ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ಗ್ರಾಮಾಂತರದ ನೂತನ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ಸಂತೋಷ್ ಕಾಯ್ಕಿಣಿ ಅವರನ್ನು ನಿಯೋಜಿಸಿ ಆದೇಶಿಸಲಾಗಿದೆ. ಮುರ್ಡೇಶ್ವರದಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಅವರನ್ನು ವರ್ಗಾವಣೆ ಮಾಡಲಾಗಿದೆ.
ಈ ಹಿಂದೆ ಬೈಂದೂರು ಸಬ್ ಇನ್ಸಪೆಕ್ಟರ್ ಆಗಿದ್ದ ಸಂತೋಷ್ ಕಾಯ್ಕಿಣಿ ಅವರು ಹಲವು ಪ್ರಕರಣಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ಬಳಿಕ ಕೋಟ, ಹೊನ್ನಾವರದ ಪೊಲೀಸ್ ಠಾಣೆ, ನಕ್ಸಲ್ ನಿಗ್ರಹ ದಳದ ಶೃಂಗೇರಿ ಕ್ಯಾಂಪ್‌ನಲ್ಲಿ ಸಬ್ ಇನ್ಸಪೆಕ್ಟರ್ ಸೇವೆ ಸಲ್ಲಿಸಿ ಅಲ್ಲಿಯೇ ಇನ್ಸ್‌ಪೆಕ್ಟರ್ ಆಗಿ ಭಡ್ತಿ ಹೊಂದಿದ್ದರು. ಬಳಿಕ ಬೈಂದೂರು, ಮುರುಡೇಶ್ವರದಲ್ಲಿ ವೃತ್ತನಿರೀಕ್ಷಕರಾಗಿ ಸೇವೆ ಸಲ್ಲಿಸಿದ್ದರು.
ರಾಜ್ಯದ 131 ಸಿವಿಲ್ ಪೊಲೀಸ್ ಇನ್ಸ್‌ಪೆಕ್ಟರ್‌ಗಳಿಗೆ ತಕ್ಷಣದಿಂದ ಜಾರಿಯಾಗುವಂತೆ ವರ್ಗಾವಣೆ ಮಾಡಲಾಗಿದೆ. ಕುಂದಾಪುರ ಗ್ರಾಮಾ೦ತರ ವೃತ್ತವು ಕಂಡೂರು, ಶಂಕರನಾರಾಯಣ, ಅಮಾಸೆಬೈಲು ಠಾಣಾ ವ್ಯಾಪ್ತಿಯನ್ನು ಒಳಗೊಂಡಿದೆ. ಇನ್ನು ಬೈಂದೂರಿನಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಸವಿತ್ರ ತೇಜ್ ಅವರನ್ನು ಮಂಗಳೂರು ಐಜಿಪಿ ಕಛೇರಿಗೆ ವರ್ಗಾವಣೆ ಮಾಡಲಾಗಿದ್ದು, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಆಗಿದ್ದ ಶಿವಕುಮಾರ್ ಬಿ. ಅವರನ್ನು ಬೈಂದೂರು ಸರ್ಕಲ್ ಇನ್ಸ್‌ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ.










