ಗೋಳಿಗರಡಿ ಮೇಳದ ತಿರುಗಾಟ ಆರಂಭ. ಸಾಸ್ತಾನ ದಿ|ಚಂದು ಪೂಜಾರಿ ಪ್ರಶಸ್ತಿ ಪ್ರದಾನ

Call us

Call us

Call us

ಕುಂದಾಪುರ: ಕರಾವಳಿಯ ಇತಿಹಾಸ ಪ್ರಸಿದ್ಧ ಗೋಳಿಗರಡಿ ಮೇಳ ಗರಡಿಯ ವತಿಯಿಂದ ಯಕ್ಷಗಾನ ಪ್ರದರ್ಶನ ನೀಡುವ ಏಕೈಕ ಮೇಳ ಇದಾಗಿದೆ. ವಿಠಲ ಪೂಜಾರಿ ಅವರ ಸಮರ್ಥ ನೇತೃತ್ವದಲ್ಲಿ ಮೇಳ ಯಶಸ್ವಿ ತಿರುಗಾಟ ನಡೆಸುವ ಮೂಲಕ ಕಲಾಸೇವೆ ಮಾಡುತ್ತಿದೆ ಎಂದು ಯಕ್ಷಗಾನ ವಿಮರ್ಶಕ, ಉಪನ್ಯಾಸಕ ಪ್ರೊ.ಎಸ್.ವಿ.ಉದಯಕುಮಾರ್ ಶೆಟ್ಟಿ ಅಭಿಪ್ರಾಯ ಪಟ್ಟರು.

Call us

Click Here

ಅವರು ಸಾಸ್ತಾನದ ಗೋಳಿಗರಡಿ ದೈವಸ್ಥಾನದಲ್ಲಿ ನ.೨೨ರಂದು ನಡೆದ ಶ್ರೀ ಪಂಜುರ್ಲಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ದೇವರ ಸೇವೆ ಮತ್ತು ಸಾಸ್ತಾನ ದಿ|ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.

ಇವತ್ತು ಕಲಾ ಸೇವೆಯಲ್ಲಿ ಪ್ರಶಸ್ತಿ ಪಡೆಯುವ ವ್ಯಕ್ತಿಗೆ ಆರ್ಹ ಮಾನದಂಡವಿರಬೇಕು. ಅದನ್ನು ಪ್ರಶಸ್ತಿ ನೀಡುವ ಆಯೋಜಕರು ಪರಿಗಣಿಸಬೇಕು. ಆರ್ಹರಿಗೆ ಪ್ರಶಸ್ತಿ ಲಭಿಸಿದಾಗ ಪ್ರಶಸ್ತಿಯ ಮೌಲ್ಯ ಹೆಚ್ಚಳವಾಗುತ್ತದೆ ಎಂದರು. ಬಡಗುತಿಟ್ಟಿನ ಹಿರಿಯ ಕಲಾವಿದ ಹೆಮ್ಮಾಡಿ ರಾಮ ಚಂದನ್ ಅವರಿಗೆ ಸಾಸ್ತಾನ ದಿ.ಚಂದು ಪೂಜಾರಿ ಸ್ಮಾರಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮತ್ಸ್ಯೋದ್ಯಮಿ ಆನಂದ ಸಿ.ಕುಂದರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಯಕ್ಷಗಾನದ ಮೂಲಕ ರಾಮಾಯಣ, ಮಹಾಭಾರತ ಮೊದಲಾದ ಪೌರಾಣಿಕ ಕಥೆಗಳ ಸಾರವನ್ನು ಅತ್ಯಂತ ಪರಿಣಾಮಕಾರಿಯಾಗಿ ಗ್ರಹಿಸಲು ಸಾಧ್ಯವಾಗುತ್ತದೆ. ಯುವ ಜನಾಂಗ ಯಕ್ಷಗಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡಾಗ ನಮ್ಮ ಪರಂಪರೆ, ಸಂಸ್ಕೃತಿಯನ್ನು ತಿಳಿದುಕೊಂಡಂತಾಗುತ್ತದೆ ಎಂದರು.

ಸಾಸ್ತಾನ ಪಾಂಡೇಶ್ವರದ ಶ್ರೀ ರಕ್ತೇಶ್ವರಿ ದೇವಸ್ಥಾನದ ರಮೇಶ ರಾವ್, ಗೋಳಿಗರಡಿ ಕ್ಷೇತ್ರದ ಮೊಕ್ತೇಸರ ಕೃಷ್ಣಯ್ಯ ಹೆಗ್ಡೆ, ಮೇಳದ ಪ್ರೋತ್ಸಾಹಕರಾದ ಮಾಜಿ ಶಾಸಕ ಪಿ. ಬಸವರಾಜು, ಪಾತ್ರಿಗಳಾದ ಜಿ.ಶಂಕರ ಪೂಜಾರಿ ಗೋಳಿಗರಡಿ, ಮೇಳದ ಅಧ್ಯಕ್ಷರಾದ ಜಿ.ವಿಠ್ಠಲ ಪೂಜಾರಿ ಹಾಗೂ ಎ.ಮನೋಜ್ ಕುಮಾರ್ ಉಪಸ್ಥಿತರಿದ್ದರು. ಮೇಳದ ಗೌರವಾಧ್ಯಕ್ಷ ಎ.ದೇವಾನಂದ ಸ್ವಾಗತಿಸಿದರು. ಕೇಶವ ಆಚಾರ್ಯ ಪ್ರಶಸ್ತಿ ಪತ್ರ ವಾಚಿಸಿದರು. ಗಣೇಶ್ ಪಾಂಡೇಶ್ವರ ಕಾರ್ಯಕ್ರಮ ನಿರ್ವಹಿಸಿದರು.

Leave a Reply