ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ತಾಲೂಕಿನ ಗಂಗೊಳ್ಳಿ ಗ್ರಾಮದಲ್ಲಿ ಡಿ.23, ಸಂಜೆ 5-30ಕ್ಕೆ ವೀರ ಸಾವರ್ಕರ್ ಪ್ರೇಮಿಗಳ ಬಳಗದವರು “ನಿಜ ಮಹಾತ್ಮ ಅಂಬೇಡ್ಕರ್ ” ಶೀರ್ಷಿಕೆಯಡಿ ಮುಚ್ಚಿಟ್ಟ ಸತ್ಯವನ್ನು ತಿಳಿಯೋಣ ಇತರರಿಗೆ ತಿಳಿಸೋಣ ಎನ್ನುವ ಉಪ ಶೀರ್ಷಿಕೆ ನೀಡಿ ಆಯೋಜನೆ ಮಾಡಿರುವ ಅಂಬೇಡ್ಕರ್ ಕುರಿತಾದ ನಾಟಕದಲ್ಲಿ ಅಂಬೇಡ್ಕರ್ ಬಗೆಗೆ ಕಪ್ಪು ಕಲ್ಪಿತ ವಿಷಯಗಳನ್ನು ಪ್ರಸ್ತಾವನೆ ಮಾಡಿ ಸಮಾಜದಲ್ಲಿ ಗೊಂದಲ ಉಂಟು ಮಾಡುವ ಉದ್ದೇಶ ಇರುವುದರಿಂದ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಿ. ಉಡುಪಿ ಜಿಲ್ಲಾ ಸಮಿತಿ ಗಂಗೊಳ್ಳಿ ಪೊಲೀಸ್ ಠಾಣಾಧಿಕಾರಿಯವರಿಗೆ ಆಕ್ಷೇಪಣಾ ಪತ್ರ ನೀಡಿದ್ದಾರೆ.
ಈ ಸಂದರ್ಭದಲ್ಲಿ ಯಥಾಪ್ರತಿಗಳನ್ನು ಕುಂದಾಪುರ ಡಿವೈಎಸ್ಪಿ ಮೂಲಕ ಉಡುಪಿ ಎಸ್.ಪಿ. ಅವರಿಗೆ, ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಕುಂದಾಪುರ ಅವರಿಗೆ, ಕುಂದಾಪುರ ತಹಶೀಲ್ದಾರ್ ಅವರಿಗೆ ಹಾಗೂ ಗಂಗೊಳ್ಳಿ ಗ್ರಾಮ ಪಂಚಾಯತ್ ಪಿಡಿಓ ಅವರಿಗೆ ನೀಡಿದರು.
ಈ ವೇಳೆ ಭೀಮಘರ್ಜನೆ ಉಡುಪಿ ಜಿಲ್ಲಾ ಸಂಚಾಲಕರಾದ ಚಂದ್ರ ಅಲ್ತಾರ್, ಸಂಘಟನಾ ಸಂಚಾಲಕರುಗಳಾದ ರಾಘು ಶಿರೂರು, ಶಶಿ ಬಳ್ಕೂರು ಕುಂದಾಪುರ ತಾಲೂಕು ಸಂಚಾಲಕರಾದ ಮಂಜುನಾಥ್ ಗುಡ್ಡೆ ಅಂಗಡಿ, ಬೈಂದೂರು ತಾಲೂಕು ಸಮಿತಿಯ ರಾಘವೇಂದ್ರ ಹೆರಂಜಾಲು, ಮನೋಜ್ ಕುಮಾರ್ ಉಪಸ್ಥಿತರಿದ್ದರು.










