ಕುಂದಾಪುರ: ಅಂತರಾಷ್ಟ್ರೀಯ ಖ್ಯಾತಿಯ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯ ಅವರ ಹೆಸರು ಪ್ರಸಿದ್ಧ ಇಂಗ್ಲಿಷ್ ಮ್ಯಾಗಜಿನ್ ಫೋರ್ಬ್ಸ್ ನಲ್ಲಿ ಪ್ರಕಟಗೊಂಡಿದ್ದು ಕುಂದಾಪುರಕ್ಕೆ ಮತ್ತೊಂದು ಗರಿ ಬಂದಂತಾಗಿದೆ. ತನ್ನ ಸೂಕ್ಷ್ಮ ಸಂವೇದನೆಯ ರೇಖೆಗಳ ಮೂಲಕವೇ ಪ್ರಸಿದ್ಧಿ ಹೊಂದಿದ್ದ ಸತೀಶ್ ಆಚಾರ್ಯ ಅವರ ಹೆಸರು ಫೋರ್ಬ್ಸ್ ನಲ್ಲಿ ಕಾಣಿಸಿಕೊಂಡಿರುವುದು ಅವರ ಅಸಂಖ್ಯಾತ ಅಭಿಮಾನಿಗಳಿಗೆ ಮತ್ತಷ್ಟು ಖುಷಿ ನೀಡಿದೆ.
ಏನು ಹೇಳಿದೆ ಫೋರ್ಬ್ಸ್ ಮ್ಯಾಗಜಿನ್?
ಫೋರ್ಬ್ಸ್ ಮ್ಯಾಗಜಿನ್ ನ ವೇಗದಲ್ಲಿ ಬದಲಾಗುತ್ತಿರುವ ಭಾರತವನ್ನು ಜಗತ್ತಿಗೆ ಅಸಾಧಾರಣವಾಗಿ ವರ್ಣಿಸುತ್ತಿರುವ, ಭಾರತೀಯ ಮೂಲದ ವಿಶ್ವವಿಖ್ಯಾತ ಚಿಂತಕರೆಂದು ಹೇಳಲಾಗಿರುವ 24 ಮಂದಿ ಖ್ಯಾತನಾಮರ ಪಟ್ಟಿಯಲ್ಲಿರುವ ಭಾರತದ ಸತೀಶ್ ಆಚಾರ್ಯ ಅವರ ಹೆಸರೂ ಇದೆ.
ಮಂಗಳೂರು ಮೂಲದ ಚತುರ ಕಾರ್ಟೂನಿಸ್ಟ್ ಸತೀಶ್ ಆಚಾರ್ಯ ಅವರು ಭಾರತದ ರಾಜಕಾರಣ ಮತ್ತು ಭಾರತೀಯ ಕ್ರೀಡಾ ಲೋಕವನ್ನು ತಮ್ಮ ಅದ್ಭುತವಾದ ಕಾರ್ಟೂನ್ ಗೆರೆಗಳ ಮೂಲಕ ಸಮಗ್ರವಾಗಿ ಹಿಡಿದಿಡುತ್ತಾರೆ ಎಂದು ಹೇಳಿದೆ.