ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು:ಗ್ರಾಮ ಪಂಚಾಯತ್ ಉಪ್ಪುಂದ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕುಂದಾಪುರ ಹಾಗೂ ಉಪ್ಪುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ 9 ಅಂಗನವಾಡಿ ಕೇಂದ್ರಗಳ ಸಹಯೋಗದೊಂದಿಗೆ ಪೋಷಣ್ ಅಭಿಯಾನ ಸೀಮಂತ ಕಾರ್ಯಕ್ರಮ ಮತ್ತು ಅನ್ನಪ್ರಾಶನ ಕಾರ್ಯಕ್ರಮವನ್ನು ಇತ್ತೀಚಿಗೆ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಚಂದ್ರ ಅವರು ವಹಿಸಿದ್ದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರು, ಸೀಮಂತ ಕಾರ್ಯಕ್ರಮಕ್ಕೆ ಬಂದಿರುವ ಗರ್ಭಿಣಿಯಾದ ಪೂರ್ಣಿಮಾ, ಅನ್ನ ಪ್ರಾಶನ ಕಾರ್ಯಕ್ರಮಕ್ಕೆ ಬಂದಿರುವ ಮಗು ನವಮಿ ಹಾಗೂ ಮಗುವಿನ ತಾಯಿ ಹಾಗೂ ವೇದಿಕೆ ಮೇಲಿರುವ ಎಲ್ಲಾ ಗಣ್ಯರು ಸೇರಿ ನೆರವೇರಿಸಿದರು.

ನಂತರ 4 ಮಕ್ಕಳಾದ ಶಬರೀಶ್ ಎಂ., ನವಮಿ, ಆದಿತ್ಯ ಎನ್. ನಾಯಕ್, ಚತುರ್ವಿ ಮಕ್ಕಳಿಗೆ ಅನ್ನ ಪ್ರಾಶನ ಕಾರ್ಯಕ್ರಮವನ್ನು ವೇದಿಕೆಯಲ್ಲಿರುವ ಎಲ್ಲಾ ಗಣ್ಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿ ನೆರವೇರಿಸಲಾಯಿತು. ಅನ್ನ ಪ್ರಾಶನ ಮಾಡಲ್ಪಟ್ಟ ಮಕ್ಕಳಿಗೆ ಬೌಲ್ ಮತ್ತು ಸ್ಪೂನ್ ಅನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಚಂದ್ರ ಅವರು ನೀಡಿದರು.
ಗರ್ಭಿಣಿಯರಾದ ಪೂರ್ಣಿಮಾ, ಸುಪ್ರೀತಾ, ನಾಗಶ್ರೀ, ಭವ್ಯ ಅವರಿಗೆ ಮಡಿಲು ತುಂಬಿ ಸೀಮಂತ ಕಾರ್ಯಕ್ರಮವನ್ನು ನೆರವೇರಿಸಲಾಯಿತು.
ಸಿಂಚನಾ ಅವರು ವೇದಿಕೆ ಮೇಲಿರುವವರನ್ನು ಹಾಗೂ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು. ಬೈಂದೂರು ವಲಯದ ಮೇಲ್ವಿಚಾರಕಿಯಾದ ರೇವತಿಯವರು ಪ್ರಾಸ್ತಾವಿಕ ಮಾತನಾಡಿದರು.
