ಹೊಸ ವರ್ಷ ತಂದ ದುರಂತ.15ವರ್ಷಗಳಿಂದ ಹಾಸಿಗೆ ಹಿಡಿದ ಯುವಕ

Call us

Call us

Call us

ಕುಂದಾಪ್ರ ಡಾಟ್ ಕಾಂ ವರದಿ.
ಕುಂದಾಪುರ: ಆ ಮನೆಯ ಸಂಭ್ರಮವೆಲ್ಲ ಉಡುಗಿ ಹದಿನೈದು ವರ್ಷಗಳೇ ಕಳೆದಿದೆ. ಹೊಸ ವರ್ಷ ಆಚರಣೆಗೆ ತೆರಳಿದ್ದವನಿಗೆ ವಿಧಿ ಸುಸ್ತು ಹೊಡೆಸಿದೆ. ಭವಿಷ್ಯದ ಕನಸುಗಳ ನನಸಾಗಿಸುತ್ತಾ ನಡೆಯಬೇಕಿದ್ದ ಯುವಕ ಚೈತನ್ಯ ಕಳೆದುಕೊಂಡು ವಿಕಲಚೇತನನಾಗಿ ಹಾಸಿಗೆ ಹಿಡಿದಿದ್ದಾನೆ. ಮಾತು ಮರೆತಿದ್ದಾನೆ. ತ್ರಾಣವಿಲ್ಲದೆ ಬದುಕಿರುವ ಮಗ, ಮಗುವಿನಂತೆ ತನ್ನ ತಾಯಿಯ ಆಸರೆಯಲ್ಲಿ ಬದುಕಿದ್ದಾನೆ.

Call us

Click Here

ಇದು ಸರಿಯಾಗಿ ಹದಿನೈದು ವರ್ಷಗಳ ಹಿಂದೆ ಹೊಸ ವರ್ಷದ ಆಹ್ವಾನಿಸುವ ಸಂಭ್ರಮದಲ್ಲಿ ಪಾಲ್ಗೊಳ್ಳಲು ಸ್ನೇಹಿತರೊಂದಿಗೆ ತೆರಳಿದ 21ವರ್ಷದ ದಿನೇಶ ಎಂಬ ಯುವಕನ ಬದುಕಿನ ದುರಂತ ಅಧ್ಯಾಯ. ಮೊಜಿನ ನಡುವಿನ ಸಣ್ಣ ಕಲಹ, ಕೆಲಸದ ನಡುವಿನ ಪೊಲೀಸರ ಆತುರ, ಯುವಕನಿಗೆ 36 ವರ್ಷಗಳಾದರೂ ಆತನ ಬದುಕನ್ನು ಜೀವಂತ ಶವವನ್ನಾಗಿಸಿದೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ದಿನೇಶರ ಬದುಕಿನಲ್ಲಿ ಕರಾಳ ದಿನ:
ಕುಂದಾಪುರ ಕಾಳಿಬೆಟ್ಟು ನಡುಮನೆ ನಿವಾಸಿ ದಿನೇಶ್, ಹೊಸ ವರ್ಷಾಚರಣೆ ಸಂಭ್ರಮದಲ್ಲಿ ಬದುಕು ಬರಡಾಗಿಸಿಕೊಂಡ ಯುವಕ. ದಿ.ಪಂಜು ಪೂಜಾರಿ ಮತ್ತು ಲಚ್ಚ ಅವರ ಒಂದು ಹೆಣ್ಣು ಮತ್ತು ಇಬ್ಬರು ಗಂಡು ಮಕ್ಕಳಲ್ಲಿ ಕಿರಿಯವರು. ಅಂದು 2000ನೇ ವರ್ಷ ಮುಗಿದು 2001ಕ್ಕೆ ಎದಿರು ನೋಡುತ್ತಿದ್ದ ದಿನ ಸ್ನೇಹಿತರ ಜೊತೆಗೂಡಿದ ದಿನೇಶ್ ಕೋಡಿಯಲ್ಲಿರುವ ಹೋಟೆಲ್ ಒಂದಕ್ಕೆ ತೆರಳಿದ್ದರು. ಅಲ್ಲಿ ಹೋಟೆಲ್ ಸರ್ವರ್ ಹಾಗೂ ದಿನೇಶ್ ಸ್ನೇಹಿತರ ನಡುವೆ ಸಣ್ಣ ಗಲಾಟೆ ನಡೆದು ಅದು ಹೊಡೆದಾಟದವರೆಗೂ ಸಾಗಿತ್ತು. ಅಲ್ಲಿದ್ದವರು ಮದ್ಯ ಪ್ರವೇಶಿಸಿ ಸಮಾಧಾನಗೊಳಿಸಿ ಹೊರಕಳುಹಿಸಿದ್ದರು

