ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ದ ಇನ್ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ ಇವರು ಕಳೆದ ಮೇ. ತಿಂಗಳಿನಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಗುಜ್ಜಾಡಿ ಗ್ರಾಮದ ಮಂಕಿಯ ಜಿ. ಗಣೇಶ ಪೈ ಅವರು ಉತ್ತೀರ್ಣರಾಗಿದ್ದಾರೆ.
ಈತ ಗುಜ್ಜಾಡಿಯ ಜಿ. ದಾಮೋದರ ಪೈ ಹಾಗೂ ದಿವ್ಯ ಪೈ ದಂಪತಿಯ ಪುತ್ರ. ಆರ್ಟಿಕಲ್ ಶಿಪ್‌ನ್ನು ಕುಂದಾಪುರದ ಶಾನುಭೋಗ್ ಹೆಗ್ಡೆ ಮತ್ತು ಅಸೋಸಿಯೇಟ್ಸ್ ಸಂಸ್ಥೆಯಲ್ಲಿ ಪೂರೈಸಿದ್ದಾರೆ.
ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಶಾಲೆ ಮತ್ತು ಪದವಿ ಪೂರ್ವ ಹಾಗೂ ಪದವಿ ಶಿಕ್ಷಣವನ್ನು ಕುಂದಾಪುರದ ಭಂಡಾರ್‌ಕಾರ‍್ಸ್ ಕಾಲೇಜಿನಲ್ಲಿ ಪಡೆದಿದ್ದಾರೆ.











