Close Menu
    Facebook X (Twitter) Instagram
    Videos Join us Watch Live
    Facebook X (Twitter) Instagram WhatsApp
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    • ಮುಖಪುಟ
    • ಬೈಂದೂರು
    • ಸುದ್ದಿ
      • ಕುಂದಾಪ್ರ ಸಿಟಿ ಸಮಾಚಾರ
      • ಬೈಂದೂರು
      • ಕೊಲ್ಲೂರು
      • ಕುಂದಾಪುರ
      • ಗಂಗೊಳ್ಳಿ
      • ಅಮಾಸೆಬೈಲು
      • ಶಂಕರನಾರಾಯಣ
      • ಉಡುಪಿ ಜಿಲ್ಲೆ
      • ಹೊರನಾಡ ಕರಾವಳಿಗ
      • ಅಪಘಾತ-ಅಪರಾಧ ಸುದ್ದಿ
    • ವಿಶೇಷ ವರದಿ
    • ಕುಂದಾಪ್ರ ಕನ್ನಡ
    • ವಿಶೇಷ
      • ವ್ಯಕ್ತಿ – ವಿಶೇಷ
      • ಯುವಜನ
      • ಶಿಕ್ಷಣ
      • ಮಹಿಳಾಮಣಿ
      • ಬೆಳಕಾಗೋಣ ಬನ್ನಿ
      • ಸಂದರ್ಶನ
      • ಉದ್ಯೋಗ ಮಾಹಿತಿ
    • ಅಂಕಣ
      • ಅನುಭವದ ಆಳದಿಂದ
      • ಒಡ್ಡೋಲಗ
      • ಮನಸೇ ಕೇಳು
      • ಕಂಡದ್ ಕೇಂಡದ್
      • ಯಡ್ತರೆ ಕಾಲಂ
      • ಕಚಗುಳಿ
    • ಲೇಖನ
      • ವಿಶೇಷ ಲೇಖನ
      • ಪ್ರಚಲಿತ
      • ತನ್ನಿಮಿತ್ತ
      • ವಿಜ್ಞಾನ
      • ಸೋಶಿಯಲ್ ಟಾಕ್
      • ಕಲೆ-ಸಂಸ್ಕೃತಿ
        • ಯಕ್ಷಲೋಕ
        • ರಂಗಭೂಮಿ
        • ಆಟೋಟ
    Kundapra.com ಕುಂದಾಪ್ರ ಡಾಟ್ ಕಾಂKundapra.com ಕುಂದಾಪ್ರ ಡಾಟ್ ಕಾಂ
    Watch Live
    Home » ಕ್ರಿಯೇಟಿವ್ ಪುಸ್ತಕ ಧಾರೆ: ಖ್ಯಾತ ಪತ್ರಕರ್ತ ಅಜಿತ್‌ ಹನುಮಕ್ಕನವರ್ ಭಾಗಿ
    ಊರ್ಮನೆ ಸಮಾಚಾರ

    ಕ್ರಿಯೇಟಿವ್ ಪುಸ್ತಕ ಧಾರೆ: ಖ್ಯಾತ ಪತ್ರಕರ್ತ ಅಜಿತ್‌ ಹನುಮಕ್ಕನವರ್ ಭಾಗಿ

    No Comments
    Facebook Twitter Pinterest LinkedIn WhatsApp Reddit Tumblr Email
    Share
    Facebook Twitter WhatsApp LinkedIn

    Click Here

    Call us

    Call us

    Call us

    Call us

    Click Here

     ಕುಂದಾಪ್ರ ಡಾಟ್‌ ಕಾಂ ಸುದ್ದಿ.
    ಕುಂದಾಪುರ: ಸಾಹಿತ್ಯ, ಓದು, ಯುವ ಮನಸುಗಳನ್ನು ಪುಸ್ತಕದೆಡೆಗೆ ಸೆಳೆಯಬೇಕೆನ್ನುವ ಸದುದ್ದೇಶದಿಂದ ಕ್ರಿಯೇಟಿವ್ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ಪುಸ್ತಕ ಮನೆ ವತಿಯಿಂದ ಕ್ರಿಯೇಟಿವ್ ಪುಸ್ತಕ ಧಾರೆ – 2026 ಮೂರನೆಯ ಆವೃತ್ತಿಯ ಕಾರ್ಯಕ್ರಮ ಕ್ರಿಯೇಟಿವ್ ಪದವಿ ಪೂರ್ವ  ಕಾಲೇಜಿನ ಸಪ್ತಸ್ವರ  ವೇದಿಕೆಯಲ್ಲಿ ಸಂಪನ್ನಗೊಂಡಿತ್ತು.

