ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಬೆಂಗಳೂರಿನಿಂದ ಕುಂದಾಪುರಕ್ಕೆ ಬಸ್ಸಿನಲ್ಲಿ ಬರುತ್ತಿದ್ದ ವೇಳೆ ಪ್ರಯಾಣಿಕೆ 15 ಲಕ್ಷ ರೂ.ಗಳ ಬೆಳ್ಳಿ ಗಟ್ಟಿ ಹಾಗೂ 3 ಲಕ್ಷ ರೂ. ನಗದು ಕಳವಾದ ಬಗ್ಗೆ ವರದಿಯಾಗಿದೆ.
ಹಂಗಳೂರು ಸಂಜಯಗಾಂಧಿ ರಸ್ತೆ ನಿವಾಸಿ ಎನ್. ಕೃಷ್ಣಮೂರ್ತಿ ಶೇಟ್ ಅವರು ಹಾಗೂ ಪತ್ನಿ ಬೆಂಗಳೂರಿನ ಜ್ಯುವೆಲರಿಯಲ್ಲಿ ತಲಾ 10 ಕೆಜಿಯ ಎರಡು ಬೆಳ್ಳಿಯ ಗಟ್ಟಿ ಖರೀದಿಸಿ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಕೆಎಸ್ಸಾರ್ಟಿಸಿ ವೊಲ್ಲೊ ಬಸ್‌ನಲ್ಲಿ ಕುಂದಾಪುರಕ್ಕೆ ಹೊರಟಿದ್ದರು.
10 ಕೆಜಿ ಬೆಳ್ಳಿಯ ಗಟ್ಟಿಯ ಒಂದು ಪ್ಯಾಕೆಟನ್ನು ಕಾಲಿನ ಬಳಿ, ಇನ್ನೊಂದು 10 ಕೆಜಿ ಬೆಳ್ಳಿಯ ಗಟ್ಟಿಯ ಪ್ಯಾಕೆಟ್ ಹಾಗೂ 3 ಲಕ್ಷ ರೂ. ನಗದನ್ನು ಬ್ಯಾಗ್ನಲ್ಲಿ ಹಾಕಿ ಕೋಟ್ನ ಮೇಲ್ಬಾಗದ ಲಗೇಜ್ ಕಂಪಾರ್ಟ್ ಮೆಂಟ್ನಲ್ಲಿ ಇಟ್ಟಿದ್ದರು. ಬೆಳಗ್ಗೆ ಲಗೇಜ್ ಬ್ಯಾಗನ್ನು ನೋಡಿದಾಗ ಜಿಪ್ ತೆರೆದಿದ್ದು 10 ಕೆಜಿ ಬೆಳ್ಳಿಯ ಗಟ್ಟಿ ಹಾಗೂ 3 ಲಕ್ಷ ನಗದು ಹಣ ಕಳವಾಗಿತ್ತು. 10 ಕೆಜಿ ಬೆಳ್ಳಿಯ ಗಟ್ಟಿ ಅಂದಾಜು ಮೌಲ್ಯ 15,39,655 ರೂ. ಹಾಗೂ 3 ಲಕ್ಷ ರೂ. ನಗದು ಒಟ್ಟು ಸೇರಿ 18,39,655 ರೂ.ಗಳನ್ನು ಕಳವು ಮಾಡಿರುವುದಾಗಿ ಪ್ರಕರಣ ದಾಖಲಾಗಿದೆ.










