ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು 70ನೇ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ಹಿರಿಯ ನಾಗರಿಕರ ವೇದಿಕೆ ಕೋಟ ಗಿಳಿಯಾರು ಇದರ ಉದ್ಘಾಟನಾ ಕಾರ್ಯಕ್ರಮ ಇತ್ತೀಚಿಗೆ ಮೂಡುಗಿಳಿಯಾರು ಶಾಲಾ ಸಭಾಂಗಣದಲ್ಲಿ ಜರಗಿತು.
ಕಾರ್ಯಕ್ರಮದ ಅಂಗವಾಗಿ ಹಿರಿಯ ನಾಗರಿಕರ ಏರ್ಪಡಿಸಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಇದೇ ವೇಳೆ ಗ್ರಾಮದಲ್ಲಿನ ವಿವಿಧ ಸಂಘ ಸಂಸ್ಥೆಗಳ ಗಣ್ಯರಿಗೆ ಗೌರವಾರ್ಪಣೆ, ಹಿರಿಯರಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮ ನೀಡಲಾಯಿತು.

ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಎಚ್. ಸೋಮಶೇಖರ ಶೆಟ್ಟಿ ವಹಿಸಿ, ವೇದಿಕೆ ನಡೆದು ಬಂದ ದಾರಿ ಮುಂದಿನ ಯೋಜನೆ ಯೋಚನೆಗಳ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಉಡುಪಿ ಜಿಲ್ಲಾ ಹಿರಿಯ ನಾಗರಿಕರ ಒಕ್ಕೂಟದ ಅಧ್ಯಕ್ಷರಾದ ಎಚ್. ವಿಶ್ವನಾಥ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಹಿರಿಯರ ಯೋಗಕ್ಷೇಮ ಸರಕಾರದಿಂದ ಸಿಗುವ ಸೌಲಭ್ಯಗಳು ಮಾನಸಿಕ ನೆಮ್ಮದಿಗಳ ಕುರಿತು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಕೋಟ ಗಿಳಿಯಾರು ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಡ್ಡಾಡಿ ವಿಜಯಕುಮಾರ ಶೆಟ್ಟಿ,ಕೋಟ ಗ್ರಾಮ ಪಂಚಾಯತ್, ಅಧ್ಯಕ್ಷೆ ಜ್ಯೋತಿ ಭರತ ಕುಮಾರ್ ಶೆಟ್ಟಿ, ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯ ಸರ್ವೋತ್ತಮ ನಾಯಕ್, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ. ರತ್ನಾಕರ ನಾಯ್ಕ್, ಉದ್ಯಮಿ ಮಹೇಶ್ ಶೆಟ್ಟಿ ಗುಳ್ವಾಡಿ ವೇದಿಕೆಗೆ ಶುಭ ಹಾರೈಸಿದರು.
ವೇದಿಕೆಯ ಹಿರಿಯ ನಾಗರಿಕರಿಗೆ ಆರೋಗ್ಯ ಮಾಹಿತಿಯನ್ನು ಕುಂದಾಪುರದ ತಾಲೂಕು ಆಸ್ಪತ್ರೆ ವೈದ್ಯೆ ಡಾ.ಅಕ್ಷರಿ ಶೆಟ್ಟಿ ಮಾಹಿತಿ ನೀಡಿದರು.ಹಿರಿಯ ನಾಗರಿಕ ಸಂಘದ ಗೌರವಾಧ್ಯಕ್ಷ ರಾಜಾರಾಮ ಶೆಟ್ಟಿ ಸ್ವಾಗತಿಸಿದರು.
ಶಾಲಾ ದೈಹಿಯ ಶಿಕ್ಷಕ ಶೇಖರ್ ನಿರೂಪಿಸಿ, ಕಾರ್ಯದರ್ಶಿ ಶಂಕರ್ ಆಚಾರ್ ವಂದಿಸಿದರು. ಸಭಾ ಕಾರ್ಯಕ್ರಮದಲ್ಲಿ ಗಂಗಾಧರ ಐತಾಳ ಶರಣಯ್ಯ ಹಿರೇಮಠ, ವಿಶ್ವನಾಥ ಜೋಗಿ, ಕೃಷ್ಣಯ್ಯ ಆಚಾರ್, ಶಶಿಕಲಾ ಭಟ್, ಅನಿತಾ ಶೆಟ್ಟಿ ಸಹಕರಿಸಿದರು.















