ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಗಂಗೊಳ್ಳಿಯ ಶ್ರೀ ವೆಂಕಟೇಶ ಕೃಪಾ ಟ್ರೇಡರ್ಸ್ ಅವರು ಹಮ್ಮಿಕೊಂಡಿದ್ದ ದೀಪಾವಳಿ ಧಮಾಕ 2025ರ ಸಮಾರೋಪ ಸಮಾರಂಭವು ಸುರಭಿ ಸ್ಟುಡಿಯೋ ಗಂಗೊಳ್ಳಿ ಇವರ ಸಹಭಾಗಿತ್ವದಲ್ಲಿ ಇಲ್ಲಿನ ಶಾರದ ಮಂಟಪದಲ್ಲಿ ನಡೆಯಿತು.
ಗಂಗೊಳ್ಳಿಯ ಮಾಜಿ ಮಂಡಲ ಪಂಚಾಯತ್ ಪ್ರಧಾನರಾದ ಸದಾನಂದ ಶೆಣೈ, ಕುಂದಾಪುರದ ಬೆನಕ ಸ್ಟುಡಿಯೋ ಮಾಲಕರಾದ ಗಣೇಶ್ ದೇವಾಡಿಗ ಮತ್ತು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ವಾಣಿಜ್ಯಶಾಸ್ತ್ರ ಉಪನ್ಯಾಸಕ ನರೇಂದ್ರ ಎಸ್. ಗಂಗೊಳ್ಳಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಗಂಗೊಳ್ಳಿಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಜಯಂತಿ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಭಾಸ್ಕರ ಶೆಣೈ ಮತ್ತು ಜಯಶ್ರೀ ಶೆಣೈ ದಂಪತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಗಂಗೊಳ್ಳಿ ವಲಯದ ದೈಹಿಕ ಶಿಕ್ಷಕರಾದ ಸೂರಜ್ ಖಾರ್ವಿ, ದೀಕ್ಷಿತ್ ಮೇಸ್ತ, ಪ್ರಣಯ ಕುಮಾರ್ ಶೆಟ್ಟಿ ಮತ್ತು ನಿರಂಜನ ಖಾರ್ವಿ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡೆಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಸುರಭಿ ಸ್ಟುಡಿಯೋ ಮಾಲೀಕರಾದ ಕೃಷ್ಣ ಖಾರ್ವಿ ಅವರು ಗಣೇಶ್ ದೇವಾಡಿಗ ಅವರನ್ನು ಸನ್ಮಾನಿಸಿ ಗೌರವಿಸಿದರು.
ವಿಜಯ ಶೆಣೈ ಪ್ರಾರ್ಥಿಸಿದರು. ವೆಂಕಟೇಶ ಶೆಣೈ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಜ್ರೇಶ್ ಶೆಣೈ ಸ್ವಾಗತಿಸಿದರು. ವಿಠಲ ಶೆಣೈ ಕಾರ್ಯಕ್ರಮವನ್ನು ನಿರ್ವಹಿಸಿದರು. ವರ್ಷ ಶೆಣೈ ವಂದಿಸಿದರು.