9 ಅಂಗನವಾಡಿಯ ಮಕ್ಕಳ ಪೋಷಕರು ಪೌಷ್ಟಿಕ ಆಹಾರವನ್ನು ತಯಾರಿಸಿಕೊಂಡು ಬಂದಿದ್ದು. ಅವರು ಮಾಡಿರುವ ಪೌಷ್ಟಿಕ ಆಹಾರಕ್ಕೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಚಂದ್ರ, ಮೇಲ್ವಿಚಾರಕಿಯಾದ ರೇವತಿ ಹಾಗೂ ಆರೋಗ್ಯ ಕಾರ್ಯಕರ್ತೆಯಾದ ಸಹಾನರವರು ಕಾರ್ಯಕ್ರಮ ಪ್ರಾರಂಭವಾಗುವ ಮೊದಲೇ ಅಂಕಗಳನ್ನ ನೀಡಿದ್ದು ಅದರಂತೆ ಹೆಚ್ಚು ಅಂಕ ಬಂದಿರುವಂತಹ ಅಮ್ಮನವರ ತೊಪ್ಲು ಅಂಗನವಾಡಿಯ ಪೋಷಕರಾದ ನಾಗಶ್ರೀ ಪ್ರಥಮ ಸ್ಥಾನವನ್ನು, ಮೂಕಾಂಬು ಅವರು ದ್ವಿತೀಯ ಸ್ಥಾನವನ್ನು ಹಾಗೆ ಶ್ಯಾಮಲಾ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಅವರಿಗೆ ವೇದಿಕೆ ಮೇಲಿರುವ ಎಲ್ಲಾ ಗಣ್ಯರು ಸೇರಿ ಬಹುಮಾನವನ್ನು ನೀಡಿರುತ್ತಾರೆ ಹಾಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹನ್ ಚಂದ್ರರವರು ಕೆಲವೊಂದು ಪೌಷ್ಟಿಕ ಆಹಾರಗಳನ್ನು ತಯಾರಿಸಿಕೊಂಡು ಬಂದಿರುತ್ತಾರೆ. ತಯಾರಿಸಿಕೊಂಡು ಬಂದಿರುವ ಪೌಷ್ಟಿಕ ಆಹಾರದ ಬಗ್ಗೆ ಅದರಲ್ಲಿರುವ ಪೌಷ್ಟಿಕಾಂಶವನ್ನು ಎಲ್ಲರಿಗೂ ಹೇಳಿದರು ಹಾಗೆಯೇ ಅವರು ತಂದಂತಹ ಪೌಷ್ಟಿಕ ಆಹಾರವನ್ನು ವೇದಿಕೆ ಮೇಲಿರುವ ಗಣ್ಯರಿಗೆ ವಿತರಿಸಲಾಯಿತು.
ಪಂಚಾಯತ್ ಉಪಾಧ್ಯಕ್ಷರಾದ ಮಹಾಲಕ್ಷ್ಮಿ ಗಾಣಿಗ, ಸದಸ್ಯರಾದ ಮಂಜುನಾಥ್ ದೇವಾಡಿಗ, ಸುಶೀಲ, ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಂಜುನಾಥ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಬೈಂದೂರು ವಲಯದ ಮೇಲ್ವಿಚಾರಕಿಯಾದ ರೇವತಿ ಹಾಗೂ ಆರೋಗ್ಯ ಕಾರ್ಯಕರ್ತೆಯಾದ ಸಹಾನ ಅವರು ಉಪಸ್ಥಿತರಿದ್ದರು .
ಗ್ರಾಮ ಪಂಚಾಯತ್ ಸದಸ್ಯರಾದ ಮಂಜುನಾಥ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಆರೋಗ್ಯ ಕಾರ್ಯಕರ್ತೆಯಾದ ಸಹಾನ ಅವರು ಗರ್ಭಿಣಿಯರಿಗೆ, ಎದೆ ಹಾಲುಣಿಸುವ ತಾಯಂದಿರಿಗೆ, ಹದಿ ಹರೆಯದ ಮಕ್ಕಳಿಗೆ ಮತ್ತು ಸಣ್ಣ ಮಕ್ಕಳಿಗೆ ಯಾವ ಯಾವ ಆಹಾರ ತಿನ್ನಬೇಕೆನ್ನುವುದರ ಬಗ್ಗೆ ಮತ್ತು ತಯಾರಿಸುವ ಮೊದಲು ಮತ್ತು ತಿನ್ನುವ ಮೊದಲು ಸ್ವಚ್ಛತೆಯನ್ನ ಕಾಪಾಡಿಕೊಳ್ಳುವುದರ ಬಗ್ಗೆ ತಿಳಿಸಿರುತ್ತಾರೆ.
ಈ ಕಾರ್ಯಕ್ರಮಕ್ಕೆ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಕಾರ್ಯಕರ್ತೆಯರು, ಸಂಜೀವಿನಿ ಸಂಘದ ಪದಾಧಿಕಾರಿಗಳು, SLRM ಘಟಕದವರು, ಪಂಚಾಯತ್ ನ ಸಿಬ್ಬಂದಿ ವರ್ಗದವರು, ಗರ್ಭಿಣಿಯರು, ಮಕ್ಕಳ ಪೋಷಕರು ಹಾಗೂ ಮುದ್ದು ಪುಟಾಣಿಗಳು, ಮಾಧ್ಯಮ ಮಿತ್ರರು ಭಾಗವಹಿಸಿದ್ದಾರೆ.
ಸಾವಿತ್ರಿ ಅವರು ವೇದಿಕೆಯಲ್ಲಿ ಆಸೀನರಿರುವ ಗಣ್ಯರಿಗೂ ಭಾಗವಹಿಸಿದ ಸರ್ವರಿಗೂ ಧನ್ಯವಾದ ವನ್ನು ಅರ್ಪಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಉಷಾ ಅವರು ನೆರವೇರಿಸಿ ಕೊಟ್ಟರು.















