ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉತ್ತಮ ಕಲಾವಿದರನ್ನು ಒಳಗೊಂಡಂತಹ ಹಿಂದಿನ ವರ್ಷ 125ಕ್ಕೂ ಹೆಚ್ಚಿನ ಪ್ರದರ್ಶನವನ್ನು ನೀಡಿದ ಕಳವಾಡಿ ಮೇಳವು ಈ ಒಂದು ಸುಸಂದರ್ಭದಲ್ಲಿ ಎರಡನೇ ವರ್ಷಕ್ಕೆ ಪಾದಾರ್ಪಣೆಗೊಂಡಿದೆ ಎಂದು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಹೇಳಿದರು.
ಅವರು ಶ್ರೀ ಈಶ್ವರ ಮಾರಿಕಾಂಬ ಕೃಪಾಪೋಷಿತ ಯಕ್ಷಗಾನ ಮಂಡಳಿ ಶ್ರೀ ಕ್ಷೇತ್ರ ಕಳವಾಡಿ ಅಲ್ಲಿ ನಡೆದ ಪ್ರಥಮ ದೇವರ ಸೇವೆ ಆಟದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ನೂತನ ರಂಗಸ್ಥಳ ಉದ್ಘಾಟಿಸಿರುವವರು ಬೈಂದೂರು ಬಂಟರಯಾನೆ ನಾಡವರ ಸಂಘದ ಅಧ್ಯಕ್ಷ ಗೋಕುಲ್ ಶೆಟ್ಟಿ ಹಾಗೂ ಪ್ರಸಂಗ ಕರ್ತರಾದ ಡಾಕ್ಟರ್ ಬಸವರಾಜ್ ಶೆಟ್ಟಿಗಾರ್ ಅವರು ಮಾತನಾಡಿ, ಈ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿ ಮತ್ತು ಮುಂದಿನ ತಲೆಮಾರಿಗೆ ಅರ್ಪಿಸಬೇಕು ಎನ್ನುವುದರೊಂದಿಗೆ ಶುಭಶಂಸನೆಯನ್ನು ನೀಡಿದರು.
ಮುಂಬೈ ಹೋಟೆಲ್ ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ ಅವರು ಎಲ್ಲಾ ಅತಿಥಿ ಗಣ್ಯರೊಂದಿಗೆ ಸೇರಿ ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.


ಈ ಸಂದರ್ಭದಲ್ಲಿ ಗೌರವ ಉಪಸ್ಥಿತಿಯಲ್ಲಿ ಉಪ್ಪುಂದ ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್ ಗೋವಿಂದ ಬಾಬು ಪೂಜಾರಿ ಇದ್ದರು. ಮುಖ್ಯ ಅತಿಥಿಗಳಾಗಿ ಸಾಗರ ಬಂಟರ ಸಂಘ ಅಧ್ಯಕ್ಷ ಸುಧೀರ್ ಶೆಟ್ಟಿ ಹಕ್ಲಾಡಿ, ಸಿದ್ದಾಪುರ ಹಿಂಬಾಳೆ ಮನೆ ಸುರೇಶ್ ಶೆಟ್ಟಿ, ಮಂಗಳೂರು ಫಾದರ್ ಮಲ್ಲರ್ ಆಸ್ಪತ್ರೆ ಡಿ ಎಂ ಓ ಡಾ. ಪ್ರಭಾಕರ್, ಮಂಗಳೂರು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಮಾಜಿ ನಿರ್ದೇಶಕ ಬಿ. ರಘುರಾಮ್ ಶೆಟ್ಟಿ, ಮೇಳದ ಸಂಚಾಲಕರಾದ ಉದಯಕುಮಾರ್ ಸಂತೆಕಟ್ಟೆ ಹಾಗೆ ದೇವಳದ ಮುಕ್ತೇಸರರು ಅಭಿಜಿತ್ ಹೆಗ್ಡೆ ಕಳವಾಡಿ ಮತ್ತು ವಸಂತ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಉಪಸ್ಥಿತರಿದ್ದರು.
ಸಂಜೀವ್ ಆಚಾರ್ಯ ಕಳವಾಡಿ ಸ್ವಾಗತಿಸಿ, ಪ್ರದೀಪ್ ಕುಮಾರ್ ಶೆಟ್ಟಿ ಕಾರಿಕಟ್ಟೆ ಕಾರ್ಯಕ್ರಮವನ್ನು ನಿರೂಪಿಸಿ, ನಿರ್ವಹಿಸಿ, ಶಿವಕುಮಾರ್ ಧನ್ಯವಾದ ಅರ್ಪಿಸಿದರು.