    Click Here

    Call us

    Click Here

    ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರು ಹಾಗೂ ಮಾಜಿ ಮಂತ್ರಿಗಳಾದ ವಿ.ಸುನಿಲ್ ಕುಮಾರ್  ಅವರು ಕಾರ್ಯಕ್ರಮದ  ಉದ್ಘಾಟನೆ ನೆರವೇರಿಸಿ ಮಾತನಾಡಿ, ಪುಸ್ತಕ ಬೆಳೆಸುವ ಕಾರ್ಯವನ್ನು ಪುಸ್ತಕ ಮನೆ ಮಾಡುತ್ತಿದ್ದು, ಗೂಗಲ್ ವಾಟ್ಸಪ್ ಗಳು ಜ್ಞಾನವನ್ನು ನೀಡಿದರೆ ವಿಶೇಷ ಅನುಭವವನ್ನು ಕೊಡುವ ಕೆಲಸವನ್ನು ಪುಸ್ತಕಗಳು ಮಾಡುತ್ತವೆ. ಪುಸ್ತಕಗಳು ಒಬ್ಬ ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪುಸ್ತಕವನ್ನು ಓದುವ ಅಭ್ಯಾಸವನ್ನು ಇಂದಿನ ಯುವ ಸಮುದಾಯ ಅಳವಡಿಸಿಕೊಳ್ಳುವುದು ಅಗತ್ಯವಾಗಿದೆ ಎಂದು ತಿಳಿಸಿದರು.

    ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕರಾದ ಅಶ್ವತ್ ಎಸ್. ಎಲ್. ಅವರು ಪ್ರಾಸ್ತಾವಿಕ ಮಾತುಗಳನ್ನಾಡುತ್ತ, ಕಿರಿಯ ಬರಹಗಾರರಿಗೆ  ಒಳ್ಳೆಯ ವೇದಿಕೆಯನ್ನು ಕಲ್ಪಿಸಿ ಕೊಡುವುದು ಮತ್ತು ಹಿರಿಯ ಪ್ರಭುತ್ವ ಬರಹಗಾರರ ಬರಹಗಳನ್ನು ಪ್ರಕಟಿಸುವ ಧ್ಯೇಯವನ್ನು ಇಟ್ಟುಕೊಂಡು ಯುವ ಮನಸುಗಳಲ್ಲಿ ಓದುವ ಅಭಿರುಚಿ ಬೆಳೆಸುವುದು ಪುಸ್ತಕಧಾರೆ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ. ಇಲ್ಲಿಯವರೆಗೆ ಒಟ್ಟು ಪುಸ್ತಕ ಮನೆಯ ವತಿಯಿಂದ 104 ಕೃತಿಗಳು ಪ್ರಕಟಗೊಂಡಿವೆ ಎಂದು ಪುಸ್ತಕ ಮನೆ ನಡೆದು ಬಂದ ಹಾದಿಯನ್ನು ವಿವರಿಸುತ್ತಾ ಸರ್ವರನ್ನು ಉದ್ದೇಶಿಸಿ ಸ್ವಾಗತಿಸಿದರು.

    ನಾಡಿನ ಖ್ಯಾತ ಪತ್ರಕರ್ತರಾದ ಅಜಿತ್ ಹನುಮಕ್ಕನವರ್ ವ್ಯಕ್ತಿಯಲ್ಲಿ ಮಾತನಾಡುವ ವಿಷಯಗಳು ಮತ್ತು ಅವನು ವ್ಯಕ್ತಪಡಿಸುವ ಶಬ್ದ ಭಂಡಾರವಿದ್ದಾಗ ಮಾತ್ರ ಆತ್ಮವಿಶ್ವಾಸ ಬರುವುದು ಆ ಆತ್ಮವಿಶ್ವಾಸವನ್ನು ನೀಡುವ ಕೆಲಸ ಪುಸ್ತಕಗಳಿಂದ ಸಾಧ್ಯವಾಗುತ್ತದೆ. ನಮಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕೆಂಬುದನ್ನು ಹೇಳುವುದೇ ಶಿಕ್ಷಣ ಎಂದು ತಿಳಿಸಿದರು.

