ಕುಂದಾಪುರ: ಇಲ್ಲಿನ ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಮಾಹೆ ಸಂಸ್ಕೃತಿ ಸಮನ್ವಯ ಸಮಿತಿ ಮತ್ತು ಸ್ಪಿಕ್ ಮೆಕೆ ಸಹಯೋಗದೊಂದಿಗೆ ಬಿಸ್ಮಿಲ್ಲಾ ಪ್ರಶಸ್ತಿ ಪಡೆದ ಪ್ರಸಿದ್ಧ ಒಡಿಸ್ಸಿ ನೃತ್ಯಗಾರ ರಾಹುಲ್ ಆಚಾರ್ಯ ಅವರು ಒಡಿಸ್ಸಿ ನೃತ್ಯವನ್ನು ಬುಧವಾರ ಪ್ರದರ್ಶಿಸಿದರು.
ಅವರ ತಂಡದ ಮೃದಂಗ ವಾದಕ ದಿವಸ್ಕರ್ ಪರಿದ್, ಗಾಯಕ ಸುಕಾಂತ್ ಕುಂದ, ವಾಯಲಿನ್ ವಾದಕ ಪ್ರದೀಪ್ ಕುಮಾರ್ ಮಹಾರಾಣ, ಮಂಜ್ರಾ ವಾದಕ ಸುಮುಖ ತಮನ್ಕರ್ ಅವರ ಹಿಮ್ಮೇಳದ ಸಹಕಾರದೊಂದಿಗೆ ಓಡಿಸ್ಸಿ ನೃತ್ಯ ಪ್ರದರ್ಶನ ನೀಡಲಾಯಿತು. ನೃತ್ಯವನ್ನು ನಾಲ್ಕು ವಿಭಾಗಗಳಲ್ಲಿ ಪ್ರದರ್ಶಿಸಿ, ನಂತರ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ನಡೆಸಲಾಯಿತು.

ಭಂಡಾರ್ಕಾರ್ಸ್ ಕಾಲೇಜಿನ ವಿಶ್ವಸ್ಥ ಮಂಡಳಿಯ ಉಪಾಧ್ಯಕ್ಷರಾದ ಕೆ. ಶಾಂತಾರಾಮ್ ಪ್ರಭು ಅವರು ರಾಹುಲ್ ಆಚಾರ್ಯ ಮತ್ತು ಅವರ ತಂಡವನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಭಂಡಾರ್ಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಶುಭಕರಾಚಾರಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶಶಾಂಕ್ ಪಟೇಲ್ ಸ್ವಾಗತಿಸಿ, ಡಾ. ಗಣೇಶ್ ಶೆಣೈ ಪರಿಚಯ ಭಾಷಣ ಮಾಡಿದರು ಮತ್ತು ದುರ್ಗಾ ಪ್ರಸಾದ್ ಮಯ್ಯ ಧನ್ಯವಾದಗಳನ್ನು ಅರ್ಪಿಸಿದರು.















