Click here

    Click here

    Call us

    Call us

    ಸೇವಾಕರ್ತರಾಗಿ ಗಿರಿಜಾ ಕಂಡ್ಲೂರು ನರಸಿಂಹ ಜೋಗಿ ಭವಾನಿ ಕಂಗನ್ ಸ್ಟೋರ್ಸ್ ಬೆಂಗಳೂರು ಇದರ ಮಾಲಿಕ ಚಂದ್ರಶೇಖರ ಜೋಗಿ, ಶ್ರೀನಿವಾಸ ಜೋಗಿ, ರಾಜಶೇಖರ ಜೋಗಿ, ಭಾರ್ಗವ ಜೋಗಿ ಇವರು ಭಾಗಿಯಾಗಿ ದೇವರ ಪ್ರಸಾದವನ್ನು ಗೌರವಾಧ್ಯಕ್ಷ ಆನಂದ್ ಸಿ. ಕುಂದರ್ ಮೂಲಕ ಸ್ವೀಕರಿಸಿದರು. ವಿವಿಧ ಭಜನಾ ತಂಡಗಳಿಂದ ಭಜನೆ,ರಸಮಂಜರಿ, ಜಾದೂ ಪ್ರದರ್ಶನ,ಹನುಮಗಿರಿ ಮೇಳದವರಿಂದ ಬ್ರಹ್ಮಕಪಾಲ ಯಕ್ಷಗಾನ ಕಾರ್ಯಕ್ರಮಗಳು ಜರಗಿದವು.

    ಗಣೇಶೋತ್ಸವ ಸಮಿತಿಯ ಪ್ರಮುಖರಾದ ಚಂದ್ರ ಆಚಾರ್, ಚಂದ್ರ ಪೂಜಾರಿ, ಗಣೇಶ್ ಪೂಜಾರಿ, ಜೀವನ್ ಕದ್ರಿಕಟ್ಟು, ಸುಧೀರ್ ಪೂಜಾರಿ,ಅಮೃತ್ ಜೋಗಿ,ಕೋಟ ಅಮೃತೇಶ್ವರೀ ದೇಗುಲದ ಟ್ರಸ್ಟಿ ಗಣೇಶ್ ನೆಲ್ಲಿಬೆಟ್ಟು, ಮಾಜಿ ಟ್ರಸ್ಟಿ ಸುಬ್ರಾಯ ಆಚಾರ್,ಅರ್ಚಕರಾದ ಸುಬ್ರಾಯ ಜೋಗಿ, ರೂಪೇಶ್ ಜೋಗಿ, ದಿನೇಶ್ ಜೋಗಿ, ರಾಘವೇಂದ್ರ ಮತ್ತಿತರರು ಇದ್ದರು.

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    56ನೇ ರೈತ ಪುರಸ್ಕಾರಕ್ಕೆ ಶೇಖರ್ ಪೂಜಾರಿ ಗುಂಡ್ಮಿ ಆಯ್ಕೆ

    20/08/2026

    ನಮ್ಮಗೆ ಸರಕಾರದ ಪ್ರೋತ್ಸಾಹಧನ ಬೇಡ ಕನಿಷ್ಟ ದಿನಗೂಲಿ ನೀಡಿ: ಹೈನುಗಾರರ ಬೇಡಿಕೆ

    20/08/2026

    ಅಗಸ್ಟ್ 23ರಂದು ಬೈಂದೂರಿನಲ್ಲಿ ʼಗಮ್ಮತ್ತ್ʼ ಕಾರ್ಯಕ್ರಮ. ದಿನವಿಡಿ ಹತ್ತಾರು ವಿಶೇಷತೆಗಳು

    20/08/2026
    Leave A Reply Cancel Reply

    7 + 7 =

    Call us

    Click Here

    Call us

    Call us

    Call us
    Highest Viewed Recently
    • 56ನೇ ರೈತ ಪುರಸ್ಕಾರಕ್ಕೆ ಶೇಖರ್ ಪೂಜಾರಿ ಗುಂಡ್ಮಿ ಆಯ್ಕೆ
    • ನಮ್ಮಗೆ ಸರಕಾರದ ಪ್ರೋತ್ಸಾಹಧನ ಬೇಡ ಕನಿಷ್ಟ ದಿನಗೂಲಿ ನೀಡಿ: ಹೈನುಗಾರರ ಬೇಡಿಕೆ
    • ಅಗಸ್ಟ್ 23ರಂದು ಬೈಂದೂರಿನಲ್ಲಿ ʼಗಮ್ಮತ್ತ್ʼ ಕಾರ್ಯಕ್ರಮ. ದಿನವಿಡಿ ಹತ್ತಾರು ವಿಶೇಷತೆಗಳು
    • ಸಾಸ್ತಾನದಿಂದ ಶ್ರೀ ಕ್ಷೇತ್ರ ತಿರುಪತಿಗೆ 16ನೇ ವರ್ಷದ ಬೃಹತ್ ಪಾದಯಾತ್ರೆ
    • ಮರವಂತೆ: ಅರಬ್ಬಿ ಸಮುದ್ರದಲ್ಲಿ ದೋಣಿ ಆಯತಪ್ಪಿ ಬಿದ್ದು ಮೀನುಗಾರ ಸಾವು

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.