     ಪುಸ್ತಕ ಮನೆ ವತಿಯಿಂದ 25 ಕೃತಿಗಳು ಲೋಕಾರ್ಪಣೆ:
    ಪುಸ್ತಕಧಾರೆ ಕಾರ್ಯಕ್ರಮದಲ್ಲಿ ನಾಡಿನ ಶ್ರೇಷ್ಠ ಬರಹಗಾರರಿಂದ ರಚಿತವಾದ ಸುಮಾರು 25 ಕೃತಿಗಳು ಲೋಕಾರ್ಪಣೆಗೊಂಡವು, ಹೊಸ ಪಟ್ಟಣ, ಖ್ಯಾತ ಶಿಕ್ಷಣ ಸಿದ್ದಾಂತಿಗಳು, ಪೀಯೂಷಾಬ್ರುತಮೃತ, ಸುಭಾಷಿತ ಸಾಗರ, ಬದುಕಿನ ಕನ್ನಡಿಯಲ್ಲಿ, ಭಾವಮುದ್ರೆ,ದೇವಯಾನ, ತರ್ಕಕ್ಕೆ ನಿಲುಕದ್ದು, ಸಮುದ್ರ ಮಾತಾಡಿತು, ನಿತ್ಯದ ನೋಟಗಳಿಗೆ ನಿರುತ್ತರ, ಅಪ್ಪನ ಅಂಗಡಿ, ಚಿಗುರು ಚಿಗುಟಿದ ಪೇಸ್ಬುಕ್, ಗೆಲುವಿನ ದಾರಿ, ನದಿಯಂಚಿನ ನಡಿಗೆ, ಚಂದನವ ಕಡಿದು ತೇದೊಡೆ , ಜಗತ್ತಿನ ಪ್ರಸಿದ್ಧ ಮಕ್ಕಳ ಕಥೆಗಳು, ಮೌನ ಈ ಮಳೆಬಿಲ್ಲು, ನಂಬಿಕೆ, ಗೆಲುವಿನ ಏಣಿ, ಅಂತರಂಗ ಯಾನ, ಮೌಲ್ಯದರಿವಿನ ಹೊಂಬೆಳಕು, ನೀಲಿ, ಒಲವೇ ಹಾಡಾಗಿದೆ, ಸಾಹಿತ್ಯ ವಿಸ್ಮಯ ಮತ್ತು ರಣರಂಗ ಪುಸ್ತಕಗಳು ಲೋಕಾರ್ಪಣೆಗೊಂಡವು.

    Click here

    Click here

    Click here

    Call us

    Call us

    ಈ ಸಂದರ್ಭದಲ್ಲಿ ಶಶಿಧರ್ ಹಾಲಾಡಿಯವರ ನದಿ ದಾಟಿ ಬಂದವರು ಪುಸ್ತಕಕ್ಕೆ ಉತ್ತಮ ಪುಸ್ತಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

    ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯದ ಅಧ್ಯಕ್ಷರಾದ ಡಾ. ಧನಂಜಯ್ ಕುಂಬ್ಳೆ, ಶಿಕ್ಷಣ ತಜ್ಞರಾದ ಡಾ. ಮಹಾಬಲೇಶ್ವರ ರಾವ್ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ  ಸಂಸ್ಥಾಪಕರುಗಳಾದ ವಿದ್ವಾನ್ ಗಣಪತಿ ಭಟ್, ಆದರ್ಶ ಎಂ. ಕೆ. ಡಾ. ಗಣನಾಥ ಶೆಟ್ಟಿ, ಗಣಪತಿ ಭಟ್ ಕೆ .ಎಸ್. ವಿಮಲ್ ರಾಜ್, ಅಮೃತ್ ಯು ರೈ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಲೋಹಿತ್ ಎಸ್.ಕೆ. ನಡೆಸಿಕೊಟ್ಟರು.

