Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ನೀಟ್ ಫಲಿತಾಂಶ: ಸುಜ್ಞಾನ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ
    ಊರ್ಮನೆ ಸಮಾಚಾರ

    ನೀಟ್ ಫಲಿತಾಂಶ: ಸುಜ್ಞಾನ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ

    Updated:18/07/2026No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇತ್ತೀಚೆಗೆ ಪ್ರಕಟಗೊಂಡ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET-2026) ಫಲಿತಾಂಶದಲ್ಲಿ ಕುಂದಾಪುರದ ಸುಜ್ಞಾನ ಪಿಯು ಕಾಲೇಜಿನ ಪ್ರಥಮ ಬ್ಯಾಚ್ನ ವಿದ್ಯಾರ್ಥಿಗಳು ಅತ್ಯುತ್ತಮ ಅಂಕಗಳನ್ನು ಗಳಿಸುವ ಮೂಲಕ ಕಾಲೇಜಿಗೆ ಅಭೂತಪೂರ್ವ ಕೀರ್ತಿ ತಂದಿದ್ದಾರೆ.

    Click Here

    Call us

    Click Here

    ಕೇವಲ 8 ವಿದ್ಯಾರ್ಥಿಗಳಿಂದ ಆರಂಭವಾದ ಈ ಸಂಸ್ಥೆಯು ತನ್ನ ಮೊದಲ ಪ್ರಯತ್ನದಲ್ಲೇ ಕುಂದಾಪುರ, ಬೈಂದೂರು, ಬ್ರಹ್ಮಾವರ ಹಾಗೂ ಹೆಬ್ರಿ ತಾಲೂಕುಗಳ ಎಲ್ಲಾ ಪಿಯು ಕಾಲೇಜುಗಳಿಗಿಂತ ಅತ್ಯುತ್ತಮವಾದ ಫಲಿತಾಂಶ ಪಡೆದು ಅಗ್ರಸ್ಥಾನದಲ್ಲಿದೆ.

    ಈ ಕಾಲೇಜಿನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಯಾದ ಸಮ್ಮೇದ ಪಾರೀಸ ಬೋಜ 720ಕ್ಕೆ 579 ಅಂಕ (ALL INDIA RANK 2135*) ಪಡೆದು ಶ್ರೇಷ್ಠ ಸಾಧನೆ ಮಾಡಿದ್ದಾರೆ.

    ಗ್ರಾಮೀಣ ಪ್ರತಿಭೆ ಸಮ್ಮೇದ ಪಾರೀಸ ಬೋಜ ALL INDIA RANK ಸಾಧನೆ:
    ಕಾಲೇಜಿನ ವಿದ್ಯಾರ್ಥಿಯಾದ ಸಮ್ಮೇದ ಪಾರೀಸ ಬೋಜ ಒಟ್ಟು 720 ಅಂಕಗಳಿಗೆ 579 ಅಂಕ ಪಡೆದು ALL INDIA RANK ಪಡೆಯುವ ಮೂಲಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಅತ್ಯಂತ ಗ್ರಾಮೀಣ ಹಿನ್ನೆಲೆಯಿಂದ ಬಂದು, ಎಸ್ಎಸ್ಎಲ್ ಸಿ ವರೆಗೆ ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮುಗಿಸಿದ್ದ ಸಮ್ಮೇದ ಅವರ ಈ ಸಾಧನೆ ನಿಜಕ್ಕೂ ಅನನ್ಯ. ಭಾಷೆ ಅಥವಾ ಗ್ರಾಮೀಣ ಹಿನ್ನೆಲೆ ಸಾಧನೆಗೆ ಎಂದಿಗೂ ಅಡ್ಡಿಯಾಗಲಾರದು ಎಂಬುದನ್ನು ಅವರು ಸಾಬೀತುಪಡಿಸಿ, ಎಲ್ಲರಿಗೂ ಮಾದರಿಯಾಗಿದ್ದಾರೆ.

    ಒಟ್ಟು 22 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಆ ಪೈಕಿ 5 ವಿದ್ಯಾರ್ಥಿಗಳು ಅತ್ಯಧಿಕ ಅಂಕಗಳನ್ನು ಗಳಿಸಿ ಸರ್ಕಾರಿ ಕೋಟದಡಿ ಎಂ.ಬಿ.ಬಿ.ಎಸ್ ಸೀಟ್ ಪಡೆಯುವ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ ಹಾಗೇ 17 ವಿದ್ಯಾರ್ಥಿಗಳು ನೀಟ್ ಅರ್ಹತೆ (Qualify) ಪಡೆದುಕೊಂಡಿದ್ದಾರೆ.

