ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಮೂರು ದಿನಗಳ ಕಾಲ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆ ಮೈಸೂರು ಇಲ್ಲಿನ ಬೋಧಕರುಗಳಾದ ಅಂಜಿದ ಪರ್ವೀನ್, ಡಾ. ಚೈತ್ರ ಎಚ್.ಸಿ ಮತ್ತು ದೀಪಾ ಓ. ಇವರುಗಳು ವಂಡ್ಸೆಯ ನಿರಾಮಯ ಸೊಸೈಟಿಯ ಮೂಲಕ ಅನುಷ್ಠಾನಗೊಳ್ಳುತ್ತಿರುವ ಸಮುದಾಯ ಉಪಶಮನ ಆರೈಕೆ ಕೇಂದ್ರವನ್ನು ಅಧ್ಯಯನ ಮಾಡಿ, ಕ್ಷೇತ್ರಕ್ಕೆ ಭೇಟಿ ನಡೆಸಿ, ಇದೇ ರೀತಿ ರಾಜ್ಯದ ಬೇರೆ ಗ್ರಾಮ ಪಂಚಾಯತ್‌ಗಳಲ್ಲಿ ಅನುಷ್ಠಾನ ಮಾಡಲು ಸರಕಾರ ಯೋಚಿಸಿರುವುದರಿಂದ ಸರಕಾರಕ್ಕೆ ವರದಿ ನೀಡಲು ನಿರಾಮಯ ಸೊಸೈಟಿಗೆ ಭೇಟಿ ನೀಡಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮತ್ತು ಕುಂದಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕೆಜಿ ಅವರೊಂದಿಗೂ ಸಹ ಈ ಬಗ್ಗೆ ಚರ್ಚಿಸಿದರು.











