ಗಂಗೊಳ್ಳಿ : ಗಂಗೊಳ್ಳಿ ವಲಯ ಸವಿತಾ ಸಮಾಜದ ಅಧ್ಯಕ್ಷರಾಗಿ ಎಂ.ಶೇಖರ ಸುವರ್ಣ ಹಕ್ಲಾಡಿ (ಹೊಳ್ಮಗೆ) ಆಯ್ಕೆಯಾಗಿದ್ದಾರೆ. ಇತ್ತೀಚಿಗೆ ಜರಗಿದ ಸಂಘದ ಮಹಾಸಭೆಯಲ್ಲಿ ಇವರನ್ನು ಆಯ್ಕೆ ಮಾಡಲಾಯಿತು. ಕುಂದಾಪುರ ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸುಭಾಷ್ ಭಂಡಾರಿ ಗುಜ್ಜಾಡಿ, ಕಾರ್ಯದರ್ಶಿ ಸುಜಯ್ ಸುವರ್ಣ ವಕ್ವಾಡಿ ಮತ್ತು ಗಂಗೊಳ್ಳಿ ವಲಯದ ಹಿರಿಯ ವೃತ್ತಿಗಾರ ಮಹಾಬಲ ಭಂಡಾರಿ ಗುಜ್ಜಾಡಿ ಮೊದಲಾದವರು ಉಪಸ್ಥಿತರಿದ್ದರು.
ಮಂಜುನಾಥ ಸಾಲಿಯಾನ್ ತ್ರಾಸಿ (ಗೌರವಾಧ್ಯಕ್ಷ), ಶ್ರೀಧರ ಭಂಡಾರಿ ಗುಡ್ಡೆಯಂಗಡಿ (ಉಪಾಧ್ಯಕ್ಷ), ರಾಜೇಶ ಸುವರ್ಣ ಅರಾಟೆ (ಕಾರ್ಯದರ್ಶಿ), ರವೀಶ ಹೆಮ್ಮಾಡಿ (ಜತೆ ಕಾರ್ಯದರ್ಶಿ), ರಕ್ಷತ್ ಸುವರ್ಣ ವಂಡ್ಸೆ (ಕೋಶಾಧಿಕಾರಿ), ಲಕ್ಷ್ಮಣ ಸುವರ್ಣ ಮರವಂತೆ (ಕ್ರೀಡಾ ಕಾರ್ಯದರ್ಶಿ), ನಾಗರಾಜ ಭಂಡಾರಿ ತಲ್ಲೂರು, ರತ್ನಾಕರ ಭಂಡಾರಿ ಹೆಮ್ಮಾಡಿ, ಪ್ರಶಾಂತ ಭಂಡಾರಿ ಹೆಮ್ಮಾಡಿ, ಅಶೋಕ ಭಂಡಾರಿ ತ್ರಾಸಿ, ಶಂಕರ ಸುವರ್ಣ ಕಂಚುಗೋಡು, ಸುಧಾಕರ ಬಂಗೇರ ಗಂಗೊಳ್ಳಿ, ಸಂದೀಪ ಮರವಂತೆ (ಸಂಘಟನಾ ಸಮಿತಿ ಸದಸ್ಯರು), ದಿನೇಶ ಭಂಡಾರಿ ಗುಜ್ಜಾಡಿ, ಸುರೇಶ ಭಂಡಾರಿ ಬೆಣ್ಗೆರೆ, ಶೇಖರ ಸಾಲಿಯಾನ್ ಗಂಗೊಳ್ಳಿ, ಬಾಬು ಭಂಡಾರಿ ಗಂಗೊಳ್ಳಿ (ಮುಖ್ಯ ಸಲಹೆಗಾರರು) ಆಯ್ಕೆಯಾಗಿದ್ದಾರೆ.