ಕುಂದಾಪ್ರಡಾಟ್ ಕಾಂ ಸುದ್ದಿ
ಅಮಾಸೆಬೈಲು: ತೆಂಗಿನ ಮರದಿಂದ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಅಮಾಸೆಬೈಲು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಚ್ಚಟ್ಟು ಗ್ರಾಮದ ಪರಮೇಶ್ವರ ನಾಯ್ಕ(55) ಎಂದು ಗುರುತಿಸಲಾಗಿದೆ. ಅವರು ಅಮಾಸೆಬೈಲು ಗ್ರಾಮದ ಅನಂತಯ್ಯ ಭಟ್ ಎಂಬವರ ಮನೆಯ ತೋಟಕ್ಕೆ ತೆಂಗಿನ ಕಾಯಿ ಕೊಯ್ಯುವ ಕೆಲಸಕ್ಕೆ ಹೋಗಿದ್ದು ತೆಂಗಿನ ಕಾಯಿ ಕೊಯ್ಯುವಾಗ ಆಕಸ್ಮಿಕವಾಗಿ ಕೈ ಜಾರಿ 30 ಅಡಿ ಎತ್ತರದಿಂದ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










