ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ನಿಮಿತ್ತ ಕುಂದಾಪುರ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಆಯೋಜಿಸಿರುವ ‘ಸೇವಾ ಪಾಕ್ಷಿಕʼ ಕಾರ್ಯಕ್ರಮ ಅಂಗವಾಗಿ ತೆಕ್ಕಟ್ಟೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸ್ವಚ್ಛತೆ ಕಾರ್ಯಕ್ರಮಕ್ಕೆ ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎ. ಕಿರಣ್ ಕುಮಾರ್ ಕೊಡ್ಗಿ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಮೋದಿ ಅವರು ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿ ಮಾಡಿದ್ದು ಆಡಳಿತದಲ್ಲಿ ಹಲವು ಐತಿಹಾಸಿಕ ನಿರ್ಧಾರಗಳನ್ನು ತೆಗೆದುಕೊಂಡಿದ್ದು ಅವರ ವಿಕಸಿತ ಭಾರತದ ಸಂಕಲ್ಪ ಈಡಿರುವ ಕಾಲ ಸನಿಹತವಾಗಿದ್ದು ಅವರ 75ನೇ ಹುಟ್ಟುಹಬ್ಬ ಕುಂದಾಪುರ ಮಂಡಲದ ವಿವಿಧ ಮೋರ್ಚಗಳು ಸೇವಾ ಪಾಕ್ಷಿಕ ಅಭಿಯಾನದ ಮೂಲಕ ನೆರವೇರುತ್ತಿದ್ದು ಸದ್ರಿ ಈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು

ಸೇವಾ ಪಾಕ್ಷಿಕ ಅಭಿಯಾನದ ಸ್ವಚ್ಛತಾ ಕಾರ್ಯಕ್ರಮವನ್ನು ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್ ಇವರ ನೇತೃತ್ವದಲ್ಲಿ ನೆರವೇರಿತು.
ಈ ಸಂದರ್ಭದಲ್ಲಿ ಕುಂದಾಪುರ ಮಂಡಲ ಅಧ್ಯಕ್ಷ ಸುರೇಶ್ ಶೆಟ್ಟಿ, ಗೋಪಾಡಿ ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ, ವಕ್ವಾಡಿ ಸುಧೀರ್.ಕೆ.ಎಸ್, ಓಬಿಸಿ ಮೋರ್ಚದ ಪ್ರಧಾನ ಕಾರ್ಯದರ್ಶಿಗಳಾದ ನಾಗರಾಜ್ ಆಚಾರ್ಯ ಹಂಗಳೂರು, ಅಶೋಕ್ ಪೂಜಾರಿ ಸಾಲಿಗ್ರಾಮ, ಸುಧೀಂದ್ರ ಗಾಣಿಗ ತೆಕ್ಕಟ್ಟೆ, ಜಿಲ್ಲಾ ಕಾರ್ಯದರ್ಶಿ ಸದಾನಂದ ಬಳ್ಕೂರು, ಮಂಡಲ ಉಪಾಧ್ಯಕ್ಷರಾದ ಸುನೀಲ್ ಶೆಟ್ಟಿ ಹೇರಿಕುದ್ರು, ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ., ಎಸ್ ಸಿ ಮೋರ್ಚಾ ಅಧ್ಯಕ್ಷ ಮಂಜುನಾಥ್ ಬಳ್ಕೂರು, ಪಕ್ಷದ ಮುಖಂಡರಾದ ಕೆದೂರು ಸಂಪತ್ ಕುಮಾರ್ ಶೆಟ್ಟಿ, ತೆಕ್ಕಟ್ಟೆ ಗ್ರಾಮ ಪಂಚಾಯಿತಿಯನ್ನು ಸದಸ್ಯ ವಿನೋದ್ ದೇವಾಡಿಗ, ಯುವ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಅವಿನಾಶ್, ಉಳ್ತೂರು ಹಿಂದೂ ಸಂಘಟನೆಯ ಪ್ರಮುಖ ರಾದ ಶ್ರೀನಾಥ್ ಶೆಟ್ಟಿ ತೆಕ್ಕಟ್ಟೆ ಮತ್ತು ಶ್ರೀನಿಧಿ ಉಪಾಧ್ಯಾಯ ಕುಂಬಾಶಿ, ಮೋದಿಜಿ ಅವರ ಅಭಿಮಾನಿಗಳು ಉಪಸಿತರಿದ್ದರು.










