ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಉಡುಪಿ ಜಿಲ್ಲೆಯ ಪ್ರತಿಷ್ಟಿತ, ರಾಜ್ಯ ಪ್ರಶಸ್ತಿ ವಿಜೇತ ಗಂಗೊಳ್ಳಿ ಟೌನ್ ಸೌಹಾರ್ದ ಕೋ- ಆಪರೇಟಿವ್ ಸೊಸೈಟಿ ಇದರ ಅಧ್ಯಕ್ಷರಾಗಿ ಜಿ. ವೆಂಕಟೇಶ್ ಭಾಸ್ಕರ್ ಶೆಣೈ ಮತ್ತು ಉಪಾಧ್ಯಕ್ಷರಾಗಿ ಜಿ. ವಿಶ್ವನಾಥ ಆಚಾರ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಶ್ರೀ ಎಚ್. ಎಲ್. ಕಾಮತ್ ಆಡಳಿತ ಮಂಡಳಿ ಸಭಾಂಗಣದಲ್ಲಿ ಗುರುವಾರ ನಡೆದ ಸಭೆಯಲ್ಲಿ ಚುನಾವಣಾ ರಿಟನಿಂಗ್ ಅಧಿಕಾರಿ, ಸಹಕಾರ ಸಂಘಗಳ ಉಪನಿಬಂಧಕರ ಕಚೇರಿಯ ಹಿರಿಯ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್ ಸಿ. ಎಂ. ಅವಿರೋಧ ಆಯ್ಕೆಯನ್ನು ಘೋಷಿಸಿದರು.
ಜಿ. ವೆಂಕಟೇಶ ಶೆಣೈ ಅವರು ಕಳೆದ 10 ವರ್ಷಗಳಿಂದ ಸಹಕಾರಿಯ ನಿರ್ದೇಶಕರಾಗಿ, ಕಳೆದ 18 ತಿಂಗಳುಗಳಿಂದ ಅಧ್ಯಕ್ಷರಾಗಿ ಸಂಘದ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ. ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಜಿ. ವಿಶ್ವನಾಥ ಆಚಾರ್ಯ ಅವರು ಕಳೆದ 15 ವರ್ಷಗಳಿಂದ ಸಂಘದ ನಿರ್ದೇಶಕರಾಗಿ, 10 ವರ್ಷಗಳಿಂದ ಉಪಾಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಿರ್ದೇಶಕರಾದ ಎನ್. ಮಾಧವ ಕಿಣಿ, ಕೆ. ಪರಮೇಶ್ವರ ನಾಯಕ್, ರಾಮನಾಥ್ ಚಿತ್ತಾಲ್, ನಾಗಪ್ರಸಾದ್ ಪೈ ಎಂ.ಜಿ., ನಗರ್ ಅಶ್ವಿನ್ ಕುಮಾರ್ ನಾಯಕ್, ಗೀತಾ ಜಿ. ನಾಯಕ್, ದೀಪಾಲಕ್ಷ್ಮಿ ನಾಯಕ್, ಮಹಾಬಲ ಪೂಜಾರಿ, ಕಿರಣ್ ಪಿಲಿಪ್ ಪಿಂಟೋ ಹಾಗೂ ಜಿ. ಸುರೇಶ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಚುನಾವಣೆ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ರಿಟನಿಂಗ್ ಅಧಿಕಾರಿ ಸುನಿಲ್ ಕುಮಾರ್ ಸಿ. ಎಂ. ಅವರನ್ನು ಸಂಘದ ಪರವಾಗಿ ಗೌರವಿಸಿ ಸನ್ಮಾನಿಸಲಾಯಿತು. ಸಂಘದ ಮಾಜಿ ಅಧ್ಯಕ್ಷ ಎಚ್. ಗಣೇಶ್ ಕಾಮತ್ ಅವರು ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.
ಮುಖ್ಯ ಕಾರ್ಯನಿರ್ವಾಹಕ ಗಣೇಶ್ ನಾಯಕ್ ವಂದಿಸಿದರು.
















