ಕುಂದಾಪುರ: ವಂಡ್ಸೆ ಗ್ರಾಮದ ಆತ್ರಾಡಿಯಲ್ಲಿ ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಡಿ.25ರಂದು ನಡೆಯಿತು. ನಿವೃತ್ತ ಮುಖ್ಯೋಪಾಧ್ಯಾಯರಾದ ಬಿ.ರಾಜೀವ ಶೆಟ್ಟಿ ಶಿಲಾನ್ಯಾಸ ನೆರವೇರಿಸಿದರು.
ವಿಜಯ ಬ್ಯಾಂಕ್‌ನ ನಿವೃತ್ತ ಡಿಜಿಎಂ ನಾರಾಯಣ ಶೆಟ್ಟಿ, ಭಾರತ ಸರ್ಕಾರದ ಅಂಕೆಸಂಖ್ಯೆ ವಿಭಾಗದ ನಿವೃತ್ತ ನಿರ್ದೇಶಕ ಬಿ.ಎನ್.ಶೆಟ್ಟಿ, ಅಂಕೆಸಂಖ್ಯೆ ವಿಭಾಗದ ನಿವೃತ್ತ ಜಂಡಿ ನಿರ್ದೇಶಕ ಬಿ.ಸುಭಾಶ್ಚಂದ್ರ ಶೆಟ್ಟಿ, ಇಂಜಿನಿಯರ್ ಬಾಲಕೃಷ್ಣ ಶೆಟ್ಟಿ ಆತ್ರಾಡಿ, ಎನ್.ಸೀತಾರಾಮ ಶೆಟ್ಟಿ ನೆಂಪು, ಹುಬ್ಬಳ್ಳಿಯ ಇಂಜಿನಿಯರ್ ಬಿ.ಪ್ರೇಮಾನಂದ ಶೆಟ್ಟಿ ಬಗ್ವಾಡಿ, ಹಕ್ಲಾಡಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಾ.ಕಿಶೋರ್ ಕುಮಾರ್ ಶೆಟ್ಟಿ, ಕರುಣಾಕರ ಶೆಟ್ಟಿ ಹೆಗ್ಗುಂಜೆ, ಸತೀಶಚಂದ್ರ ಪ್ರಕಾಶ್ ಶೆಟ್ಟಿ ಆತ್ರಾಡಿ, ವಂಡ್ಸೆ ತಿರುಮಲ ಲಕ್ಷ್ಮೀವೆಂಕಟರಮಣ ದೇವಳದ ಆಡಳಿತ ಮೊಕ್ತೇಸರ ವಿ.ಕೆ.ಶಿವರಾಮ ಶೆಟ್ಟಿ, ಸಿವಿಎಲ್ ಗುತ್ತಿಗೆದಾರ ರುದ್ರಯ್ಯ ಆಚಾರ್ಯ, ವಸಂತಿ ರಾಜ್‌ಗೋಪಾಲ ಶೆಟ್ಟಿ, ಶಾಲೆಯ ಸಂಚಾಲಕರಾದ ಸುಭಾಶ್ಚಂದ್ರ ಶೆಟ್ಟಿ, ಮುಖ್ಯೋಪಾಧ್ಯಾಯಿನಿ ದೀಪಿಕಾ ಸುಭಾಸ್, ಪೋಷಕ ಸಂಘದ ಅಧ್ಯಕ್ಷೆ ಅನಿತಾ ಆರ್.ಹೆಬ್ಬಾರ್, ಉಪಾಧ್ಯಕ್ಷೆ ದೀಪಾ, ಶಿಕ್ಷಕ ವೃಂದದವರು, ಶಿಕ್ಷಕೇತರ ಸಿಬ್ಬಂದಿ, ಪೋಷಕರು, ಗ್ರಾಮಸ್ಥರು ಉಪಸ್ಥಿತರಿದ್ದರು. ಪುರೋಹಿತರಾದ ಸುರೇಶ ಐತಾಳ್ ಧಾರ್ಮಿಕ ವಿಧಿವಿಧಾನ ನೆವೇರಿಸಿದರು.