ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಹರಿಓಂ ಗಂಗೊಳ್ಳಿ ಇದರ ಆಶ್ರಯದಲ್ಲಿ ಎಂ.ಜಿ. ಜಗನ್ನಾಥ ಪೈ, ಪೈ ಗ್ರೂಪ್ ಆಫ್ ಹೊಟೇಲ್ಸ್ ಬೆಂಗಳೂರು ಮತ್ತು ಜಿ. ವಿವೇಕಾನಂದ ನಾಯಕ್ ದುಬೈ ಪ್ರಾಯೋಜಕತ್ವದಲ್ಲಿ ಗಂಗೊಳ್ಳಿಯ ಎಸ್.ವಿ. ಹಿರಿಯ ಪ್ರಾಥಮಿಕ ಶಾಲೆಯ ವಠಾರದಲ್ಲಿ ಭಾನುವಾರ ಜರಗಿದ ಜಿ.ಎಸ್.ಬಿ. ಸಮಾಜ ಬಾಂಧವರ ಸತತ 7ನೇ ವರ್ಷದ 30 ಗಜಗಳ ಲೀಗ ಮಾದರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟ ’ಜಿ.ಜಿ.ಪಿ.ಎಲ್-2026’ದಲ್ಲಿ ಶ್ರೀ ಪಾರ್ಥಸಾರಥಿ ಇಲೆವೆನ್ ತಂಡ ಪ್ರಥಮ ಸ್ಥಾನ ಪಡೆದು ’ಜಿ.ಜಿ.ಪಿ.ಎಲ್-2026’ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.
ಕೆನರಾ ಸೂಪರ್ ಕಿಂಗ್ಸ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ಶ್ರೀ ಪಾರ್ಥಸಾರಥಿ ಇಲೆವೆನ್ ತಂಡದ ರಮೇಶ ಪೈ ಫೈನಲ್ ಪಂದ್ಯದ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ವಿಜಯೇಂದ್ರ ನಾಯಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ರಮೇಶ ಪೈ ಉತ್ತಮ ದಾಂಡಿಗ, ಗಣೇಶ ಪ್ರಭು ಉತ್ತಮ ಎಸೆತಗಾರ, ಅನಂತ ಪೈ ಮತ್ತು ವಿಜೇಶ ಪಡಿಯಾರ್ ಉತ್ತಮ ಕ್ಷೇತ್ರರಕ್ಷಕ ಹಾಗೂ ಪ್ರಥಮ ಆಚಾರ್ಯ ಉದಯೋನ್ಮುಖ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಸಮಾರೋಪ ಸಮಾರಂಭದಲ್ಲಿ ಗಂಗೊಳ್ಳಿಯ ಉದ್ಯಮಿ ಕೆ.ಪ್ರಭಾಕರ ನಾಯಕ್, ಆಟಕೆರೆ ಅನಂತ ಪೈ ಕೋಟೇಶ್ವರ, ಕೆ.ಸತೀಶ ಕಾಮತ್ ಕೋಟೇಶ್ವರ ಮತ್ತು ಬೆಂಗಳೂರು ಪಿಬಿಎ ಅಕಾಡೆಮಿ ಮಾಲೀಕ ಎಂ.ಪ್ರಭಾಕರ ಪೈ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿದರು. ಹರಿಓಂ ಸಂಸ್ಥೆಯ ವಿವೇಕ ಮಲ್ಯ ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಜಿ. ಸುದರ್ಶನ ಆಚಾರ್ಯ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.










