Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಗಂಗೊಳ್ಳಿಯಲ್ಲಿ ಸಂಪನ್ನಗೊಂಡ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ʼಮಾತೃ ದೇವೋಭವʼ ಕಾರ್ಯಕ್ರಮ
    ಊರ್ಮನೆ ಸಮಾಚಾರ

    ಗಂಗೊಳ್ಳಿಯಲ್ಲಿ ಸಂಪನ್ನಗೊಂಡ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ʼಮಾತೃ ದೇವೋಭವʼ ಕಾರ್ಯಕ್ರಮ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಗಂಗೊಳ್ಳಿ
    : ದಿನವೂ ಹತ್ತಾರು ಮಕ್ಕಳನ್ನು ತಮ್ಮ ಸ್ವಂತ ಮನೆಯ ಮಕ್ಕಳಂತೆ ಕಾಳಜಿಯಿಂದ ಆರೈಕೆ ಮಾಡುವ, ಅಕ್ಷರದ ಅರಿವು ಮೂಡಿಸುವ, ಸಂಸ್ಕೃತಿಯನ್ನು ಕಲಿಸುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಕಾರ್ಯ ಅತ್ಯಂತ ಶ್ರೇಷ್ಠವಾದದ್ದು ಮತ್ತು ಅಭಿನಂದನನೀಯವಾದದ್ದು  ಎಂದು ಗಂಗೊಳ್ಳಿಯ ಪರ್ಸಿನ್ ಮೀನುಗಾರರ ಸ್ವಸಹಾಯ ಸಂಘದ ಅಧ್ಯಕ್ಷರಾದ ಲಕ್ಷ್ಮೀನಾರಾಯಣ ಮಡಿವಾಳ ಅಭಿಪ್ರಾಯಪಟ್ಟರು.

    Click Here

    Call us

    Click Here

    ಅವರು ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನಸೇವಾ ಬಳಗ ರಿ. ವತಿಯಿಂದ ಗಂಗೊಳ್ಳಿಯ ಸರಸ್ವತಿ ವಿದ್ಯಾಲಯದ ರೋಟರಿ ಸಭಾಂಗಣದಲ್ಲಿ ಕಳೆದ ಭಾನುವಾರ ನಡೆದ ಗಂಗೊಳ್ಳಿ ವಲಯದ 18 ಅಂಗನವಾಡಿ ಮತ್ತು ಶಿಶು ಮಂದಿರದ ಕಾರ್ಯಕರ್ತರು ಮತ್ತು ಸಹಾಯಕಿಯರನ್ನು ಅಭಿನಂದಿಸುವ ಮಾತೃ ದೇವೋ ಭವ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಗಂಗೊಳ್ಳಿಯ ಉದ್ಯಮಿ ವಿಠ್ಠಲ್ ಜಿ. ಶೆಣೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಂಗೊಳ್ಳಿಯ ಶ್ರೀ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಅಧ್ಯಕ್ಷರಾದ ಭವಾನಿ ಶಂಕರ್ ಖಾರ್ವಿ, ಮತ್ಸ್ಯೋದ್ಯಮಿ ರಾಘವೇಂದ್ರ ವಸಂತ ಮೇಸ್ತ, ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಶೇರುಗಾರ, ಗಂಗೊಳ್ಳಿಯ ಉದ್ಯಮಿ ಕಾರ್ತಿಕ್ ಯು ಶೇಟ್ ಮತ್ತು ಸಲೋನಿ ಕಾರ್ತಿಕ್ ಶೇಟ್ ಉಪಸ್ಥಿತರಿದ್ದರು. 

