ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಹಿರಿಯ ನಾಗರಿಕರ ಹಗಲು ಯೋಗಕ್ಷೇಮ ಕೇಂದ್ರವನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ.
ಸೊಸೈಟಿ ರಿಜಿಸ್ಟ್ರೆಷನ್ ಆ್ಯಕ್ಟ್/ಟ್ರಸ್ಟ್ ಆ್ಯಕ್ಟ್ ನಡಿ ನೋಂದಣಿಯಾಗಿ ಕನಿಷ್ಠ 02 ವರ್ಷಗಳಾಗಿರುವ, ಹಗಲು ಯೋಗಕ್ಷೇಮ ಕೇಂದ್ರದಲ್ಲಿ ಸರ್ಕಾರದ ಆದೇಶಗಳಲ್ಲಿ ನಿಗದಿಪಡಿಸಲಾದ ವಿದ್ಯಾರ್ಹತೆಯುಳ್ಳ ಸೇವಾ ಮನೋಭಾವದ ಸಿಬ್ಬಂದಿಗಳನ್ನು ಹೊಂದಿರುವ, ಹಿರಿಯ ನಾಗರಿಕರ ಅವಶ್ಯಕತೆಗಳನ್ನು ಪೂರೈಸುವ ಮೂಲಭೂತ ಸೌಕರ್ಯ ಒದಗಿಸುವ ಸೇವಾ ಮನೋಭಾವ ಹೊಂದಿರುವ ಆಡಳಿತ ಮಂಡಳಿಯನ್ನು ಹೊಂದಿರುವ, ಸಂಸ್ಥೆಯ ಆಡಳಿತ ಮಂಡಳಿಯ ಕರ್ತವ್ಯಗಳು ಮತ್ತು ಜವಾಬ್ದಾರಿಗಳನ್ನು ಸ್ಪಷ್ಟ ಹಾಗೂ ಖಚಿತವಾಗಿರುವ ಉಪನಿಯಮಗಳನ್ನು (ಬೈಲಾ) ಹೊಂದಿರುವ, ಸಂಸ್ಥೆಯ ಆರ್ಥಿಕ ಸ್ಥಿತಿಗತಿಯು ಸದೃಢವಾಗಿರುವ, ಯಾವುದೇ ಓರ್ವ ವ್ಯಕ್ತಿ ಹಾಗೂ ಜನಾಂಗದ ಲಾಭಕ್ಕಾಗಿ ಸಂಸ್ಥೆಯನ್ನು ನಡೆಸದೇ ಸಂಸ್ಥೆಯು ಯಾವುದೇ ಜಾತಿ, ಪಂಥ, ಮತ ಮತ್ತು ಭಾಷೆಗಳನ್ನು ಪರಿಗಣಿಸದೇ ಎಲ್ಲರಿಗೂ ಸೌಲಭ್ಯ ಒದಗಿಸುವ ಹಾಗೂ ಇತರೇ ಅರ್ಹತೆ ಹೊಂದಿರುವ ಸ್ವಯಂ ಸೇವಾ ಸಂಸ್ಥೆಗಳು ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿಕಲಚೇತನರ ಸಬಲೀಕರಣ ಅಧಿಕಾರಿ ಕಛೇರಿ, ತಳ ಅಂತಸ್ತು, ಕೊಠಡಿ ಸಂಖ್ಯೆ 4, 5, ರಜತಾದ್ರಿ, ಮಣಿಪಾಲ, ಉಡುಪಿ ದೂರವಾಣಿ ಸಂಖ್ಯೆ: 0820-2574810 ಅನ್ನು ಸಂಪರ್ಕಿಸಬಹುದಾಗಿದೆ. ಜಿಲ್ಲೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಛೇರಿ ಪ್ರಕಟಣೆ ತಿಳಿಸಿದೆ.











