ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಜೀವನದಲ್ಲಿ ನಾವು ಎಷ್ಟೇ ಯಶಸ್ಸು ಗಳಿಸಬಹುದು ಆದರೆ ಶಿಕ್ಷಣ ಇಲ್ಲದೆ ಜೀವನ ಶೂನ್ಯ. ಶಿಕ್ಷಣ ಅಭಿಮಾನಿಗಳ ಸಹಕಾರ ಇದ್ದಾಗ ಸಂಸ್ಥೆಯ ಪ್ರಗತಿ ಸಾಧ್ಯ. ಪಾಲಕರ ಜವಾಬ್ದಾರಿ ಮತ್ತು ಶಿಕ್ಷಕರ ಕಾಳಜಿಯಿಂದ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ. ಗ್ರಾಮೀಣ ಭಾಗದಲ್ಲಿ ನೈಜ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉತ್ತಮ ಪ್ರೋತ್ಸಾಹ ಮತ್ತು ಶೈಕ್ಷಣಿಕ ವಾತಾವರಣ ನೀಡಿದಾಗ ಯಶಸ್ಸು ಸಾಧ್ಯ ಬದಲಾವಣೆಗೆ ಹೊಂದಿಕೊಂಡು ಹೊಸತನ ಅಳವಡಿಸಿಕೊಂಡಾಗ ಶೈಕ್ಷಣಿಕ ಪ್ರಗತಿ ಸಾಧ್ಯ ಎಂದು ನಿವೃತ್ತ ಸೈನಿಕ ಹಾಗೂ ಸಾಹಿತಿ ಚಂದ್ರಶೇಖರ ನಾವಡರು ಹೇಳಿದರು.
ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಲ್ಲಿಬಾರು (ಹೊಸೂರು) ಇದರ 2025-26ನೇ ಸಾಲಿನ ಶಾಲಾ “ಸಾಂಸ್ಕೃತಿಕೋತ್ಸವ” ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶಾಲಾ SDMC ಅಧ್ಯಕ್ಷ ದಯಾನಂದ ಮರಾಠಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬೈಂದೂರು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಶಿರೂರಿನ ಉದ್ಯಮಿ ಪ್ರಸಾದ್ ಪ್ರಭು, ಕಾಂಗ್ರೆಸ್ ಮುಖಂಡರಾದ ಶೇಖರ ಪೂಜಾರಿ ಉಪ್ಪುಂದ, ನ್ಯಾಯವಾದಿಗಳಾದ ಪ್ರಶಾಂತ್ ಪೂಜಾರಿ ಬೈಂದೂರು ಮತ್ತು ನ್ಯಾಯವಾದಿ ವಸಂತರಾಜ್ ಹೊಸೂರು, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮ್ಯಾಥ್ಯೂ ಕೆ.ಎಸ್. SDMC ಉಪಾಧ್ಯಕ್ಷೆ ಸುಮತಿ ಗಣೇಶ್ ಆಚಾರಿ, ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಪೂಜಾರಿ, ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ನಾಗರಾಜ ಕಂಬಾರ ಮಲ್ಲಿ, ವಾರ್ಷಿಕೋತ್ಸವ ಸಮಿತಿಯ ಗೌರವಾಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷ ಮಹದೇವ ಮರಾಠಿ, ಕಾರ್ಯದರ್ಶಿ ವಾಸುದೇವ ಮರಾಠಿ, ವಿದ್ಯಾರ್ಥಿ ನಾಯಕ ದರ್ಶತ್, ನಾಯಕಿ ದಿಯಾ ಮರಾಠಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕ ವಿದ್ಯಾರ್ಥಿಗಳನ್ನು ಮತ್ತು ದಾನಿಗಳನ್ನು ಸನ್ಮಾನಿಸಲಾಯಿತು. ಎಸ್ ಡಿ ಎಂ ಸಿ ಯ ಮಾಜಿ ಅಧ್ಯಕ್ಷ ನಾಗಪ್ಪ ಮರಾಠಿ ಪ್ರಾಸ್ತಾವಿಕ ಮಾತನಾಡಿ, ಹಳೆ ವಿದ್ಯಾರ್ಥಿ ಪ್ರಸ್ತುತ ಕೊಲ್ಲೂರು ಶಾಲೆಯ ಶಿಕ್ಷಕ ಶಿವರಾಮ ಮರಾಠಿ ಸ್ವಸ್ತಿ ವಾಚನ ಗೈದರು. ಶಾಲಾ ಮುಖ್ಯ ಶಿಕ್ಷಕ ಮಹಾಬಲೇಶ್ವರ ಎಸ್ ಸ್ವಾಗತಿಸಿ, ಗೌರವ ಶಿಕ್ಷಕ ಶ್ರೀಪಾದ್ ಬಹುಮಾನತರ ಪಟ್ಟಿ ವಾಚಿಸಿ, ಸಹ ಶಿಕ್ಷಕ ಸುಧಾಕರ್ ಪಿ. ಬೈಂದೂರು ಕಾರ್ಯಕ್ರಮ ನಿರೂಪಿಸಿ, ಸಹ ಶಿಕ್ಷಕ ವಿನಾಯಕ ಪಟಗಾರ ವಂದಿಸಿದರು.










