ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ‘ಸುರಭಿ ಸಂಸ್ಥೆ ಮಕ್ಕಳಿಗೆ` ಕಲಾ ಶಿಕ್ಷಣ ನೀಡುವುದರ ಮೂಲಕ ಸಮಾಜಕ್ಕೂ ಕಲಾ ಸೇವೆ ನೀಡುತ್ತಿದೆ. ಇದಕ್ಕೆ ಪ್ರತಿಫಲವಾಗಿ ಅವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ವಿಷಯ’ ಎಂದು ವಿಜಯ -ಬ್ಯಾಂಕ್ ನಿವೃತ್ತ ಸೀನಿಯರ್ ಮ್ಯಾನೇಜರ್ ವಸಂತ ಹೆಗ್ಡೆ ಹೇಳಿದರು.
ಅವರು ಇಲ್ಲಿನ ಸೇನೇಶ್ವರ ದೇವಾಲಯದ ವೇದಿಕೆಯಲ್ಲಿ ಕನ್ನಡ ಶಾರದಾ- ರಾಜ್ಯೋತ್ಸವ ಅಂಗವಾಗಿ ನಡೆದ ಕನ್ನಡ ನುಡಿ ಹಬ್ಬ, ರಾಜ್ಯಮಟ್ಟದ ಕಥಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಅಭಿನಂದನಾ ನುಡಿಗಳನ್ನಾಡಿದರು.
ಕಥಾ ಸ್ಪರ್ಧೆಯಲ್ಲಿ ರಂಜಿನಿ ಅಡಿಗ, ಕುಮಾರಸ್ವಾಮಿ ಲೇಔಟ್ ಬೆಂಗಳೂರು ಸುರಭಿ ಸಂಸ್ಥೆಗೆ ದೊರೆತ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ವಸಂತ ಹೆಗ್ಡೆ ಅನಾವರಣಗೊಳಿಸಿದರು.

ಅವರ ‘ಮುಸಾಫಿರ್ ಹೂಂ ಯಾರೋಂ’ ಕಥೆ ಪ್ರಥಮ, ಸದಾಶಿವ ಸೊರಟೂರು ಹೊನ್ನಾಳಿ, ದಾವಣಗೆರೆ ಅವರ ‘ಬ್ಲಾಕ್ ಅಂಡ್ ವೈಟ್’ ದ್ವಿತೀಯ, ಲಕ್ಷ್ಮಣ ಶೆರೆಗಾರ ಗೋಕಾಕ್ ಬೆಳಗಾವಿ ಅವರ ‘ಬಿಡುಗಡೆ’ ತೃತೀಯ ಬಹುಮಾನ ಪಡೆದರು.
ಸುರಭಿ ಅಧ್ಯಕ್ಷ ಆನಂದ ಮದ್ದೋಡಿ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಉಪನ್ಯಾಸಕಿ ರೇಖಾ ಬನ್ನಾಡಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಸೇನೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೀರೀಶ ಬೈಂದೂರು, ಸಾಹಿತಿ ಸುಧಾ ಆಡುಕಳ, ಲಯನ್ಸ್ ಕ್ಲಬ್ ಉಪ್ಪುಂದ ಅಧ್ಯಕ್ಷ ಉದಯ ಡಿ.ಆರ್. ಭಾಗವಹಿಸಿದ್ದರು.
ನಾಗರಾಜ ಯಡ್ತರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪೂರ್ಣಿಮಾ ಆಚಾರ್ಯ ಪ್ರಾರ್ಥಿಸಿದರು. ನಿರ್ದೇಶಕ ಸುಧಾಕರ ಪಿ. ಸ್ವಾಗತಿಸಿ, ಶಿಕ್ಷಕ ರಾಮಕೃಷ್ಣ ದೇವಾಡಿಗ ನಿರೂಪಿಸಿದರು. ಅರುಣಾ ರಾವ್, ಪ್ರಜ್ಞಾ ರಾವ್ ಕಟೀಲು ತಂಡದಿಂದ ಕನ್ನಡ ಗಾನಾರ್ಪಣೆ, ಸುರಭಿ ಕಲಾವಿದರಿಂದ ನೃತ್ಯಾರ್ಪಣೆ ಕಾರ್ಯಕ್ರಮ ನಡೆಯಿತು.















