ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಇಲ್ಲಿನ ಶಿರೂರು ಗ್ರಾಮದ ಸರಕಾರಿ ಹಾಡಿಯಲ್ಲಿ ಅಂದರ್-ಬಹರ್ ಇಸ್ಪೀಟ್ ಜುಗಾರಿ ನಿರತ 6 ಮಂದಿಯನ್ನು ಬೈಂದೂರು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಪಿಎಸ್‌ಐ ತಿಮ್ಮೇಶ್ ಮತ್ತು ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಆರೋಪಿಗಳಾದ ಶೇಖರ್ ಪಡುವರಿ, ಹರೀಶ್ ನಾಯ್ಕ ಭಟ್ಕಳ, ದೇವೇಂದ್ರ ಜಟ್ಟಪ್ಪ ನಾಯ್ಕ ಭಟ್ಕಳ, ಅಶೋಕ ವೆಂಕಟೇಶ್ ನಾಯ್ಕ ಭಟ್ಕಳ, ನಾಗಪ್ಪ ಗೋವಿಂದ ನಾಯ್ಕ ಭಟ್ಕಳ, ದಿವಾಕರ ಶಿರೂರು ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಆರೋಪಿಗಳಿಂದ ನಗದು 24,010, 3 ಬೈಕ್, 1 ಸ್ಕೂಟರ್, ಇಸ್ಪೀಟ್ ಎಲೆ ಸ್ವಾಧಿ ನಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ















