ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಸಂತೋಷ ಎನ್ನುವುದು ಒಂದು ಮಾನಸಿಕ ಸ್ಥಿತಿ. ಭಾವನಾತ್ಮಕ ಸಂಬಂಧಗಳು ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ಇಂತಹ ಸಂಘಟನೆಗಳಲ್ಲಿ ಸಕ್ರೀಯರಾಗುವ ಮೂಲಕ ನಮ್ಮ ಜೀವನದ ವಿಶೇಷ ಸಂದರ್ಭಗಳನ್ನು ನಮ್ಮ ಧಾರ್ಮಿಕ, ಸಾಂಸ್ಕೃತಿಕ ಚೌಕಟ್ಟಿನಲ್ಲಿ ಅರ್ಥಪೂರ್ಣವಾಗಿ ಆಚರಿಸಿ ಸಂಭ್ರಮಿಸಲು ಸಾಧ್ಯವಿದೆ. ಎಲ್ಲವನ್ನೂ ಹಿತಮಿತವಾಗಿ ನಾವು ಆಚರಿಸಲು ಮನಸ್ಸು ಮಾಡಬೇಕು ಎಂದು ಸೀನಿಯರ್ ಚೇಂಬರ್‌ನ ಯುವ ವ್ಯವಹಾರಗಳ ರಾಷ್ಟ್ರೀಯ ನಿರ್ದೇಶಕ ಹುಸೈನ್ ಹೈಕಾಡಿ ಹೇಳಿದರು.
ಅವರು ನಾವುಂದ ಪದವಿ ಪೂರ್ವ ಕಾಲೇಜಿನಲ್ಲಿ ಉಪ್ಪುಂದ ಸಿನೀಯರ್ ಛೇಂಬರ್‌ನ ನೂತನ ರಚನೆಯ ವಿದ್ಯಾರ್ಥಿ ಯುವಪಡೆಗಳ (ಯೂಥ್ ವಿಂಗ್) ಪದಪ್ರದಾನ ಸಮಾರಂಭ ಉದ್ಘಾಟಿಸಿ, ನೂತನ ಪದಾಧಿಕಾರಿಗಳುಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದರು.

ಸಂಘಟಿತ ಸಮಾಜ ನಿರ್ಮಾಣವಾಗಬೇಕಾದರೆ, ಸಂಘ ಸಂಸ್ಥೆಗಳ ಪಾತ್ರ ಮಹತ್ವದಾಗಿದ್ದು, ಸಿನೀಯರ್ ಛೇಂಬರ್‌ನಲ್ಲಿ ಪಡೆದುಕೊಂಡ ಅನುಭವ ಗಟ್ಟಿಗೊಳಿಸುವ ಉದ್ದೇಶದಿಂದ ವಿದ್ಯಾರ್ಥಿ ತಂಡದ ಎಲ್ಲಾ ಒಡನಾಡಿಗಳು ಜೊತೆ ಸೇರಿ ಒಳ್ಳೆಯ ವಿಚಾರಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡು ನಿಸ್ವಾರ್ಥ ಸೇವಾ ಮನೋಭಾವನೆಯಿಂದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸ್ಪಂದಿಸುವ ಕೆಲಸ ಮಾಡಬೇಕು. ನೆಲೆಯಲ್ಲಿ ಸೀನಿಯರ್ ಚೇಂಬರ್ ವಿದ್ಯಾರ್ಥಿ ಯುವಪಡೆಯೊಂದಿಗೆ ಸ್ನೇಹದ ಕೊಂಡಿಯಾಗಿ ಬೆಸೆಯುವ ಕಾರ್ಯನಿರ್ವಹಿಸುತ್ತದೆ ಎಂದರು.
ಸೀನಿಯರ್ ಚೇಂಬರ್‌ನ ರಾಷ್ಟ್ರೀಯ ಸಂಯೋಜಕ ಗಿರೀಶ ಶ್ಯಾನುಭಾಗ್ ಅಧ್ಯಕ್ಷ ತೆವಹಿಸಿದ್ದರು. ಹಿರಿಯ ಪರ್ತಕರ್ತ ನರಸಿಂಹ ನಾಯಕ್ ಅವರನ್ನು ಸಲ್ಯೂಟ್ ದಿ ಸೈಲೆಂಟ್ ವರ್ಕ್‌ರ್ ಅಭಿಯಾನದಡಿ ಸನ್ಮಾನಿಸಲಾಯಿತು.
ಸೀನಿಯರ್ ಚೇಂಬರ್‌ನ ರಾಷ್ಟ್ರೀಯ ಸಂಯೋಜಕ ಉದಯ್ ಡಿ. ಆರ್., ಉಪ್ಪುಂದ ಸಿನೀಯರ್ ಛೇಂಬರ್ ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಯುವಪಡೆ ಸಂಯೋಜಕ ಜೀವನ್ ಶೆಟ್ಟಿ, ಪ್ರಾಂಶುಪಾಲೆ ಸುಜಾತಾ ಎಂ., ಯುವಪಡೆ ಅಧ್ಯಕ್ಷ ಹರ್ಷ, ಖಜಾಂಚಿ ನಿಶಾಂತ್ ಇದ್ದರು. ಕಾರ್ಯದರ್ಶಿ ಮನೀಷ್ ವಂದಿಸಿದರು.