    ಈ ಸಂದರ್ಭದಲ್ಲಿ ಗಂಗೊಳ್ಳಿ ವಲಯದ ಅಂಗನವಾಡಿ ಕಾರ್ಯಕರ್ತೆಯರಾದ ಫಿಲೋಮಿನಾ ಫರ್ನಾಂಡಿಸ್, ಕಮಲ, ಸಂಗೀತ ಬಿ., ರೇಖಾ, ನಿಖಿತಾ ಭಂಡಾರಿ, ಶೇಷಮ್ಮ ಶೇರುಗಾರ್,  ಶೋಭಾ ಎಸ್.ಕೆ., ಸಹನಾ ಕೆ., ಅಂಗನವಾಡಿ ಸಹಾಯಕಿಯರಾದ ಸರೋಜ ಪೂಜಾರಿ, ಸೀಮಾ  ಖಾರ್ವಿ, ಶಾಂತಿ ಖಾರ್ವಿ, ರೇಷ್ಮಾ ಖಾರ್ವಿ, ಗೌರಿ, ಸುಜಾತ,  ಮುಕಾಂಬು, ಗೌರಿ ಖಾರ್ವಿ ಮತ್ತು ಗಂಗೊಳ್ಳಿಯ ನಿವೇದಿತಾ ಶಿಶು ಮಂದಿರದ ಪ್ರೇಮ ಮತ್ತು ನಾಗರತ್ನ ಅವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು. 

    ಗಂಗೊಳ್ಳಿಯ ಶ್ರೀ ನಾರಾಯಣ ಗುರು ಜನ ಸೇವಾ ಬಳಗದ ಅಧ್ಯಕ್ಷ ಗೋಪಾಲ ಪೂಜಾರಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಇತ್ತೀಚಿಗೆ ನಿಧನರಾದ ಸಾಲುಮರದ ತಿಮ್ಮಕ್ಕನಿಗೆ ನುಡಿ ನಮನಗಳನ್ನು ಅರ್ಪಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

    Click here

    Click here

    Click here

    Click Here

    Call us

    Call us

    ದಿಯಾ ಜಿ. ಪೈ ಪ್ರಾರ್ಥಿಸಿದರು. ಬಳಗದ ಪ್ರಧಾನ ಕಾರ್ಯದರ್ಶಿ ಹರ್ಷೇಂದ್ರ  ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಕಾರ್ತಿಕ್ ಬಿ. ಖಾರ್ವಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕೋಶಾಧಿಕಾರಿ ನರೇಂದ್ರ ಎಸ್. ಗಂಗೊಳ್ಳಿ ಕಾರ್ಯಕ್ರಮವನ್ನು ನಿರೂಪಿಸಿದರು. ಬಳಗದ ಉಪಾಧ್ಯಕ್ಷೆ ಮಮತಾ ವಂದಿಸಿದರು. ಸನ್ಮಾನಿತರ ಪರವಾಗಿ ಫಿಲೋಮಿನಾ ಫರ್ನಾಂಡಿಸ್ ಅವರು ಶ್ರೀ ನಾರಾಯಣ ಗುರು ಜನಸೇವಾ  ಬಳಗಕ್ಕೆ ಧನ್ಯವಾದ ಅರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ  ಐದು ಅದೃಷ್ಟಶಾಲಿ ವಿಜೇತರನ್ನು ಆಯ್ಕೆ ಮಾಡಿ ಬಹುಮಾನಗಳನ್ನು ವಿತರಿಸಲಾಯಿತು.

    Gangolli
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ

    20/05/2026

    ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ

    20/05/2026

    ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    20/05/2026
    Leave A Reply Cancel Reply

    3 + 1 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ. ಬಿ. ಹೆಗ್ಡೆ ಕಾಲೇಜು: ಜೀವನ ಮೌಲ್ಯ ಉಪನ್ಯಾಸ ಮಾಲಿಕೆ
    • ಜೆಸಿಐ ಹಾಲಾಡಿ ವಾರಾಹಿ ವತಿಯಿಂದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ
    • ಕೊರವಡಿ ಶಾಲಾ ಕಟ್ಟಡ ನಿರ್ಮಾಣಕ್ಕೆ ಶ್ರೀ‌ಕ್ಷೇತ್ರ ಧ.ಗ್ರಾ.ಯೋ. ಅನುದಾನ, ಮಂಜೂರಾತಿ ಪತ್ರ ಹಸ್ತಾಂತರ
    • ಆಳ್ವಾಸ್‌ನ ‘ಲಿಪಿ’ ಮುದ್ರಣಾಲಯ ಲೋಕಾರ್ಪಣೆ
    • ಮಕ್ಕಳ ಸಾಹಿತ್ಯ ಉತ್ಸವದ ಆಶುಲೇಖನ ಸ್ಪರ್ಧೆಯಲ್ಲಿ ಸಮೃದ್ಧಿ ವಿ. ಪೂಜಾರಿ ದ್ವಿತೀಯ ಸ್ಥಾನ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.