ಆದರೆ ಗಲಾಟೆ ಸಮಯದಲ್ಲಿ ದಿನೇಶ್ ಕೈಯಲ್ಲಿದ್ದ ಬ್ರಾಸ್‌ಲೈಟ್ ಬಿದ್ದು ಹೋಗಿತ್ತು. ಅದನ್ನು ಹುಡುಕಲು ಮತ್ತೆ ಹೊಟೆಲ್ ಗೆ ತೆರಳಿದರು. ಇತ್ತ ಹಿಂದಕ್ಕೆ ಬಂದ ದಿನೇಶರನ್ನು ಕಂಡು ಮತ್ತೆ ಆಕ್ರಮಣ ಮಾಡಬಹುದೆಂದು ತಿಳಿದ ಹೋಟೆಲ್ ಹುಡುಗರು ಬಾಟಲಿ ಹಿಡಿದು ತಲೆಗೆ ಹೊಡೆದೇ ಬಿಟ್ಟರು. ತಲೆಗೆ ಬಿದ್ದ ಏಟು ನೇರವಾಗಿ ಸ್ಪೈನರ್ ಸ್ವಾಡನ್ನು ಗಾಸಿಗೊಳಿಸಿ ಅರೆಪ್ರಜ್ಞರಾಗಿ ಬೀಳುತ್ತಾರೆ. ದುರದೃಷ್ಟವೆಂದರೆ ಇದೇ ನೋಡಿ. ದಿನೇಶರ ಬದುಕಿನ ದುರಂತ ಇಲ್ಲಿಗೆ ಮುಗಿಯೊಲ್ಲ. ಅದು ಕೋಡಿಯಲ್ಲಿ ಗಲಭೆ ನಡೆಯುತ್ತಿದ್ದ ಕಾಲ. ರೌಂಡ್ಸ್ ಗೆ ಬಂದ ಪೊಲೀಸರು ಕೋಡಿ ಪರಿಸರದ ರಸ್ತೆ ಬದಿಯಲ್ಲಿ ಬಿದ್ದಿದ್ದ ದಿನೇಶರನ್ನು ಕಂಡು ಕುಡಿದು ಗಲಾಟೆ ಮಾಡಿರಬಹುದೆಂದು ತಿಳಿದು ಠಾಣೆಗೆ ಕರೆದೊಯ್ದು ಮತ್ತೆ ಥಳಿಸಿದ್ದಾರೆ. ಮೊದಲೇ ಅರೆಪ್ರಜ್ಞಾವಸ್ಥೆಯಲ್ಲಿದ್ದ ದಿನೇಶ್ ಪೊಲೀಸರ ಪ್ರಹಾರಕ್ಕೆ ಸಂಪೂರ್ಣ ಪ್ರಜ್ಞೆ ಕಳೆದುಕೊಂಡು ಬಿದ್ದರು. ಪ್ರಜ್ಞೆ ಕಳೆದುಕೊಂಡ ಅವರನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿ ಮನೆಗೆ ಮಾಹಿತಿ ನೀಡಿ ಕೈತೊಳೆದುಕೊಳ್ಳುತ್ತಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

