ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಯಕ್ಷಗಾನದ ಹಿರಿಯ ಕಲಾವಿದರಾದ ಡಾ. ಕೋಳ್ಯೂರು ರಾಮಚಂದ್ರರಾವ್ ಅವರ 94ನೇ ಜನ್ಮ ದಿನಾಚರಣೆಯನ್ನು ಅವರ ಸ್ವಗೃಹ ಉಡುಪಿ ಇನ್ನಂಜೆಯ ಕಲಾಪ್ರಸಾದದಲ್ಲಿ ಬಂಧು ಮಿತ್ರರು ಹಾಗೂ ಶಿಷ್ಯರೊಡಗೂಡಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪೂರ್ವಾಹ್ನ ದೇವತಾ ಕಾರ್ಯದಿಂದ ಪ್ರಾರಂಭಗೊಂಡು ಪ್ರಾರಂಭಗೊಂಡು ಅಪರಾಹ್ನ ಯಕ್ಷ ಭಾರತಿ (ರೀ) ಬೆಳ್ತಂಗಡಿ ಕನ್ಯಾನ ಶಾಖೆಯವರಿಂದ ಶರಸೆತು ಬಂಧನ ಎಂಬ ತಾಳಮದ್ದಲೆಯನ್ನು ನಡೆಸಲಾಯಿತು ನಂತರ ಅವರ ಶಿಷ್ಯ ಅವರ ಪಾವಂಜೆ ಮೇಳದ ಮುಖ್ಯ ಪಾತ್ರಧಾರಿ ಸುಬ್ರಾಯ ಹೊಳ್ಳ ದಂಪತಿಗಳನ್ನು ಗೌರವಿಸಲಾಯಿತು.
ಸುಬ್ರಾಯ ಹೊಳ್ಳರ ಇರು ಪ್ರಾತ್ಯಕ್ಷತೆ ಮತ್ತು ಕೋಳೂರರವರು ತನ್ನ 94ನೇ ವಯಸ್ಸಿನಲ್ಲೂ ತಾಳಮದ್ದಳೆಯಲ್ಲಿ ಶ್ರೀರಾಮನ ಪಾತ್ರನಿರ್ವಹಿಸಿರುವುದು ವಿಶೇಷ ಆಕರ್ಷಣೆಯಾಗಿತ್ತು. ಹುಟ್ಟು ಹಬ್ಬದ ಸವಿ ನೆನಪಿಗಾಗಿ ತಮ್ಮದೇ ತೋಟದಲ್ಲಿ ಗಿಡ ನೆಟ್ಟು ಖುಷಿ ಪಟ್ಟರು.










