ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ದೀಪಾವಳಿ ಹಬ್ಬದ ಪ್ರಯುಕ್ತ ಭಾರತೀಯ ಜನತಾ ಪಾರ್ಟಿ ಕುಂದಾಪುರ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ವಿಶೇಷ ಗೋ ಪೂಜೆ ಕಾರ್ಯಕ್ರಮವು ಕೋಟೇಶ್ವರದ ಹಾಲಾಡಿ ರಸ್ತೆಯಲ್ಲಿರುವ ರಾಘವೇಂದ್ರ ಭಟ್ಟರ ನಿವಾಸದಲ್ಲಿ ಸಕಲ ವಿಧಿ ವಿಧಾನಗಳ ಮೂಲಕ ಬುಧವಾರ ಆಯೋಜಿಸಲಾಗಿದೆ.

ಗೋ ಪೂಜಾ ಕಾರ್ಯಕ್ರಮದಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಭಾಗಿಯಾಗಿ ಮಾತನಾಡಿ, ಕೃಷಿಕರ ಜೀವನಾಧಾರ ಗೋವು ಮತ್ತು ಗೋವಿನ ಉತ್ಪನ್ನಗಳು. ಜೀವಜಲ ನೀರು ನಮಗೆಷ್ಟು ಅಗತ್ಯವೇ ಅಂತೆಯೇ ಗೋವಿನ ಉತ್ಪನ್ನಗಳೂ ಕೂಡ ನಮ್ಮ ಜೀವನಕ್ಕೆ ಅಗತ್ಯವಾಗಿದೆ. ದಿನನಿತ್ಯ ನಮ್ಮ ಕಣ್ಣಿಗೆ ಕಾಣುವ ದೇವರೆಂದರೆ ಹಸು. ಹಸುವನ್ನು ಭೂಮಿ ತಾಯಿ, ಸಕಲ ದೇವರ ಆವಾಸ ಸ್ಥಾನ ಎಂಬ ನಂಬಿಕೆಯೂ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಸೌರಭಿ ಪೈ ವಹಿಸಿದ್ದರು.

ಸದ್ರಿ ಈ ಕಾರ್ಯಕ್ರಮದಲ್ಲಿ ಕುಂದಾಪುರ ಬಿಜೆಪಿ ಅಧ್ಯಕ್ಷ ಸುರೇಶ್ ಶೆಟ್ಟಿ ಗೋಪಾಡಿ, ಕುಂದಾಪುರ ಮಂಡಲ ನಿಕಟ ಪೂರ್ವ ಅಧ್ಯಕ್ಷ ಶಂಕರ್ ಅಂಕದಕಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಪೂಜಾರಿ ವಕ್ವಾಡಿ, ಸುಧೀರ್ ಕೆ.ಎಸ್. ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿದ್ಯಾ ಸಾಲಿಯನ್, ಮಂಡಲ ಉಪಾಧ್ಯಕ್ಷರುಗಳಾದ ಪ್ರಕಾಶ್ ಪೂಜಾರಿ ಬೀಜಾಡಿ, ಸುನಿಲ್ ಶೆಟ್ಟಿ ಹೇರಿಕುದ್ರು, ರೂಪಾ ಬಾಬು ಪೈ, ಮಂಡಲ ಕಾರ್ಯದರ್ಶಿ ರಾಜೇಶ್ ಶೆಟ್ಟಿ, ಶಿರೂರು ಮುರ್ಕೈ, ಯುವ ಮೋರ್ಚಾ ಅಧ್ಯಕ್ಷ ಕಿರಣ್ ಪೂಜಾರಿ ತೆಕ್ಕಟ್ಟೆ, ಓಬಿಸಿ ಮೋರ್ಚಾ ಅಧ್ಯಕ್ಷ ಸುರೇಂದ್ರ ಕಾಂಚನ್ ಸಂಗಮ್, ಕುಂದಾಪುರ ಪುರಸಭಾ ಸದಸ್ಯ ಸಂತೋಷ್ ಶೆಟ್ಟಿ ಹಾಗೂ ಮಹಿಳಾ ಮೋರ್ಚಾ ಸದಸ್ಯರಾದ ಸುನೀತಾ, ಚೇತನಾ ಉಪಸ್ಥಿತರಿದ್ದರು.










