ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಮರವಂತೆಯ ಹೆದ್ದಾರಿಯಲ್ಲಿ ಪಾದಾಚಾರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಸಂಭವಿಸಿದೆ. ಮೃತರನ್ನು ರಾಜು ಮೊಗವೀರ (46) ಎಂದು ಗುರುತಿಸಲಾಗಿದೆ.
ಮರವಂತೆ ಗ್ರಾಮದ ನಿರೋಣಿ ಐಸ್ ಪ್ಲಾಂಟ್ ಎದುರು ತನ್ನ ಹೆಂಡತಿಗಾಗಿ ಕಾಯುತ್ತಿರುವಾಗ ಸಂಜೆ ಹೊತ್ತಿಗೆ ಕುಂದಾಪುರ ಬೈಂದೂರು ಕಡೆಗೆ ತಮ್ಮ ಮನೆಗೆ ನಡೆದುಕೊಂಡು ಹೋಗಲು ರಸ್ತೆಯ ಅಂಚಿನಲ್ಲಿ ಬರುತ್ತಿರುವಾಗ ಅವರ ಎದುರುಗಡೆ ಮೋಟಾರ್ ಸೈಕಲ್ ಸವಾರ ಅಕ್ಷಯ್ ಅತಿವೇಗ ಹಾಗೂ ಅಜಾಗುರೂಕತೆಯಿಂದ ಚಲಾಯಿಸಿಕೊಂಡು ಬಂದು ರಾಜು ಮೊಗವೀರರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ಮುಖಕ್ಕೆ ರಕ್ತಗಾಯವಾಗಿದ್ದು, ಕೂಡಲೇ ಕುಂದಾಪುರ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಪರೀಕ್ಷಿಸಿದ ವೈದ್ಯರು ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










