ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಶಿಕ್ಷಣದಲ್ಲಿ ಪದವಿಯ ಜೊತೆಗೆ ಜೀವನ ಮೌಲ್ಯಗಳು ಅತ್ಯವಶ್ಯಕವಾಗಿ ಬೇಕಾಗುತ್ತದೆ. ಉದ್ಯೋಗ, ಪದವಿ, ಶಿಕ್ಷಣ ಇವೆಲ್ಲವೂಗಳಿಗಿಂತ ಉತ್ತಮ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಜೀವನವನ್ನು ಮೌಲ್ಯಯುತ ಮತ್ತು ನೈತಿಕವಾಗಿ ರೂಪಿಸಿಕೊಳ್ಳುವ ಕುರಿತು ತಿಳುವಳಿಕೆ ಬೇಕಾಗುತ್ತದೆ. ಮೊದಲು ನೖತಿಕತೆ ಮತ್ತು ಒಳ್ಳೆಯತನವನ್ನು ಕಲಿಯಬೇಕು ಎಂದು ಕುಂದೇಶ್ವರ ದೇವಸ್ಥಾನದ ಆಡಳಿತ ಮೋಕ್ತೇಸರರು ವಾಸುದೇವ ಯಡಿಯಾಳಿ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಭಂಡಾರ್ಕಾರ್ಸ್ ಕಾಲೇಜು ಮತ್ತು ಕುಂದೇಶ್ವರ ದೇವಸ್ಥಾನದ ಸಹಯೋಗದಲ್ಲಿ ನಡೆದ ಒಂದು ದಿನದ ಜೀವನ ಮೌಲ್ಯ- ನೈತಿಕ ಶಿಕ್ಷಣ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಯು. ಎಸ್. ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮುದಾಯ ಬಾನುಲಿ ಕೇಂದ್ರ ರೇಡಿಯೋ ಕುಂದಾಪ್ರ 89.6 ಎಫ್. ಎಮ್. ಇದರ ಕಾರ್ಯಕ್ರಮ ನಿರ್ವಾಹಕಿ ಜ್ಯೋತಿ ಸಾಲಿಗ್ರಾಮ ಕಾರ್ಯಕ್ರಮ ನಿರೂಪಿಸಿ, ರಾಜ್ಯಶಾಸ್ತ್ರ ಉಪನ್ಯಾಸಕಿ ಅಕ್ಷತಾ ಸ್ವಾಗತಿಸಿ, ಕಂಪ್ಯೂಟರ್ ಉಪನ್ಯಾಸಕ ರಾಮಚಂದ್ರ ಆಚಾರ್ಯ ವಂದಿಸಿದರು.

ಶಿಬಿರದ ಮೊದಲ ಗೋಷ್ಠಿಯಲ್ಲಿ ಶಿಕ್ಷಣದಲ್ಲಿ ಮಾನವೀಯ ಮೌಲ್ಯಗಳು ಕುರಿತು ರಾಷ್ಟ್ರೀಯ ತರಬೇತುದಾರರು, ಗಣಿತ ಉಪನ್ಯಾಸಕರು ಎಮ್. ಐ. ಟಿ ಮಣಿಪಾಲ ಡಾ. ಹರೀಣಾಕ್ಷಿ ಮಾತನಾಡಿದರು. ಎರಡನೇ ಗೋಷ್ಠಿಯಲ್ಲಿ ಯಕ್ಷಗಾನದಲ್ಲಿ ಮನೋಭಾವನೆ ಮತ್ತು ಮನೋರಂಜನೆ ಕುರಿತು ಮುದ್ರಾಡಿ ಹೖಸ್ಕೂಲ್ ಕನ್ನಡ ಶಿಕ್ಷಕರಾದ ಪಿ. ವಿ. ಆನಂದ ಅವರು ಮಾತನಾಡಿದರು.
ಮಧ್ಯಾಹ್ನ ಕೀರ್ತನಕಾರ ಎಸ್. ಪಿ. ಗುರುದಾಸ ಅವರಿಂದ ಕನಕ ಪುರಂದರ ಪ್ರಭೆ ಕುರಿತು ಹರಿಕಥೆ ನಡೆಯಿತು. ಹಾರ್ಮೋನಿಯಮ್ ನಲ್ಲಿ ಎಮ್. ರಮೇಶ್ ಹೆಬ್ಬಾರ್ ಪ್ರದೀಪ ಉಪಾಧ್ಯಾಯ ತಬಲದಲ್ಲಿ ಸಹಕರಿಸಿದರು.















