ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು. ಕ್ರೀಡಾಪಟು ಸಮಯ ನಿರ್ವಹಣೆ, ಶಿಸ್ತು ಮತ್ತು ತಾಳ್ಮೆಯನ್ನು ಮೈಗೂಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ಜನತಾ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಕೃಷ್ಣ ಮೊಗವೀರ ಹೇಳಿದರು.
ಅವರು ಕುಂದಾಪುರದ ಗಾಂಧಿ ಮೈದಾನದಲ್ಲಿ ನಡೆದ ಡಾ| ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಕೆ. ಉಮೇಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ನಿರ್ದೇಶಕ ರಂಜಿತ ಟಿ.ಎನ್. ಉಪಸ್ಥಿತರಿದ್ದರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪೂಜಾ ಕುಂದರ್ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಶೆಟ್ಟಿ ಹೆಸ್ಕತ್ತೂರು ಬಹುಮಾನ ವಿಜೇತರ ಪಟ್ಟಿ ವಾಚಿಸಿದರು.
ಪ್ರಥಮ ಬಿ.ಕಾಂ. (ಬಿ) ವಿಭಾಗದ ಪ್ರತೀಕ್ಷಾ ಶೆಟ್ಟಿ, ದ್ವಿತೀಯ ಬಿಸಿಎ ವಿಭಾಗದ ರೋಹನ್ ಆರ್. ನಾಯ್ಕ್ ವೈಯಕ್ತಿಕ ಚಾಂಪಿಯನ್ ಪ್ರಶಸ್ತಿ. ಸಮಗ್ರ ವಿಭಾಗದಲ್ಲಿ ತೃತೀಯ ಬಿಸಿಎ (ಬಿ) ವಿಭಾಗ ಪ್ರಥಮ, ತೃತೀಯ ಬಿ.ಕಾಂ. (ಬಿ) ವಿಭಾಗ ದ್ವಿತೀಯ ಹಾಗೂ ಪ್ರಥಮ ಬಿ.ಕಾಂ. (ಬಿ) ವಿಭಾಗ ತೃತೀಯ ಸ್ಥಾನವನ್ನು ಪಡೆದರು. ಬೆಳಿಗ್ಗೆ ನಡೆದ ಪಥ ಸಂಚಲನದಲ್ಲಿ ದ್ವಿತೀಯ ಬಿ.ಕಾಂ. (ಬಿ) ಪ್ರಥಮ, ತೃತೀಯ ಬಿ.ಕಾಂ. (ಇ) ದ್ವಿತೀಯ ಹಾಗೂ ತೃತೀಯ ಬಿಬಿಎ ತೃತೀಯ ಸ್ಥಾನವನ್ನು ಪಡೆದರು.