[quote font_size=”15″ bgcolor=”#ffffff” bcolor=”#dd0202″ arrow=”yes” align=”right”]ಕಳೆದ 15 ವರ್ಷದ ಹಿಂದೆ ಸ್ನೇಹಿತರೊಂದುಗೆ ತೆರಳಿದ್ದ ಮಗನನ್ನು ಮತ್ತೆ ಕಂಡಿದ್ದು ಮಣಿಪಾಲ ಖಾಸಗಿ ಆಸ್ಪತ್ರೆ ತೀವ್ರ ನಿಗಾ ವಿಭಾಗದಲ್ಲಿ. ಅಂದಿನಿಂದ ಚಿಕ್ಕ ಮಗುವಿನಂತೆ ಮಗನನ್ನು ಸಾಕಿದ್ದೆನೆ. ಸರಿಹೋಗುತ್ತಾನೆ ಎಂದು ಕಾದಿದ್ದೇ ಬಂತು. ಮಗ ಹಾಸಿಗೆ ಹಿಡಿದ ನಂತರ ಕೂಲಿ ಕೆಲಸ ಬಿಟ್ಟು ಆರೈಕಗೆ ನಿಂತೆ. ನಾಲ್ಕು ವರ್ಷದ ಹಿಂದೆ ಪತಿ ಕೂಡಾ ಮೃತಪಟ್ಟಿದ್ದು, ಹಿರಿಯ ಮಗನ ದುಡಿಮೆಯೇ ಮನೆಗೆ ದಿಕ್ಕು. ಮನೆ ಕೂಡಾ ಹೆದ್ದಾರಿ ವಿಸ್ತರಣೆಗೆ ಬಲಿಯಾಗುತ್ತಿದೆ. ವಿಕಚೇತನ ಮಾಸಾಸನ ಮತ್ತು ತನಗೆ ಸಂಧ್ಯಾ ಸುರಕ್ಷಾ ಸಿಕ್ಕರೆ ಗಂಜಿ ಕುಡಿದು ಬದುಕಬಹುದು.  – ಲಚ್ಚ ತಾಯಿ [/quote]

