ಕೆದೂರು : ಉಚಿತ ಕಣ್ಣಿನ ಪೊರೆ ರೋಗ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ

Call us

Call us

Call us

ಕುಂದಾಪುರ: ರೋಟರಿ ಕ್ಲಬ್ ಕುಂದಾಪುರ ಮಿಡ್ ಟೌನ್ ಹಾಗು ಪಾರ್ವತಿ-ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ಶಿರೂರು, ಮತ್ತು ಇತರ ಸ್ಥಳೀಯ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕೆದೂರು ಸರಕಾರಿ ಪ್ರೌಡಶಾಲೆಯಲ್ಲಿ ಉಚಿತ ಕಣ್ಣಿನ ಪೊರೆ ರೋಗ ತಪಾಸಣಾ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು.

Call us

Click Here

ಕಾರ್ಯಕ್ರಮವನ್ನು ಪಾರ್ವತಿ-ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಚೇರ್‌ಮೆನ್ ಜಯರಾಮ ಶೆಟ್ಟಿ ಉದ್ಘಾಟಿಸಿ, ಕಣ್ಣಿನ ಪೊರೆ ರೋಗ ಹಾಗು ಶಸ್ತ್ರ ಚಿಕಿತ್ಸೆಯ ಬಗ್ಗೆ ಹೆಚ್ಚಿನ ಮಾಹಿತಿ ನೀಡಿ ಶಿಭಿರಾರ್ಥಿಗಳು ಉಚಿತವಾಗಿ ನೀಡಲಾಗುವ ಕಣ್ಣಿನ ಪೊರೆ ರೋಗ ಹಾಗು ಶಸ್ತ್ರ ಚಿಕಿತ್ಸೆ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕರೆ ನೀಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಕ್ಲಭ್-ಕುಂದಾಪುರ ಮಿಡ್ ಟೌನ್ ಅಧ್ಯಕ್ಷ ಕೆ.ಮಹೇಶ್ ಬೆಟ್ಟಿನ್ ವಹಿಸಿದ್ದರು. ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವ್ರದ್ದಿ ಯೋಜನೆಯ ಸೇವಾನಿರತೆ ಸಂಗೀತ, ಕೆದೂರು ಯುವಕ ಮಂಡಲ(ರಿ)ಯ ಅಧ್ಯಕ್ಷರಾದ ಸುಕುಮಾರ್ ಶೆಟ್ಟಿ, ಕೋಟೇಶ್ವರ ವ್ಯವಸಾಯ ಸೇವಾ ಸಹಕಾರಿ ಸಂಘ ನಿ. ಕೋಟೇಶ್ವರದ ಅಧ್ಯಕ್ಷ ಶರತ್ ಕುಮಾರ್ ಹೆಗ್ಡೆ, ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾ| ಅರ್ಪಿತಾ, ಕೆದೂರಿನ ಹಾಲು ಉತ್ಪಾದಕರ ಸಹಕಾರಿ ಸಂಘದ ಆದ್ಯಕ್ಷ ಕರುಣಾಕರ ಶೆಟ್ಟಿ, ಕೆದೂರಿನ ಸಕರಾರಿ ಪ್ರೌಡಶಾಲೆ ಮುಖ್ಯೋಪಾದ್ಯಾಯ ಚಂದ್ರಶೇಖರಪ್ಪ, ಕುಂದಾಪುರ ಬ್ಲಡ್ ಬ್ಯಾಂಕ್‌ನ ಅಧ್ಯಕ್ಷ ಜಯಕರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯ ಸದಾನಂದ ಶೆಟ್ಟಿ, ರೋಟರಿ ಕ್ಲಬ್ ಮಿಡ್ ಟೌನ್‌ನ ಸದಸ್ಯರಾದ ಶಂಕರ್ ಶೆಟ್ಟಿ, ಚಂದ್ರಶೇಖರ ಹೆಗ್ಡೆ, ಇನ್ನಿತರರು ಉಪಸ್ಥಿತರಿದ್ದರು.

ನೇತ್ರ ವೈದ್ಯರಾದ ಡಾ|ಸುಂದರ್ ರಾಮ್ ಶೆಟ್ಟಿಯವರ ಸಮಾಜಮುಖಿ ಚಿಂತನೆ ಹಾಗು ಸೇವಾ ಮನೋಭಾವನೆಯನ್ನು ಹಾಗು ಅವರು ಪಾರ್ವತಿ-ಮಹಾಬಲ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ಗೆ ನೀಡಿದ ಬ್ರಹತ್ ದೇಣಿಗೆ ಮತ್ತು ರೋಗಿಗಳಿಗೆ ನೀಡಿದ ಉಚಿತ ಚಿಕಿತ್ಸೆಯ ಹಿನ್ನಲೆಯಲ್ಲಿ ಅವರನ್ನು ಅಭಿನಂದಿಸಲಾಯಿತು. ಶಿಭಿರದಲ್ಲಿ ಶಿಬಿರಕ್ಕೆ ಹಾಜರಾದ ಶಿಬಿರಾರ್ಥಿಗಳನ್ನು ವೈದ್ಯರು ಪರೀಕ್ಷಿಸಿ ಸೂಕ್ತ ಸಲಹೆ ನೀಡಿದ್ದು ಶಸ್ತ್ರ ಚಿಕಿತ್ಸೆಯ ಅಗತ್ಯವಿರುವವರನ್ನು ಶಿರೂರು ಮುದ್ದುಮನೆಯಲ್ಲಿರುವ ಪಾರ್ವತಿ-ಮಹಾಬಲ ಶೆಟ್ಟಿ ಸ್ಮಾರಕ ಕಣ್ಣಿನ ಆಸ್ಪತ್ರೆಗೆ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ಹೊಲಿಗೆ ರಹಿತ ಅಂತರ್ ಚಕ್ಷು ಮಸೂರ ಅಳವಡಿಸಲು ಹಾಜರಾಗುವಂತೆ ಸಲಹೆ ಮಾರ್ಗದರ್ಶನ ನೀಡಲಾಯಿತು. ರೋಟರಿ ಮಿಡ್ ಟೌನ್ ನ ಅಧ್ಯಕ್ಷರಾದ ಮಹೇಶ್ ಬೆಟ್ಟಿನ್ ಸ್ವಾಗತಿಸಿದರು. ಕಾರ್ಯದರ್ಶಿ ರವೀಶ್ಚಂದ್ರ ಶೆಟ್ಟಿ ವಂದಿಸಿದರು

Leave a Reply