ಕುಂದಾಪ್ರ ಡಾಟ್ ಕಾಂ ಸುದ್ದಿ.
ಕೋಟ: ಶೈಕ್ಷಣಿಕ ಕ್ಷೇತ್ರದಲ್ಲಿ ವಿವೇಕ ವಿದ್ಯಾಸಂಸ್ಥೆಯ ಹೆಮ್ಮೆ ವಿದ್ಯಾದೇಗುಲ ಇಲ್ಲಿನ ಶಿಕ್ಷಣ ಗುಣಮಟ್ಟ ಅದ್ಭುತವಾದದ್ದು ಎಂದು ಕನ್ನಡದ ಚಿತ್ರನಟಿ ಶೀತಲ್ ಶೆಟ್ಟಿ ಹೇಳಿದರು.
ಅವರು ಶುಕ್ರವಾರ ಕೋಟ ವಿದ್ಯಾಸಂಘ, ಕೋಟ ವಿವೇಕ ವಿದ್ಯಾಸಂಸ್ಥೆಗಳು, ಕೋಟ ವಾರ್ಷಿಕೋತ್ಸವದ ಬಹುಮಾನ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣದಲ್ಲಿ ವಿವಿಧ ಸ್ತರಗಳ ಬಗ್ಗೆ ಚಿಂತಿಸುತ್ತೇವೆ ಆದರೆ ಮುಂದೆ ಹೋದಾಗ ನಮ್ಮಲ್ಲಿರುವ ಕೌಶಲ್ಯ ಕೆಲಸ ಮಾಡುತ್ತದೆ ಅದೇ ಮುಂದೆ ನಮ್ಮ ದಾರಿಯನ್ನು ಸುಲಲಿತಗೊಳಿಸುತ್ತದೆ, ಆಯ್ಕೆ ಮಾಡಿಕೊಂಡ ವಿದ್ಯಾಕ್ಷೇತ್ರ ಹೊರತುಪಡಿಸಿ ನಮ್ಮ ಜೀವನ ಆಯ್ಕೆ ಬೇರೆಯದ್ದೆ ಆಗಿರುತ್ತದೆ.

ನಿಮ್ಮಲ್ಲಿರುವ ಸ್ಕೀಲ್ ಇದ್ದರೆ ನಿಮ್ಮನ್ನು ಬಹು ಎತ್ತರಕ್ಕೆ ಕೊಂಡ್ಯೋಯುತ್ತದೆ. ನಮ್ಮ ಆಯ್ಕೆ ನಮ್ಮ ಜೀವನದ ತಳಹದಿಯನ್ನು ಗಟ್ಟಿಗೊಳಿಸುವ ಹಾಗೇ ಮುನ್ನಡೆಯಬೇಕು. ನಿಮ್ಮಲ್ಲಿರು ಅಗಾಧವಾದ ಪ್ರತಿಭೆಗಳನ್ನು ಹೊರ ಚುಮ್ಮಿಸಲು ಪ್ರಯತ್ನಿಸಿ ಆಗ ನಿಮ್ಮ ಬದುಕಿನಲ್ಲಿ ಸಾರ್ಥಕ್ಯ ಕಾಣಲು ಸಾಧ್ಯ. ಜೀವನದಲ್ಲಿ ಸೋಲು ಗೆಲುವು ಇದದ್ದೆ ಸೋತ್ತಿದ್ದೇನೆ ಎಂಬ ಭ್ರಮೆಯಿಂದ ಹೊರಬನ್ನಿ. ಭವಿಷ್ಯದ ಭದ್ರ ಬುನಾದಿಗೆ ಪ್ರೇರಕ ಶಕ್ತಿಯಾಗಿ ಜಗತ್ತಿಗೆ ಪ್ರಜ್ವಲಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿದ್ಯಾಸಂಘದ ಅಧ್ಯಕ್ಷ ಸಿ.ಎ ಪಿ. ಪ್ರಭಾಕರ ಮಯ್ಯ ವಹಿಸಿದ್ದರು. ಜಾಗೃತಿ ಸಂಚಿಕೆಯನ್ನು ಬೆಂಗಳೂರಿನ ಸಾಫ್ಟ್‌ವೇರ್ ಕಂಪನಿಯ ಮುಖ್ಯಸ್ಥ ಕಮಲ್ ಕಾರಂತ್ ಐರೋಡಿ ಬಿಡುಗಡೆಗೊಳಿಸಿದರು. ವಿಶೇಷ ಅಥಿತಿಗಳಾದ ಅಮೇರಿಕರದ ವೈದ್ಯರಾದ ಡಾ. ಶ್ರೀಪತಿ ಹೊಳ್ಳ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ವೇದಿಕೆಯಲ್ಲಿದ್ದ ಮೂವರು ಹಿಂದಿನ ವಿದ್ಯಾರ್ಥಿಗಳಾದ ಕಮಲ್ ಕಾರಂತ್, ಶೀತಲ್ ಶೆಟ್ಟಿ, ಡಾ. ಸ್ವಸ್ತಿಕ್ ಉಪಾಧ್ಯಾ ಅವರುಗಳನ್ನು ಅಭಿನಂದಿಸಲಾಯಿತು.
ಅಭ್ಯಾಗತರಾಗಿ ಮಂಗಳೂರಿನ ಫಾದರ್ ಮುಲ್ಲರ್ಸ್ ಆಸ್ಪತ್ರೆ ವೈದ್ಯರಾದ ಡಾ| ಸ್ವಸ್ತಿಕ್ ಉಪಾಧ್ಯ ಪಿ., ವಿವೇಕ ವಿದ್ಯಾಸಂಸ್ಥೆಯ ಹಿಂದಿನ ವಿದ್ಯಾಸಂಘದ ಅಧ್ಯಕ್ಷ ರಮಾನಂದ ಭಟ್, ವಿದ್ಯಾಸಂಘದ ಉಪಾಧ್ಯಕ್ಷ ಶ್ರೀಧರ ಉಪಾಧ್ಯಾ, ಕಾರ್ಯದರ್ಶಿ ರಾಮದೇವ ಐತಾಳ್, ವಿವೇಕ ಬಾಲಕೀಯರ ಪ್ರೌಢಶಾಲಾ ಮುಖ್ಯ ಶಿಕ್ಷಕ ವೆಂಕಟೇಶ ಉಡುಪ, ಆಂಗ್ಲ ಮಾಧ್ಯಮ ವಿಭಾಗದ ಮುಖ್ಯ ಶಿಕ್ಷಕಿ ಪ್ರೀತಿ ರೇಖಾ ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲ ಕೆ.ಜಗದೀಶ್ ನಾವಡ ಸ್ವಾಗತಿಸಿ, ಪರಿಚಯಿಸಿದರು. ಕಾಲೇಜಿನ ಕನ್ನಡ ಪ್ರಾಧ್ಯಾಪಕ ಸದಾಶಿವ ಹೊಳ್ಳ ಕಾರ್ಯಕ್ರಮ ನಿರೂಪಿಸಿ, ಬಾಲಕರ ವಿಭಾಗದ ಮುಖ್ಯ ಶಿಕ್ಷಕ ಪ್ರೇಮಾನಂದ ವಂದಿಸಿದರು.















