ಕುಂದಾಪುರ: ಇಲ್ಲಿನ ಟಿ.ಟಿ. ರೋಡ್ ನಿವಾಸಿ ವಿ. ನಾಗಪ್ಪಯ್ಯ ಆಚಾರ್ಯ(63) ಅಲ್ಪಕಾಲದ ಅಸೌಖ್ಯದಿಂದ ಡಿ.09ರಂದು ನಿಧನರಾದರು. ಕುಂದಾಪುರದಲ್ಲಿ ಸುಮಾರು ೩೦ ವರ್ಷಗಳಿಗೂ ಅಧಿಕ ಕಾಲ ರಕ್ತ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದು ಪರಿಸರದಲ್ಲಿ ಡಾ. ನಾಗಪ್ಪ ಎಂದೇ ಹೆಸರುಗಳಿಸಿದ್ದರು. ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನಾನುರಾಗಿಯಾಗಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇರ್ವರು ಪುತ್ರಿಯರನ್ನು ಅಗಲಿದ್ದಾರೆ.











