ಸರಸ್ವತಿ ವಿದ್ಯಾಲಯದಲ್ಲಿ ಮಹಿಳಾ ವೇದಿಕೆ ವಿಚಾರ ಗೋಷ್ಠಿ.

Call us

Call us

Call us

ಗಂಗೊಳ್ಳಿ: ಪ್ರತಿಯೊಬ್ಬ ಪುರುಷನೂ ಮಹಿಳೆಯರನ್ನು ಮತ್ತು ಅವರ ಅಭಿಪ್ರಾಯಗಳನ್ನು ಗೌರವಿಸುವುದನ್ನು ಕಲಿಯಬೇಕು.ಹಾಗಾದಾಗ ತನ್ನಿಂದ ತಾನೆ ಸಮಾಜದಲ್ಲಿ ಸ್ತ್ರೀ ಪುರುಷರ ನಡುವೆ ಸಮಾನತೆ ಎನ್ನುವುದು ನಿಜವಾದ ರೂಪದಲ್ಲಿ ಜಾರಿಗೆ ಬರುವುದನ್ನು ಕಾಣಲು ಸಾಧ್ಯ.ಎಂದು ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲ ಆರ್, ಎನ್.ರೇವಣ್‌ಕರ್ ಹೇಳಿದರು

Call us

Click Here

ಅವರು ಇತ್ತೀಚೆಗೆ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಇವರ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿನಿಯರಿಗಾಗಿ ವಿಶೇಷವಾಗಿ ಹಮ್ಮಿ ಕೊಂಡಿದ್ದ ಮಹಿಳಾ ವೇದಿಕೆ ಕಾರ‍್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು.

ಮಹಿಳಾ ಹಕ್ಕು ,ಶಿಕ್ಷಣ,ಸಮಾನತೆ, ಸಬಲೀಕರಣ ಇತ್ಯಾದಿ ವಿಚಾರಗಳ ಕುರಿತಂತೆ ವಿದ್ಯಾರ್ಥಿನಿಯರಾದ ಬಬಿತಾಶ್ರೀ, ಆಯಿಷಾ, ಅನುಷಾ, ಜಯಲಕ್ಷ್ಮಿ, ಪೂರ್ಣಿಮಾ, ಅಶ್ವಿನಿ, ತನಿಶಾ, ಬಿಂದು, ರಾಧಿಕಾ, ದಿಶಾ, ಐಶ್ವರ್ಯ, ಲಾಸ್ಯ, ದಿವ್ಯಜ್ಯೋತಿ, ಸ್ವಾತಿ, ರಕ್ಷಿತಾ ಮತ್ತು ಸುಶ್ಮಿತಾ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು ಸರಸ್ವತಿ ವಿದ್ಯಾಲಯ ಕಾಲೇಜಿನ ಉಪನ್ಯಾಸಕಿಯರಾದ ಕವಿತಾ ಎಮ್ ಸಿ, ಆರ್.ಕೆ ಸುಗುಣ, ಸುಮತಿ ಉಡುಪ ಮತ್ತು ಸಿಂಡ್ರೆಲ್ಲಾ ಗೊನ್ಸಾಲ್ವಿಸ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಅನುಷಾ ಕಾರ‍್ಯಕ್ರಮ ನಿರೂಪಿಸಿದರು. ದೀಕ್ಷಾ ಧನ್ಯವಾದ ಅರ್ಪಿಸಿದರು.

ವರದಿ : ನರೇಂದ್ರ ಎಸ್ ಗಂಗೊಳ್ಳಿ

Leave a Reply