Click here

Click here

Click here

Click Here

Call us

Call us

ಒಂದು ತಿಂಗಳು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ದಿನೇಶ್ ಐಸಿಯನಲ್ಲಿರಿಸಲಾಯಿತು. ವಾರ್ಡಿಗೆ ಶಿಪ್ಟ್ ಆದರೂ ದಿನೇಶ ಮೊದಲಿನಂತಾಗಲಿಲ್ಲ. ಸ್ವಾಧೀನ ಕಳೆದುಕೊಂಡಿದ್ದರು. ಹಾಸಿಗೆಯಿಂದ ಏಳಲಾಗುತ್ತಿರಲಿಲ್ಲ. ವೈದ್ಯರು ಕೈಚೆಲ್ಲಿ ದಿನೇಶರನ್ನು ಮನಗೆ ಕರೆದೊಯ್ಯಿರಿ ಪ್ರತಿ ತಿಂಗಳು ಚಿಕಿತ್ಸೆ ಕೊಡಿಸಿ ಸರಿಯಾಗಬಹುದು ಎಂದು ಕಳುಹಿಸಿದರು. ಅವರು ಹೇಳಿ ಹದಿನೈದು ವರ್ಷವಾಯಿತು. ದಿನೇಶ್ ಹಾಗೇ ಇದ್ದಾರೆ. ಆದರೆ ಬೆಳಿಗ್ಗೆಯಿಂದ ಸಂಜೆಯ ತನಕ ಕುಳಿತುಕೊಳ್ಳುವಷ್ಟು ಚೇತರಿಸಿಕೊಂಡಿದ್ದಾರೆ. ಕೂಲಿ ಮಾಡಿ ಬದುಕುವ ದಿನೇಶ್ ಬಡ ಕುಟುಂಬಕ್ಕೆ ಔಷಧಿಗೆ ತಿಂಗಳಿಗೆ ಬೇಕಾಗುವ 2000ವನ್ನು ಹೊಂದಿಸುವುದು ಕಷ್ಟವಾಗುತ್ತಿದೆ. ಉಳಿದೆಲ್ಲದಕ್ಕೂ ತಾಯಿಯೇ ಆಸರೆಯಾಗಿದ್ದರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಮನೆಯೂ ಅತಂತ್ರ
ದಿನೇಶರದ್ದು ತೀರಾ ಬಡ ಕುಟುಂಬ. ಇವರ ಕಾರಣದಿಂದ ತಾಯಿ ಕೂಲಿ ಮಾಡುವುದನ್ನು ನಿಲ್ಲಿಸಿ ವರ್ಷಗಳೇ ಕಳೆದಿದೆ. ತಂದೆ ಅನಾರೋಗ್ಯದಿಂದ ತೀರಿಕೊಂಡು ನಾಲ್ಕು ವರ್ಷ ಸಂದಿದೆ. ಸಂಸಾರದ ಬಂಡಿಗೆ ಅಣ್ಣನೇ ದಾರಿ. ಹೇಗೊ ಜೀವನ ಸಾಗಿಸುತ್ತಿದ್ದ ಕುಟುಂಬಕ್ಕೆ ಹೆದ್ದಾರಿ ವಿಸ್ತರಣೆಯ ಆತಂಕ ತಂದೊಡ್ಡಿದೆ. 3 ಸೆಂಟ್ಸ್ ಜಾಗದಲ್ಲಿರುವ ಮನೆ ರಸ್ತೆ ಪಾಲಾಗಲಿದೆ. ಸರಕಾರ ನೀಡುವ ಪರಿಹಾರದಿಂದ ಮತ್ತೊಂದು ಮನೆ ಕಟ್ಟುವುದು ಬಿಡಿ, ಜಾಗ ಖರೀದಿಸುವುದು ಸಾಧ್ಯವಿಲ್ಲ. ನಮಗೆ ಬಯಲೇ ಗತಿ ಎಂದು ತಾಯಿ ಕಣ್ಣೀರಿಡುತ್ತಾರೆ. (ಕುಂದಾಪ್ರ ಡಾಟ್ ಕಾಂ ಸುದ್ದಿ)

ಹೊಸವರ್ಷದ ಮಸ್ತಿಯ ನಡುವೆ ಆದ ಸಣ್ಣ ಕಲಹ, ರಕ್ಷಣೆ ಮಾಡಬೇಕಾದ ಆರಕ್ಷಕರ ಆತುರ ಯುಕವನ ಬದುಕನ್ನೇ ಮೂರಾಮುಟ್ಟೆಯಾಗಿಸಿದೆ. ಆದರೂ ಆ ತಾಯಿಯ ಭರವಸೆ ಕುಗ್ಗಿಲ್ಲ. ದಿನೇಶರ ದುರಂತದ ಬದುಕು ಹೊಸವರ್ಷವೆಂಬ ಹದ್ದು ಮೀರಿ ವರ್ತಿಸುವ ಯುವಕರಿಗೊಂದು ಎಚ್ಚರಿಕೆಯ ಗಂಟೆಯಾಗಬೇಕಿದೆ.

– ಸುನಿಲ್ ಹೆಚ್. ಜಿ. ಬೈಂದೂರು

ಬಡ ಕುಟುಂಬಕ್ಕೆ ಆಸರೆಯಾಗಿ
ಲಚ್ಚ ಪೂಜಾರ್ತಿ
ನಡುಬೆಟ್ಟು, ಕೇಳಾಮನೆ,
ಆದರ್ಶ ಆಸ್ಪತ್ರೆಯ ಬಳಿ, ಕುಂದಾಪುರ.

Write a Mail for more details: editor@kundapra.com, kundapra.com@gmail.com

_MG_7507 _MG_7510 _MG_7511 _MG_7515 _MG_7521

[box type=”custom” color=”#ff0547″ bg=”#ffffff” fontsize=”15″ radius=”5″ border=”#1e73be”]Note: Copy / reproduction of published contents of Kundapra.com, without consent is illegal. Such persons will be prosecuted.[/box]

Leave a Reply