Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಮೂಡ್ಲಕಟ್ಟೆ: ʼವೈಬ್ರೇಷನ್ ವೀಕ್–2026ʼ ಅನ್ನು ʼಸ್ಯಾಂಡಲ್‌ವುಡ್‌ʼ ಎಂಬ ವಿಶೇಷ ಪರಿಕಲ್ಪನೆ
    ಊರ್ಮನೆ ಸಮಾಚಾರ

    ಮೂಡ್ಲಕಟ್ಟೆ: ʼವೈಬ್ರೇಷನ್ ವೀಕ್–2026ʼ ಅನ್ನು ʼಸ್ಯಾಂಡಲ್‌ವುಡ್‌ʼ ಎಂಬ ವಿಶೇಷ ಪರಿಕಲ್ಪನೆ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

    ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ:
    ಇಲ್ಲಿನ ಮೂಡ್ಲಕಟ್ಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕುಂದಾಪುರದ ಎಂಬಿಎ ವಿಭಾಗದ ವತಿಯಿಂದ ಮಂಗಳವಾರ ದಿಂದ ಶುಕ್ರವಾರ ದವರೆಗೆ “ವೈಬ್ರೇಷನ್ ವೀಕ್–2026” ಅನ್ನು “ಸ್ಯಾಂಡಲ್‌ವುಡ್” ಎಂಬ ವಿಶೇಷ ಪರಿಕಲ್ಪನೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.

    Click Here

    Call us

    Click Here

    ಕಾರ್ಯಕ್ರಮದ ಮೊದಲ ದಿನ “ಕವಿರತ್ನ ಕಾಳಿದಾಸ ಬ್ರೇನ್ ಬ್ಯಾಟಲ್” ಕ್ವಿಜ್ ಸ್ಪರ್ಧೆ ಹಾಗೂ “ಸಿಹಿ ಕಹಿ ರುಚಿ” (ಅಗ್ನಿ ರಹಿತ ಅಡುಗೆ) ಸ್ಪರ್ಧೆ ನಡೆಯಿತು.

    ಎರಡನೇ ದಿನ “ಯುವರತ್ನ ಲೀಡರ್‌ಶಿಪ್ ಹಂಟ್” (ಬೆಸ್ಟ್ ಮ್ಯಾನೇಜರ್), “ಪ್ರೆಸ್ ಮೀಟ್ ಪ್ರಸಂಗ” (ಮಾಕ್ ಪ್ರೆಸ್ ಮೀಟ್) ಹಾಗೂ “ವಿಚಿತ್ರ ವೇಷ” (ಮಿಸ್‌ಮ್ಯಾಚ್ ಫ್ಯಾಷನ್ ಶೋ) ಸ್ಪರ್ಧೆಗಳು ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆಯಾಗಿದ್ದವು.

    ಮೂರನೇ ದಿನ “ಯಜಮಾನ ಪ್ರೆಸೆಂಟೇಶನ್ ಲೀಗ್” (ಪವರ್‌ಪಾಯಿಂಟ್ ಪ್ರಸ್ತುತಿ) ಮತ್ತು “ಕಲ್ಪನಾ ರೀಲ್ಸ್” (ರೀಲ್ಸ್ ತಯಾರಿಕೆ) ಸ್ಪರ್ಧೆಗಳು ಯಶಸ್ವಿಯಾಗಿ ನಡೆಯಿತು.

    ಕೊನೆಯ ದಿನ “ಅಷ್ಟರಂಗ ಸಿನಿ ಉತ್ಸವ” ಎಂಬ ತಂಡ ಸ್ಪರ್ಧೆಯಲ್ಲಿ ಗುಂಪು ಗಾಯನ, ಗುಂಪು ನೃತ್ಯ, ಕಿರಿಕ್ ಮಿಮಿಕ್ರಿ ಹಾಗೂ ರೆಟ್ರೋ ಫ್ಯಾಷನ್ ಶೋ ಸ್ಪರ್ಧೆಗಳು ನಡೆದವು. ಎಲ್ಲಾ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು.

    ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಟ್ರೋಫಿ ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು.

    ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸೃಜನಶೀಲತೆ, ಸಂವಹನ ಕೌಶಲ್ಯ ಹಾಗೂ ತಂಡದ ಮನೋಭಾವವನ್ನು ಬೆಳೆಸುವ ಉದ್ದೇಶದಿಂದ ಆಯೋಜಿಸಲಾದ ವೈಬ್ರೇಷನ್ ವೀಕ್–2026 ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

    ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಮಕೃಷ್ಣ ಹೆಗಡೆ , ವಿಭಾಗದ ಮುಖ್ಯಸ್ಥರಾದ ಡಾ. ಸುಚಿತ್ರಾ ಪೂಜಾರಿ, ಇತರ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಸಹಕರಿಸಿದರು.

    Click here

    Click here

    Click here

    Call us

    Call us

    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಡಾ. ಬಿ.ಬಿ. ಹೆಗ್ಡೆ ಕಾಲೇಜು: ದಿ. ವಿಶಾಲಾಕ್ಷಿ ಬಿ. ಹೆಗ್ಡೆ ಅವರ ಸಂಸ್ಮರಣ

    18/07/2026

    ಬೈಂದೂರು: ಸೇವಾ ಸಂಗಮ ಶಿಶು ಮಂದಿರಕ್ಕೆ ಆಟಿಕೆ ಹಾಗೂ ಕಲಿಕಾ ಸಾಮಗ್ರಿಗಳ ಕೊಡುಗೆ

    18/07/2026

    ಕಲ್ಮಾಡಿ ಅಂಗನವಾಡಿ ಎಲ್‌ಕೆಜಿ, ಯುಕೆಜಿ ಉದ್ಘಾಟನೆ

    18/07/2026
    Leave A Reply Cancel Reply

    five × 5 =

    Call us

    Click Here

    Call us

    Call us

    Call us
    Highest Viewed Recently
    • ಡಾ. ಬಿ.ಬಿ. ಹೆಗ್ಡೆ ಕಾಲೇಜು: ದಿ. ವಿಶಾಲಾಕ್ಷಿ ಬಿ. ಹೆಗ್ಡೆ ಅವರ ಸಂಸ್ಮರಣ
    • ಮೂಡ್ಲಕಟ್ಟೆ: ʼವೈಬ್ರೇಷನ್ ವೀಕ್–2026ʼ ಅನ್ನು ʼಸ್ಯಾಂಡಲ್‌ವುಡ್‌ʼ ಎಂಬ ವಿಶೇಷ ಪರಿಕಲ್ಪನೆ
    • ಬೈಂದೂರು: ಸೇವಾ ಸಂಗಮ ಶಿಶು ಮಂದಿರಕ್ಕೆ ಆಟಿಕೆ ಹಾಗೂ ಕಲಿಕಾ ಸಾಮಗ್ರಿಗಳ ಕೊಡುಗೆ
    • ಕಲ್ಮಾಡಿ ಅಂಗನವಾಡಿ ಎಲ್‌ಕೆಜಿ, ಯುಕೆಜಿ ಉದ್ಘಾಟನೆ
    • ನೀಟ್ ಫಲಿತಾಂಶ: ಆಳ್ವಾಸ್ ವಿದ್ಯಾರ್ಥಿಗಳಿಂದ ಅಭೂತಪೂರ್ವ ಸಾಧನೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.