    Click here

    Click here

    Click here

    Call us

    Call us

    ಪ್ರಮುಖ ಸಾಧಕರು:

    • ಸಮ್ಮೇದ ಪಾರೀಸ ಬೋಜ: 579 / 720 (ALL INDIA RANK 2135*)

    •          ಇಂಚರಾ ಎಸ್ ಪೂಜಾರಿ (NEET ಅಕಾಡೆಮಿ ವಿದ್ಯಾರ್ಥಿನಿ): 537 / 720 (ALL INDIA     RANK 23941*)

    •          ಧನುಷ್ ದೇವಾಡಿಗ (NLT): 513 / 720 (ALL INDIA RANK 36395*)

    •          ಸುಶ್ಮಿತಾ ಪ್ರವೀಣ್ ಕುಮಾರ್ ಸುಕಾಲಿ: 451 / 720 (ALL INDIA RANK 20144*)

    •          ಜಯರಾಜ್ ಜೆ.ಎಸ್: 431 / 720 (ALL INDIA RANK 14955*)

    ಕಾಲೇಜಿನ ವಿದ್ಯಾರ್ಥಿಗಳಾದ ರಮ್ಯಶ್ರೀ ಸಿದ್ದಪ್ಪ ಅಣಜಿ, ಲಕ್ಷ್ಮಿ ಅವಣ್ಣ ವಡೇರ್, ರಿತೇಶ್ ಎಂ.ಎಸ್, ಕೌಶಿಕ್ ಶೆಟ್ಟಿ, ಸೋಹಮ್ ಮಾಹದೇವ ಯಲಿಗಾರ, ಶೀತಲ್ ಕುಮಾರ್ ಶೆಟ್ಟಿ, ಸೃಷ್ಠಿ ಶಿವಾಜಿ ನಲವಾಡೆ, ವಿನಯ್ ಗಡ್ಡಿ, ಸೋಮನ್ ಗೌಡ, ಪೃಥ್ವಿ ನಾಗಪ್ಪ ರಾಮಣ್ಣವರ್, ಭರತ್ ಕುಮಾರ್ ನಾಯ್ಕ್ ಕೆ.ಎಂ., ವಿನಯ್ ಸುಕುಮಾರ್ ದಿಬ್ಬದ್, ರಕ್ಷಿತ ರಂಗಪ್ಪ ದಾಸರ್, ದರ್ಶನ್ ಪವಾರ್, ಪ್ರದೀಪ್ ಬಸವಣ್ಣೆಪ್ಪ ಚಲ್ಕೊಪ್ಪ, ತನು ಎಸ್ ಮತ್ತು ಅಲಿಝಾ ಕರಮತ್ತುಲ್ಲಾ ಅವರು ವಿವಿಧ ಮೆಡಿಕಲ್ ಕೋರ್ಸ್ ಗಳಿಗೆ ಪ್ರವೇಶ ಪಡೆಯುವ ಅರ್ಹತೆ ಗಳಿಸಿದ್ದಾರೆ.

    ಪ್ರಥಮ ವರ್ಷದಲ್ಲೇ ಈ ಅಪ್ರತಿಮ ಸಾಧನೆ ತೋರಿದ ವಿದ್ಯಾರ್ಥಿಗಳನ್ನು ಸುಜ್ಞಾನ ಎಜುಕೇಶನಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ರಂಜನ್ ಬಿ. ಶೆಟ್ಟಿ ಅವರು ಅಭಿನಂದಿಸಿದ್ದಾರೆ. ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಿ ಈ ಯಶಸ್ಸಿಗೆ ಕಾರಣರಾದ ಕಾಲೇಜಿನ ಉಪನ್ಯಾಸಕ ವೃಂದವನ್ನು ಆಡಳಿತ ಮಂಡಳಿ ಅಭಿನಂದಿಸಿದೆ.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಕಲ್ಮಾಡಿ ಅಂಗನವಾಡಿ ಎಲ್‌ಕೆಜಿ, ಯುಕೆಜಿ ಉದ್ಘಾಟನೆ

    18/07/2026

    ನೀಟ್ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸಾಧನೆ

    18/07/2026

    ನೀಟ್ ಫಲಿತಾಂಶ: ಅಗ್ರಸ್ಥಾನದಲ್ಲಿ ಜನತಾ ಪಿಯು ಕಾಲೇಜ್ ಹೆಮ್ಮಾಡಿ

    18/07/2026
    Leave A Reply Cancel Reply

    three × one =

    Call us

    Click Here

    Call us

    Call us

    Call us
    Highest Viewed Recently
    • ಕಲ್ಮಾಡಿ ಅಂಗನವಾಡಿ ಎಲ್‌ಕೆಜಿ, ಯುಕೆಜಿ ಉದ್ಘಾಟನೆ
    • ನೀಟ್ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸಾಧನೆ
    • ನೀಟ್ ಫಲಿತಾಂಶ: ಅಗ್ರಸ್ಥಾನದಲ್ಲಿ ಜನತಾ ಪಿಯು ಕಾಲೇಜ್ ಹೆಮ್ಮಾಡಿ
    • ನೀಟ್ ಫಲಿತಾಂಶ: ಸುಜ್ಞಾನ ಪಿಯು ಕಾಲೇಜು ವಿದ್ಯಾರ್ಥಿಗಳ ಅಮೋಘ ಸಾಧನೆ
    • ಜನತಾ ನ್ಯೂ ಇಂಗ್ಲೀಷ್ ಮೀಡಿಯಂ ಶಾಲೆಯಲ್ಲಿ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.