    ಸಂವಾದ:
    ಯುವಶಕ್ತಿ ಸಾಹಿತ್ಯ ಮತ್ತು ಮಾಧ್ಯಮ: ರಾಷ್ಟ್ರೀಯತೆಯ ಹೊಸ ಆಯಾಮಗಳು ಎಂಬ ವಿಷಯದ ಕುರಿತು ಅಜಿತ್ ಹನುಮಕ್ಕನವರ್ ರೊಂದಿಗೆ ಅವಿನಾಶ್ ಕಾಮತ್ ಸಂವಾದವನು ನಡೆಸಿಕೊಟ್ಟರು.

    ಭಾವ ನಮನ:
    ಕನ್ನಡದ ಕವಿ ಶ್ರೇಷ್ಠರ ಅಮರ ಗೀತೆಗಳ ಸಂಗೀತ ಯಾನ ಭಾವ ನಮನ ಕಾರ್ಯಕ್ರಮವು ನಾಡಿನ ಹೆಸರಾಂತ ಗಾಯಕರಿಂದ ನಡೆಯಿತು.

    ಈ ಸಂದರ್ಭದಲ್ಲಿ ಉಪನ್ಯಾಸಕ ವರ್ಗದವರು, ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಕಾರ್ಕಳದ ಸಾಹಿತ್ಯ ಅಭಿಮಾನಿಗಳು, ಉಪಸ್ಥಿತರಿದ್ದರು.

    kundapura
    Share. Facebook Twitter Pinterest LinkedIn Tumblr Telegram Email
    ನ್ಯೂಸ್ ಬ್ಯೂರೋ
    • Website
    • Tumblr

    Related Posts

    ಮಳೆ ಹಾಗೂ ಉತ್ತಮ ಬೆಳೆಗಾಗಿ ಕೋಟೇಶ್ವರದ ಕೋಟಿತೀರ್ಥ ಸರೋವರದಲ್ಲಿ ಪರ್ಜನ್ಯ ಜಪ

    20/07/2026

    ಸರಕಾರಿ ಪ್ರೌಢಶಾಲೆ ಗುಂಡ್ಮಿ ಸಾಸ್ತಾನ: ಇಂಟ್ರ್ಯಾಕ್ಟ್‌ ಕ್ಲಬ್‌ ಪದಪ್ರದಾನ

    20/07/2026

    ಗಂಗೊಳ್ಳಿ ಎಸ್.ವಿ. ಕಾಮರ್ಸ್ ಕ್ಲಬ್‌ನ ದ್ವಿತೀಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ 

    20/07/2026
    Leave A Reply Cancel Reply

    one × one =

    Call us

    Click Here

    Call us

    Call us

    Call us
    Highest Viewed Recently
    • ಮಳೆ ಹಾಗೂ ಉತ್ತಮ ಬೆಳೆಗಾಗಿ ಕೋಟೇಶ್ವರದ ಕೋಟಿತೀರ್ಥ ಸರೋವರದಲ್ಲಿ ಪರ್ಜನ್ಯ ಜಪ
    • ಸರಕಾರಿ ಪ್ರೌಢಶಾಲೆ ಗುಂಡ್ಮಿ ಸಾಸ್ತಾನ: ಇಂಟ್ರ್ಯಾಕ್ಟ್‌ ಕ್ಲಬ್‌ ಪದಪ್ರದಾನ
    • ಗಂಗೊಳ್ಳಿ ಎಸ್.ವಿ. ಕಾಮರ್ಸ್ ಕ್ಲಬ್‌ನ ದ್ವಿತೀಯ ವಾರ್ಷಿಕ ಚಟುವಟಿಕೆಗಳ ಉದ್ಘಾಟನೆ 
    • ಅಂಡರ್-17 ರಾಷ್ಟ್ರೀಯ ಚೆಸ್ ಚಾಂಪಿಯನ್‌ಶಿಪ್‌: ಆರಾಧ್ಯ ಎಸ್. ಶೆಟ್ಟಿ ಆಯ್ಕೆ
    • ಜು.29 ರಿಂದ 48 ದಿನಗಳ ಕಾಲ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರ ಚಾತುರ್ಮಾಸ ವೃತಾಚರಣೆ – ಪೂರ್ವಭಾವಿ ಸಭೆ

    © 2026 ThemeSphere. Designed by ThemeSphere.
    • About portal
    • Our team
    • Privacy policy

    Type above and press Enter to search. Press Esc to cancel.