ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಸ್ಕೂಟರ್‌ಗೆ ಕಾರು ಢಿಕ್ಕಿಯಾಗಿ ಸವಾರ ಗಾಯಗೊಂಡ ಘಟನೆ ಇಲ್ಲಿನ ಕಸಬಾ ಗ್ರಾಮದ ಆಭರಣ ಜ್ಯುವೆಲ್ಲರ್ ಶಾಫ್ ಹತ್ತಿರ, ಪ್ರಭಾತ್ ಟ್ರೇಡರ್ಸ್ ಶಾಪ್ ಎದುರುಗಡೆ ಪುರಸಭಾ ರಸ್ತೆಯಲ್ಲಿ ಮಂಗಳವಾರ ಬೆಳಗ್ಗೆ ಸಂಭವಿಸಿದೆ.
ಗಾಯಗೊಂಡ ವ್ಯಕ್ತಿ ಕೆ. ವೆಂಕಟರಮಣ ಶೆಣೈ ಎಂದು ಗುರುತಿಸಲಾಗಿದೆ.
ರಸ್ತೆ ಬದಿ ನಿಲ್ಲಿಸಿದ್ದ ಕಾರನ್ನು ಚಾಲಕ ವಿಶ್ವೇಶ್ ಯಾವುದೇ ಸೂಚನೆ ನೀಡದೆ ವೇಗ ಹಾಗೂ ನಿರ್ಲಕ್ಷ್ಯತನದಿಂದ ಮುಂದಕ್ಕೆ ಚಲಾಯಿಸಿ ವೆಂಕಟರಮಣ ಶೆಣೈ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಅವರಿಗೆ ಎಡಕಾಲಿನ ಮುಂಗಾಲು ಗಂಟಿಗೆ ಒಳ ಜಕಂ ಹಾಗೂ ಪಾದದ ಬಳಿ ತರಚಿದ ಗಾಯವಾಗಿದೆ.
ಗಾಯಗೊಂಡ ಅವರನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

















