ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಬಾಡ ಗ್ರಾಮದ ಕೆಂಪಿನಕೆರೆ ಶ್ರೀ ಜಟ್ಟಿಗೇಶ್ವರ ದೈವಸ್ಥಾನದ ನೂತನ ದೈವಸ್ಥಾನ ಕಟ್ಟಡಗಳ ಲೋಕಾರ್ಪಣೆ ಕೆಂಪಿನಕೆರೆ ಜಟ್ಟಿಗೇಶ್ವರ ಹಾಗೂ ಸಪರಿವಾರ ದೈವಗಳು ಮತ್ತು ನಾಗ ದೇವರ ಪುನಃಪ್ರತಿಷ್ಠಾ ಮಹೋತ್ಸವವು ದಿನಾಂಕ 10 ಜನವರಿ 2026ರ ಶನಿವಾರದಿಂದ ಮೊದಲ್ಗೊಂಡು 12 ಜನವರಿ 2026ರ ಸೋಮವಾರದ ತನಕ ನಡೆಯಲಿದೆ.
ದಿನಾಂಕ 10-01-2026ರ ಶನಿವಾರ ದೇವತಾ ಕಾರ್ಯಗಳಿಗೆ ಚಾಲನೆ ದೊರೆಯಲಿದ್ದು, ದೇವರ ಪ್ರಾರ್ಥನೆ, ಮೆರವಣಿಗೆ, ಪೂಜೆ ಹಾಗೂ ಹೋಮಹವನಗಳು ಜರುಗಲಿದೆ.

ದಿನಾಂಕ 11-01-2026ರ ಭಾನುವಾರ ಬೆಳಿಗ್ಗೆ ಗಂಟೆ 08-00ರಿಂದ ವಿವಿಧ ಹೋಮ, ಬೆಳಿಗ್ಗೆ ಗಂಟೆ 10-40ರ ಕುಂಭ ಲಗ್ನದಲ್ಲಿ ಶ್ರೀ ಜಟ್ಟಿಗೇಶ್ವರ ದೇವರ ಹಾಗೂ ಸಪರಿವಾರ ದೈವಗಳ ಪುನಃಪ್ರತಿಷ್ಠೆ, ವಿವಿಧ ಹವನಗಳು ಗಂಟೆ 11-40ರ ಶುಭ ಲಗ್ನದಲ್ಲಿ ನಾಗಶಿಲಾ ಪ್ರತಿಷ್ಠೆ, ಹೋಮಾದಿಗಳು, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಅಂದು ಮಧ್ಯಾಹ್ನ ಗಂಟೆ 03-00ರಿಂದ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮಗಳು ಜರುಗಲಿದೆ. ಸಂಜೆ ಗಂಟೆ 06-00ರಿಂದ ಮಂಡಲ ದರ್ಶನ, ಕಲಶ ಸ್ಥಾಪನೆ ಹಾಗೂ ಇನ್ನಿತರ ಧಾರ್ಮಿಕ ವಿಧಿಗಳು ಜರುಗಲಿದೆ.
ದಿನಾಂಕ 12-01-2026ರ ಸೋಮವಾರ ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭಗೊಂಡ ಬಳಿಕ ದೇವರ ಬ್ರಹ್ಮಕಲಶಾಭಿಷೇಕ, ಶಾಂತಿ ಹೋಮಗಳ ಪೂರ್ಣಾಹುತಿ, ಮಹಾಪೂಜೆ, ಪ್ರಾರ್ಥನೆ, ತೀರ್ಥಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಗಂಟೆ 12-30ರಿಂದ ಮಹಾ ಅನ್ನಸಂತರ್ಪಣೆ ಜರುಗಲಿದೆ. ಮಧ್ಯಾಹ್ನ ಗಂಟೆ 03-00ಕ್ಕೆ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ಸಂಜೆ ಗಂಟೆ 05-00ರಿಂದ ಬಾಡ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ ಗಂಟೆ 06ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ರಾತ್ರಿ ಗಂಟೆ 08-00ರಿಂದ ಬೈಂದೂರಿನ ಇನಿದನಿ ಸಂಗೀತ ತಂಡದಿಂದ ಭಕ್ತಿ ಭಾವ ಲಹರಿ – ಸುಗಮ ಸಂಗೀತ ಕಾರ್ಯಕ್ರಮಗಳು ಜರುಗಲಿದೆ.

ಪುನಃಪ್ರತಿಷ್ಠಾ ಮಹೋತ್ಸವಕ್ಕೆ ಹೊರೆಕಾಣಿಕೆಗಳನ್ನು ನೀಡುವವರು 09-01-2026ರ ಶುಕ್ರವಾರದ ಮೊದಲು ನೀಡಿ ಸಹಕರಿಸುವಂತೆ ಕೋರಲಾಗಿದೆ. ಪುನಃಪ್ರತಿಷ್ಠಾ ಮಹೋತ್ಸವದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಕೆಂಪಿನಕೆರೆ ಶ್ರೀ ಜಟ್ಟಿಗೇಶ್ವರ ದೈವಸ್ಥಾನ ಜೀರ್ಣೋದ್ದಾರ ಸಮಿತಿ ಬಾಡ – ಬೈಂದೂರು ಇದರ ಅಧ್ಯಕ್ಷರಾದ ಅಧ್ಯಕ್ಷರಾದ ನಾಗಭೂಷಣ ಭಟ್ಟ, ಕಾರ್ಯಾಧ್ಯಕ್ಷರಾದ ಜನಾರ್ಧನ ಯು. ಬಾಡ, ಕಾರ್ಯದರ್ಶಿ ಸತ್ಯನಾರಾಯಣ ಜಿ. ಹಾಗೂ ಪದಾಧಿಕಾರಿಗಳು ಮತ್ತು ಸರ್ವಸದಸ್ಯರು ಕೋರಿದ್ದಾರೆ.
ಕೆಂಪಿನಕೆರೆ ಶ್ರೀ ಜಟ್ಟಿಗೇಶ್ವರ ದೈವಸ್ಥಾನ ಹಾಗೂ ಪರಿವಾರ ದೈವಗಳ ವಾರ್ಷಿಕ ಗೆಂಡಸೇವೆ ಹಾಗೂ ಹಾಲುಹಬ್ಬ ಉತ್ಸವವು ದಿನಾಂಕ 17-01-2026ನೇ ಶನಿವಾರದಿಂದ ಮೊದಲ್ಗೊಂಡು 18-01-2026ನೇ ಭಾನುವಾರದ ತನಕ ಜರುಗಲಿದ್ದು ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.
ಮಾಹಿತಿಗಾಗಿ
9449487514, 9448428958, 8050266747















